ಕೊಪ್ಪಳ:ತಹಸೀಲ್ದಾರ್​ ಕಚೇರಿಯೊಂದು ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟದಲ್ಲಿ ಸಂಭ್ರಮದ ಬೆನ್ನಿಗೇ ಶೋಕ ಆವರಿಸಿದೆ. ಮಾತ್ರವಲ್ಲ, ಅಲ್ಲಿನ ನೌಕರನೊಬ್ಬನ ಪಾಲಿಗೆ ಅದೇ ಕೊನೇ ಊಟ, ಕೊನೆಯ ಕೂಟ ಎಂಬಂತಾಗಿದೆ.
ಕೊಪ್ಪಳ ತಾಲೂಕಿನ ಬಸಾಪುರ ಗ್ರಾಮದ ಬಳಿ ಇರುವ ರೆಸಾರ್ಟ್​ವೊಂದರಲ್ಲಿ ಈ ದುರಂತ ಸಂಭವಿಸಿದೆ. ಕೊಪ್ಪಳ ತಹಸೀಲ್ದಾರ ಕಚೇರಿ ವತಿಯಿಂದ ಇಲ್ಲಿ ವಾರ್ಷಿಕ ಕೂಟ ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಹಾಜರಾಗಿದ್ದ ಕಂದಾಯ ಇಲಾಖೆಯ ಎಸ್​ಡಿಎ, ರಾಯಚೂರು ಮೂಲದ ತಾಯಪ್ಪ (26) ಎಂಬಾತ ಸಾವಿಗೀಡಾಗಿದ್ದಾನೆ.
ತಹಸೀಲ್ದಾರ್ ಕಚೇರಿ ವತಿಯಿಂದ ಭಾನುವಾರ ಇಲ್ಲಿ ವಾರ್ಷಿಕ ಕ್ರೀಡಾಕೂಟದ ಸಲುವಾಗಿ ಸಂತೋಷ ಕೂಟ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಊಟ ಮುಗಿದ ಬಳಿಕ ಸ್ವಿಮ್ಮಿಂಗ್​ಪೂಲ್​ಗೆ ಬಿದ್ದು ತಾಯಪ್ಪ ಸಾವಿಗೀಡಾಗಿದ್ದಾನೆ.
ತಾಯಪ್ಪ ಕೊಪ್ಪಳದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಪತಿಯ ಸಾವಿನಿಂದ ಪತ್ನಿ ದಿಗ್ಭ್ರಾಂತಳಾಗಿದ್ದು, ಕೊಪ್ಪಳ ಜಿಲ್ಲೆ ಮುನಿರಾಬಾದ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಅನ್ನಭಾಗ್ಯಕ್ಕೆ ಮತ್ತೆ ವಕ್ಕರಿಸಿದ ಸರ್ವರ್ ಭೂತ: ಪಡಿತರ ಪಡೆಯಲು ಕಾರ್ಡ್‌ದಾರರ ಪರದಾಟ

ದೇವರ ಹುಂಡಿಯಲ್ಲಿ ಸಿಕ್ಕಿತು ವಿಕೃತ ಕೋರಿಕೆಯ ಹರಕೆ ಚೀಟಿ; ನರಳಿ ನರಳಿ ಸಾಯಲಿ ಎಂದು ಬೇಡಿಕೆ!

ವೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 19 =
Remember me
