ಮುಖ್ಯಾಂಶ:
ವ್ಯಾಪಕವಾಗಿರುವ ನಗರೀಕರಣದಿಂದ ರಾಜ್ಯದ ಮಹಾನಗರಗಳಲ್ಲಿ ಮೂಲ ಸೌಕರ್ಯ ಒದಗಿಸಲು ತೆರಿಗೆಯೇತರ ಆದಾಯ ವೃದ್ಧಿಸಿಕೊಳ್ಳಲು ಸರ್ಕಾರ ಕಂಡುಕೊಂಡ ಮಾಗೋಪಾಯದ ಪ್ರಯತ್ನ ಫಲಕೊಡದೇ ಅರ್ಧಕ್ಕೆ ನಿಂತಿದ್ದು, ನಿರೀಕ್ಷೆ ತಲೆಕೆಳಗಾಗಿದೆ. ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ವಿಧೇಯಕವನ್ನು ಫೆಬ್ರವರಿಯಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಿದ್ದ ಸರ್ಕಾರ ಪ್ರತಿಪಕ್ಷದ ವಿರೋಧದದ ನಡುವೆ ಅಂಗೀಕಾರ ಪಡೆದುಕೊಂಡಿತ್ತು. ಬಳಿಕ ರಾಜ್ಯಪಾಲರ ಸಹಿಗೆ ಕಳುಹಿಸಲಾಗಿತ್ತು. ರಾಜ್ಯಪಾಲರು ಈ ವಿಧೇಯಕದ ಬಗ್ಗೆ ಕೆಲ ಆಕ್ಷೇಪಣೆ ಎತ್ತಿದ್ದು, ಸ್ಪಷ್ಟೀಕರಣ ಕೇಳಿದ್ದಾರೆ. ಆದರೆ ಸರ್ಕಾರದ ಕಡೆಯಿಂದ ಸಮರ್ಥನೀಯ ಉತ್ತರ ಕೊಡಲು ಸಾಧ್ಯವಾಗುತ್ತಿಲ್ಲ.
ವಿಧೇಯಕ ತಂದ ಉದ್ದೇಶ, ಬೆಂಗಳೂರು ಸೇರಿ ರಾಜ್ಯದ ಮಹಾನಗರಗಳ ವ್ಯಾಪ್ತಿಯಲ್ಲಿನ ಬಹುಮಹಡಿ ಕಟ್ಟಡಗಳಲ್ಲಿ ಹೆಚ್ಚುವರಿ ಶುಲ್ಕವನ್ನು ಕಟ್ಟಿ ಮಿತಿಗಿಂತ ಹೆಚ್ಚುವರಿ ಅಂತಸ್ತು ನಿರ್ವಿುಸಲು ಅವಕಾಶ ನೀಡಲು ಅವಕಾಶ ಕಲ್ಪಿಸಲಾಗಿದೆ. ಕಟ್ಟಡಗಳ ಅಭಿವೃದ್ಧಿಗೆ ಅನುಮತಿ ನೀಡುವ ಸಕ್ಷಮ ಪ್ರಾಧಿಕಾರವು ಅನುಮೋದಿತ ಮಾಸ್ಟರ್ ಪ್ಲಾನ್​ನ ವಲಯ ನಿಯಮಗಳಿಗೆ ಅನುಸಾರವಾಗಿ ಪ್ರೀಮಿಯಮ್ ನೆಲದ ವಿಸ್ತೀರ್ಣದ ಅನುಪಾತವನ್ನು (ಎಫ್​ಎಆರ್) ಹೆಚ್ಚುವರಿ ನೆಲ ವಿಸ್ತೀರ್ಣ ಅನುಪಾತವಾಗಿ ಅನುಮತಿ ನೀಡಲು ಅವಕಾಶ ಕಲ್ಪಿಸಲಾಗುತ್ತಿದೆ. ಮಾರ್ಗಸೂಚಿ ದರದ ಶೇ.40 ಶುಲ್ಕವನ್ನು ಸ್ಥಳೀಯ ಯೋಜನಾ ಪ್ರಾಧಿಕಾರ ಅಥವಾ ನಗರ ಸ್ಥಳೀಯ ಸಂಸ್ಥೆಗಳಿಗೆ ಪಾವತಿಸುವ ಮೂಲಕ ಬಹುಮಹಡಿ ಕಟ್ಟಡಗಳಲ್ಲಿ ಹೆಚ್ಚುವರಿ ಅಂತಸ್ತು ನಿರ್ವಿುಸಬಹುದು ಹಾಗೂ ಎಫ್​ಎಆರ್​ಗಳನ್ನು ಬೇರೆಯವರಿಗೆ ಮಾರಾಟ ಮಾಡುವ ಅವಕಾಶವನ್ನೂ ಮಸೂದೆಯಲ್ಲಿ ಕಲ್ಪಿಸಲಾಗಿತ್ತು ಪ್ರಿಮಿಯಂ ಎಫ್​ಎಆರ್ ಮಿತಿ ಶೇ.0.4ಕ್ಕೆ ನಿಗದಿಪಡಿಸಲಾಗಿದೆಯಲ್ಲದೇ ಟಿಡಿಆರ್ (ಟ್ರಾನ್ಸಫರಬಲ್ ಡೆವಲಪ್​ವೆುಂಟ್ ರೈಟ್ಸ್) ಬಳಸಿ ನಿರ್ವಿುಸಿರುವ ಕಟ್ಟಡದ ಎಫ್​ಎಆರ್ ಮಿತಿ ಶೇ.0.6 ಮೀರುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಉದ್ದೇಶವೇನಿತ್ತು?:ಹೆಚ್ಚುವರಿ ಅಂತಸ್ತು ಕಟ್ಟಡಲು ಸಿದ್ಧವಾಗಿರು ವವರು ಈ ಅವಕಾಶ ಬಳಸಿಕೊಳ್ಳುವುದರಿಂದ ಸರ್ಕಾರಕ್ಕೆ ದೊಡ್ಡ ಪ್ರಮಾಣದಲ್ಲಿ ಆದಾಯ ಹರಿದುಬರಲಿದೆ. ಸ್ಥಳೀಯ ಸಂಸ್ಥೆಗಳ ಆದಾಯ ಹೆಚ್ಚಾಗುತ್ತದೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗ ವಾಗುತ್ತದೆ. ಎಫ್​ಎಆರ್​ಗಳ ಮಾರಾಟದಿಂದ ಸಂಗ್ರಹವಾಗುವ ಶುಲ್ಕವನ್ನು ಭೂಸ್ವಾಧೀನ, ಮೂಲಸೌಕರ್ಯ ಅಭಿವೃದ್ಧಿಗೆ ಬಳಸಿಕೊಳ್ಳಬಹುದು ಎಂಬುದು ಸರ್ಕಾರದ ವಾದವಾಗಿದೆ.
ನಿವೇಶನದ ಅಳತೆ ಮತ್ತು ಮುಂದಿರುವ ರಸ್ತೆಯ ಅಳತೆ ಮೇಲೆ ಇಂತಿಷ್ಟು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಬಹುದು ಎಂದು ಅಳತೆ ಮಾಡಿ ಅನುಮತಿ ನೀಡಲಾಗುತ್ತಿತ್ತು. ಈ ಮಸೂದೆಯಿಂದಾಗಿ ಕಟ್ಟಡ ನಿರ್ವಿುಸುವವರು ಪ್ರಿಮಿಯಂ ಎಫ್​ಎಆರ್​ಗಳನ್ನು ಖರೀದಿಸಿ, ಕಟ್ಟಡದ ನಿವೇಶನದ ಅಳತೆಗಿಂತ ಹೆಚ್ಚುವರಿ ಅಂತಸ್ತುಗಳನ್ನು ನಿರ್ವಿುಸಿಕೊಳ್ಳಲು ಅವಕಾಶ ಸಿಗಲಿದೆ. ವಿಪರೀತ ನಗರೀಕರಣದಿಂದ ಮಹಾನಗರಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಇದರ ಲಾಭವನ್ನೂ ಪಡೆಯುವುದು, ಅವಕಾಶ ವಿಸ್ತರಿಸುವ ಆಲೋಚನೆ ಸರ್ಕಾರದ್ದು.
ವ್ಯಾಪಕ ಆದಾಯ:ಈ ಎಫ್​ಆರ್​ಎ ಕ್ರಮದಿಂದ ಸ್ಥಳೀಯ ಸಂಸ್ಥೆ ಮುಖೇನ ಸರ್ಕಾರಕ್ಕೆ ವಾರ್ಷಿಕ ಕನಿಷ್ಠವೆಂದರೂ 6-7 ಸಾವಿರ ಕೋಟಿ ರೂ.ಗಿಂತ ಅಧಿಕಾರ ಆದಾಯ ನಿರೀಕ್ಷಿಸಲಾಗಿದೆ. ಇನ್ನೊಂದೆಡೆ ರಿಯಲ್ ಎಸ್ಟೇಟ್ ಉದ್ಯಮ ಸರ್ಕಾರದಿಂದ ಅಂತಿಮ ಆದೇಶ ಬರುವುದನ್ನು ಕಾಯುತ್ತಲಿತ್ತು. ಎಫ್​ಆರ್​ಎನಿಂದ ರಿಯಲ್​ಎಸ್ಟೇಟ್ ಉದ್ಯಮ ಹಾಗೂ ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ಹೆಚ್ಚಿನ ಅನುಕೂಲ ನಿರೀಕ್ಷಿಸಲಾಗಿದೆ.
ರಾಜಭವನದ ಆಕ್ಷೇಪಣೆ
ಎಫ್​ಎಆರ್ ಪದ್ಧತಿ ಜಾರಿಗೆ ತಂದರೆ ಹಾಲಿ ಚಾಲ್ತಿಯಲ್ಲಿರುವ ಟಿಡಿಆರ್ ಭವಿಷ್ಯವೇನು ಎಂದು ರಾಜಭವನ ಪ್ರಶ್ನೆ ಮಾಡಿದೆ. ಸರ್ಕಾರವು ತನ್ನ ಯೋಜನೆಗಳಿಗೆ ಜಾಗ ಬಳಸಿಕೊಂಡ ಸಂದರ್ಭದಲ್ಲಿ ಪರಿಹಾರದ ಬಾಬ್ತು ಹಣ ನೀಡುವ ಬದಲು ಭಾಗಶಃ ಟ್ರಾನ್ಸ್​ಫರಬಲ್ ಡೆವಲಪ್​ವೆುಂಟ್ ರೈಟ್ಸ್ (ಟಿಡಿಆರ್) ನೀಡುತ್ತಿದೆ. ಈ ಹಕ್ಕನ್ನು ಅಗತ್ಯ ಇರುವ ಭೂ ಮಾಲಿಕ ಮಾರಾಟ ಮಾಡಿ ನಗದೀಕರಿಸಿಕೊಳ್ಳಬಹುದು, ಅದನ್ನು ಖರೀದಿಸಿದವರು ಹೆಚ್ಚುವರಿ ಮಹಡಿ ಕಟ್ಟಲು ಬಳಸಬಹುದು. ಇನ್ನೊಂದು ಆಕ್ಷೇಪಣೆ ಎಂದರೆ ಯಾವ ಆಧಾರದ ಮೇಲೆ ಮಾರ್ಗಸೂಚಿ ದರದ ಶೇ.40 ಶುಲ್ಕ ಕಟ್ಟಬೇಕೆಂದು ನಿಗದಿ ಮಾಡಿದ್ದೀರಿ ಎಂಬುದು ರಾಜಭವನದ ಪ್ರಶ್ನೆಯಾಗಿದೆ. ಈ ಎರಡೂ ಪ್ರಶ್ನೆಗೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ವಿವರಿಸಿದರೂ ಮನವರಿಕೆಯಾಗಿಲ್ಲ. ಹೀಗಾಗಿ ಕಡತ ಸರ್ಕಾರದ ಅಂಗಳದಲ್ಲೇ ಉಳಿದಂತಾಗಿದೆ.
ಭಾರತದ ಹೆಡ್​ ಕೋಚ್​ ಆಗುವುದಾದರೆ… ಗೌತಮ್ ಗಂಭೀರ್​ ಮುಂದಿಟ್ಟ 5 ಬೇಡಿಕೆಗಳಿಗೆ ದಂಗಾದ ಬಿಸಿಸಿಐ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nineteen − fifteen =
Remember me
