ಬೆಂಗಳೂರು:ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡರ ಪುತ್ರ ಹೆಚ್​.ಡಿ.ರೇವಣ್ಣರನ್ನ ಅರೆಸ್ಟ್ ಮಾಡಿದ್ದಾರೆ. ಲೈಂಗಿಕ ದೌರ್ಜನ್ಯದ ಆರೋಪ ಮತ್ತು ಮಹಿಳೆಯ ಕಿಡ್ನ್ಯಾಪ್ ಸುಳಿಯಲ್ಲಿ ಸಿಲುಕಿದ್ದ ರೇವಣ್ಣ ಇದೀಗ ಎಸ್​ಐಟಿ ಬಲೆಗೆ ಬಿದ್ದಿದ್ದಾರೆ. ಸದ್ಯ ಈ ವಿಚಾರವಾಗಿ ಕಾಂಗ್ರೆಸ್​ ಪ್ರತಿಕ್ರಿಯಿಸಿದ್ದು ಮಹಿಳೆಯರನ್ನು ಕಾಡಿಸಿ, ಪೀಡಿಸಿ, ಅಪಹರಿಸಿದ್ದರಲ್ಲಿ ಪ್ರಮುಖ ಆರೋಪಿ ಎಂದು ಹೇಳಿದೆ.
ಇದನ್ನೂ ಓದಿ:ಕಾಶ್ಮೀರದಲ್ಲಿ ವಾಯುಪಡೆಯ ವಾಹನದ ಮೇಲೆ ಉಗ್ರರ ದಾಳಿ, ಐವರು ಯೋಧರಿಗೆ ಗಾಯ
ಮಾಜಿ ಸಚಿವ ರೇವಣ್ಣ ಬಂಧನ ಕುರಿತು ಕಾಂಗ್ರೆಸ್​” ಮೋದಿಯವರ ಪ್ರಜ್ವಲ ಗ್ಯಾರಂಟಿಯಡಿಯಲ್ಲಿ ಮೊದಲ ಬಂಧನ ಆಗಿದೆ. ಈ ಬಂಧನ ಜನುಮಜನುಮದ ಅನುಬಂಧನ..? ಮಹಿಳಾ ಪೀಡಕರು, ಮಹಿಳಾ ಅಪಹರಣಕಾರರು, ಅತ್ಯಾಚಾರಿಗಳನ್ನು ಕಂಡರೇ ಮೋದಿಗೆ ಎಲ್ಲಿಲ್ಲದ ಪ್ರೀತಿ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರಜ್ವಲ್ ರೆವಣ್ಣ ಜೊತೆಗೆ ಎನ್‍ಡಿಎ ಮೈತ್ರಿಕೂಟದ ಸ್ಟಾರ್ ಪ್ರಚಾರಕ ರೇವಣ್ಣ ಅವರೂ ಮಹಿಳೆಯರನ್ನು ಕಾಡಿಸಿ, ಪೀಡಿಸಿ, ಅಪಹರಿಸಿದವರಲ್ಲಿ ಪ್ರಮುಖ ಆರೋಪಿ. ಮಹಿಳಾ ಪೀಡಕ ಆರೋಪಿಯ ಕೈಯನ್ನು ಗಟ್ಟಿಯಾಗಿ ಹಿಡಿದಿರುವ ಮೋದಿಯವರು ದೇಶಕ್ಕೆ ಯಾವ ಸಂದೇಶ ಕೊಡಲು ಹೊರಟಿದ್ರು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
"ಮೋದಿಯವರ ಪ್ರಜ್ವಲ ಗ್ಯಾರಂಟಿ"ಯಲ್ಲಿ ಮೊದಲ ಬಂಧನ!
ಈ "ಬಂಧನ" ಯಾವ ಜನುಮದ ಅನುಬಂಧನ?!
ಮಹಿಳಾ ಪೀಡಕರು, ಮಹಿಳೆಯ ಅಪಹರಣಕಾರರು, ಅತ್ಯಾಚಾರಿಗಳನ್ನು ಕಂಡರೆ ಮೋದಿಯವರಿಗೆ ಎಲ್ಲಿಲ್ಲದ ಪ್ರೀತಿ.
ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರಜ್ವಲ್ ರೇವಣ್ಣನೊಂದಿದೆ NDA ಮೈತ್ರಿಕೂಟದ ಸ್ಟಾರ್ ಪ್ರಚಾರಕ ರೇವಣ್ಣ ಅವರೂ ಮಹಿಳೆಯರನ್ನು ಕಾಡಿಸಿ, ಪೀಡಿಸಿ,…pic.twitter.com/yeXVMzJmKn
— Karnataka Congress (@INCKarnataka)May 4, 2024

ಬಂಧನದ ಬೆನ್ನಲ್ಲೇ ಎಕ್ಸ್‌ ಮಾಡಿ, ಮಹಿಳೆಯರ ಮಾನ ಪ್ರಾಣ ಘನತೆ ಎತ್ತಿ ಹಿಡಿಯುವಲ್ಲಿ ನಮ್ಮ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಹೆಚ್‍ಡಿ ರೇವಣ್ಣರನ್ನು ಬಂಧಿಸಿದ ಎಸ್‍ಐಟಿ ತಂಡ ಮಹಿಳಾ ಪೀಡನೆಯ ವಿಕೃತ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿದೆ. ಮಹಿಳೆಯರ ರಕ್ಷಣೆಗೆ ನಮ್ಮ ಸರ್ಕಾರದ ಬದ್ಧತೆ ಅಚಲವಾಗಿರುತ್ತದೆ ಎಂದು ಕಾಂಗ್ರೆಸ್ ತಿಳಿಸಿದೆ.
ಮಹಿಳೆಯರ ಮಾನ, ಪ್ರಾಣ, ಘನತೆ ಎತ್ತಿ ಹಿಡಿಯುವಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ ನಮ್ಮ ಸರ್ಕಾರ.
ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಹೆಚ್.ಡಿ ರೇವಣ್ಣರನ್ನು ಬಂಧಿಸಿದ SIT ತಂಡ ಮಹಿಳಾ ಪೀಡನೆಯ ವಿಕೃತ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿದೆ.
ಮಹಿಳೆಯರ ರಕ್ಷಣೆಗೆ ನಮ್ಮ ಸರ್ಕಾರದ ಬದ್ಧತೆ ಆಚಲವಾಗಿರುತ್ತದೆ.
— Karnataka Congress (@INCKarnataka)May 4, 2024

ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ಬಂಧನ: ಸಿಐಡಿ ಕಚೇರಿಗೆ ಬಿಗಿ ಭದ್ರತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
