ಬೆಂಗಳೂರು: ಇದು ಪಕ್ಕಾ ಬಿಜೆಪಿ ಸರ್ಕಾರ, ಮೋದಿ ಸರ್ಕಾರ, ಯಡಿಯೂರಪ್ಪ ಸರ್ಕಾರ ಇದೆ. ನಮ್ಮದು ಸಮ್ಮಿಶ್ರ ಸರ್ಕಾರ ಎಂದ ವ್ಯಕ್ತಿ ಯಾರು? ಎಂದು ಕಂದಾಯ ಸಚಿವ ಆರ್ ಅಶೋಕ್, ಸಚಿವ ಸಿ.ಪಿ ಯೋಗೀಶ್ವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಪಿ ಯೋಗೀಶ್ವರ್ ಅವರ ಹಿನ್ನಲೆ ಏನು? ಎಷ್ಟು ಪಕ್ಷದಲ್ಲಿ ಇದ್ದು ಬಂದವರು ? ಏನಾದರೂ ಸಮಸ್ಯೆ ಇದ್ರೆ ನಾಲ್ಕು ಗೋಡೆ ಮಧ್ಯೆ ಮಾತಾಡಿ ಬಗೆಹರಿಸಿಕೊಳ್ಳಬೇಕು. ಅದು ಬಿಟ್ಟು ಸರ್ಕಾರದ ಭಾಗವಾಗಿರುವವರೇ ಹೀಗೆ ಸರ್ಕಾರದ ಬಗ್ಗೆ ಮಾತಾಡೋದು ಸರಿಯಲ್ಲ ಎಂದು ಕಿಡಿಕಾರಿದರು. ಇತ್ತೀಚೆಗೆ ಯೋಗೀಶ್ವರ್ ಅವರು ರಾಜ್ಯ ಬಿಜೆಪಿ ಸರ್ಕಾರ ಕಾಂಗ್ರೆಸ್, ಜೆಡಿಎಸ್​ ಸಹಾಯದಿಂದ ನಡೆಯುತ್ತಿದೆ ಎಂದು ಆರೋಪಿಸಿದ್ದರು.
ಇದು ನರಹಂತಕ ಸರ್ಕಾರ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಉತ್ತರಿಸಿದ ಅಶೋಕ್, ಯಡಿಯೂರಪ್ಪನವರು ಈ ವಯಸ್ಸಿನಲ್ಲೂ ಕೆಲಸ ಮಾಡ್ತಾ ಇದ್ದಾರೆ. ಸಿದ್ದರಾಮಯ್ಯ ಟ್ವೀಟ್ ಮಾಡೋದು ಬಿಟ್ರೆ ಬೇರೆ ಏನು ಮಾಡಿದಾರೆ? ಎಷ್ಟು ಜಿಲ್ಲೆಗಳಿಗೆ, ತಾಲ್ಲೂಕುಗಳಿಗೆ ಹೋಗಿದಾರೆ? ಒಂದೆರಡು ಕಡೆ ಮಾತ್ರ ಕಾಂಗ್ರೆಸ್​​ನವ್ರು ಕರೆದಲ್ಲಿ ಹೋಗಿ ಫುಡ್ ಕಿಟ್ ನೀಡಿದ್ದಾರೆ. ಮಳೆ ಹಾನಿ ಪ್ರದೇಶಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದ್ದಾರಾ ಎಂದು ಪ್ರಶ್ನಿಸಿದರು.
ಕೋವಿಡ್ ರೋಗಿ ಹಾಗೂ ಶವಗಳಿಗೆ ಆಂಬುಲೆನ್ಸ್ ಗಳಿಂದ ವಸೂಲಿ ವಿಚಾರವಾಗಿ ಮಾತನಾಡಿದ ಅಶೋಕ್ ಅವರು, ಸರ್ಕಾರ ನಿಗದಿ ಮಾಡಿದ ಹಣಕ್ಕಿಂತ ಹೆಚ್ಚು ವಸೂಲು ಮಾಡಿದ್ರೆ ಜೈಲಿಗೆ ಕಳಿಸ್ತೀವಿ. ಪೊಲೀಸ್ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ಕೊಟ್ಟಿದ್ದೇವೆ. ಹೆಚ್ಚುವರಿ ದರ ವಸೂಲು ಮಾಡಿದವರನ್ನು ಜೈಲಿಗೆ ಕಳಿಸಲು ಸೂಚನೆ ಕೊಟ್ಟಿದ್ದೇವೆ. ಈ ಥರದ ಕಳ್ಳರನ್ನು ಆಂಬುಲೆನ್ಸ್ ಅಸೋಸಿಯೇಷನ್ನವ್ರು ಪತ್ತೆ ಮಾಡಿ ಹೇಳಲಿ. ಜನರೂ ದೂರು ಕೊಟ್ರೆ ಅಂಥೋರ ವಿರುದ್ಧ ಕ್ರಮ‌ ತಗೋತೀವಿ. ಹೆಚ್ಚು ದರ ವಸೂಲು ಮಾಡೋದು ರಾಕ್ಷಸೀ ಕೃತ್ಯ ಎಂದು ಹೇಳಿದರು.
ಲಾಕ್​ಡೌನ್​ ಎಫೆಕ್ಟ್​: ಕುಮಾರ ಬಂಗಾರಪ್ಪ ಮಗಳ ಮದುವೆ ಮುಂದೂಡಿಕೆ

ಮಿನಿಸ್ಟರ್‌ ಸಾಹೇಬ್ರೆ… ನಾನು ತರಿಸಿದ ಚಿಕನ್‌ ಬಿರಿಯಾನಿಯಲ್ಲಿ ಲೆಗ್‌ಪೀಸ್‌ ಇಲ್ಲ, ಏನ್‌ ಮಾಡ್ಬೇಕು ಹೇಳಿ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × 3 =
Remember me
