ಬೆಂಗಳೂರು:ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣ ದಿನೇ ದಿನೆ ಕಗ್ಗಂಟಾಗುತ್ತಿದೆ. ಒಮ್ಮೆ ಜೆಡಿಎಸ್ ಸುತ್ತ, ಮತ್ತೊಮ್ಮೆ ಬಿಜೆಪಿ ನಾಯಕರ ಸುತ್ತ, ಮುಗುದೊಮ್ಮೆ ಕಾಂಗ್ರೆಸ್ ನಾಯಕರತ್ತ ಬೆರಳು ತೋರಿಸುವ ಮೂಲಕ ಇಡೀ ಪ್ರಕರಣ ದಿಕ್ಕುತೋಚದ ರೀತಿಯಲ್ಲಿ ಸಾಗುತ್ತಿದೆ.
ದಿನಕ್ಕೊಂದು ಬಣ್ಣ, ಕ್ಷಣಕ್ಕೊಂದು ತಿರುವು ಪಡೆಯುತ್ತ ಪ್ರಕರಣ ಎತ್ತ ಸಾಗುತ್ತಿದೆ ಎಂಬುದು ಯಾರಿಗೂ ಊಹಿಸದಂತಾಗಿದೆ. ಹಾಗಾಗಿ ಎರಡು ದಿನಗಳಿಂದ ಪ್ರಕರಣದ ಬಗ್ಗೆ ರಾಜಕೀಯ ಪಕ್ಷಗಳ ನಾಯಕರು ಮೌನಕ್ಕೆ ಶರಣಾಗಿದ್ದಾರೆ, ಪರಸ್ಪರ ಕದನ ವಿರಾಮ ೋಷಿಸಿಕೊಂಡಿದ್ದಾರೆ.
ಇನ್ನು ಕುಟುಂಬದ ಪ್ರತಿಷ್ಠೆ, ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಿರುವ ಈ ಪ್ರಕರಣದಿಂದ ಹೇಗೆ ಪಾರಾಗಬೇಕೆಂಬ ಚಿಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಹೈರಾಣು ಮಾಡಿದೆ.
ಸಂತ್ರಸ್ತೆಯ ಕಿಡ್ನಾಪ್ ಪ್ರಕರಣದಲ್ಲಿ ಜೈಲುಪಾಲಾಗಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಬೇಲ್ ದೊರೆಯಲು ಕುಮಾರಸ್ವಾಮಿ ನಿರಂತರ ಹೋರಾಟ ಮಾಡಿದರು.
ಮೂರು ದಿನದಿಂದ ಮನೆಯಲ್ಲೇ ಬೀಡು ಬಿಟ್ಟಿರುವ ಕುಮಾರಸ್ವಾಮಿ ರಾಜಕೀಯ ಅಸ್ಥಿತ್ವದ ಉಳಿವು ಹಾಗೂ ಕುಟುಂಬದ ಮರ್ಯಾದೆ ಕಾಪಾಡಲು ಲಭ್ಯವಿರುವ ಎಲ್ಲ ಮಾರ್ಗೋಪಾಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.
ಹಿರಿಯ ರಾಜಕಾರಣಿಗಳು, ಹಿತೈಷಿಗಳು, ಪಕ್ಷದ ಮುಖಂಡರ ಜತೆ ಸರಣಿ ಸಭೆ ನಡೆಸುತ್ತಿದ್ದಾರೆ. ಜತೆಗೆ ಕುಟುಂಬದ ದುಃಖವನ್ನು ತಣಿಸುವ ಕೆಲಸದಲ್ಲೂ ನಿರತರಾಗಿದ್ದಾರೆ.
ರೇವಣ್ಣಗೆ ಬೇಲ್ ಸಿಕ್ಕಿರುವುದರಿಂದ ಒಂದು ಹಂತದ ಕಾನೂನು ಹೋರಾಟದಲ್ಲಿ ಕುಮಾರಸ್ವಾಮಿಗೆ ಜಯ ಸಿಕ್ಕಂತಾಗಿದೆ. ಇನ್ನೇನಿದ್ದರೂ ಪ್ರಜ್ವಲ್ ರೇವಣ್ಣಗೆ ಎಸ್‌ಐಟಿ ರೆಡ್ ಕಾರ್ನ್‌ರ್ ನೋಟಿಸ್ ಕೊಡುವ ಮುನ್ನವೇ ಅವರನ್ನು ವಾಪಸ್ ಕರೆಸಿ ಎಸ್‌ಐಟಿ ಮುಂದೆ ಹಾಜರಾಗುವಂತೆ ಮಾಡುವುದು ಮತ್ತು ಕಾನೂನು ಹೋರಾಟ ಮಾಡುವುದರ ಕಡೆಗೆ ಕುಮಾರಸ್ವಾಮಿ ಪ್ರಯತ್ನ ಮುಂದುವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಕ್ಷದ ನಾಯಕರು ಕೂಡ ಈ ಪ್ರಕರಣವನ್ನು ಎದುರಿಸುವ ಕುರಿತು ಚರ್ಚಿಸುತ್ತಿದ್ದಾರೆ. ಇಂತಹ ಕ್ಲಿಷ್ಟ ಸನ್ನಿವೇಶದಲ್ಲಿ ಯಾರೂ ಅಪಸ್ವರ, ಅಸಮಾಧಾನ ವ್ಯಕ್ತಪಡಿಸದೆ ಒಗ್ಗಟ್ಟಿನಿಂದ ಪರಿಸ್ಥಿತಿಯನ್ನು ಎದುರಿಸಲು, ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ಹೋರಾಡಬೇಕು ಎಂದು ತೀರ್ಮಾನಿಸಿದ್ದಾರೆ.
ಜೈಲಿನಲ್ಲಿ ರೇವಣ್ಣ ಅವರನ್ನು ಭೇಟಿ ಮಾಡಿದ್ದೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅವರು ಈಗ ಆರಾಮವಾಗಿದ್ದಾರೆ. ಯಾವುದೇ ತಪ್ಪು ಮಾಡದೇ ಪ್ರಕಣದಲ್ಲಿ ಸಿಲುಕಿಸಿದ್ದಾರೆ. ಜೈಲಿಗೆ ಬರುವಂತಾಯಿತು ಎಂದು 10 ನಿಮಿಷ ಕಣ್ಣೀರು ಸುರಿಸಿದರು. ದೇವರ ಮೇಲೆ ಅಪಾರ ಭಕ್ತಿ ಇಟ್ಟುಕೊಂಡವರು. ನನಗೇ ಇಂಥ ಸ್ಥಿತಿ ಬಂತಲ್ಲ ಎಂದು ನೊಂದುಕೊಂಡಿದ್ದಾರೆ.-ಜಿ.ಟಿ.ದೇವೇಗೌಡ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 2 =
Remember me
