ಬೆಂಗಳೂರು:ಪಠ್ಯಪುಸ್ತಕ ಪರಿಷ್ಕರಣೆ ವಿವಾದದ ಹಿನ್ನೆಲೆಯಲ್ಲಿ ಡಾ. ಮುಡಂಬಡಿತ್ತಾಯ (2015-16ನೇ ಸಾಲು), ಬರಗೂರು ರಾಮಚಂದ್ರಪ್ಪ (2017-18ನೇ ಸಾಲು) ಹಾಗೂ ರೋಹಿತ್ ಚಕ್ರತೀರ್ಥ ಸಮಿತಿ (2022-23ನೇ ಸಾಳು) ಮಾಡಿರುವ ಪರಿಷ್ಕೃತ ಪಠ್ಯಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು, ಕರ್ನಾಟಕ ಪಠ್ಯಪುಸ್ತಕ ಸೊಸೈಟಿ ವೆಬ್​ಸೈಟ್​ಗೆ ಅಪ್​ಲೋಡ್ ಮಾಡಲಾಗಿದೆ.
ಪಠ್ಯಪುಸ್ತಕ ಪರಿಷ್ಕರಣೆ ವಿವಾದ ತಾರಕಕ್ಕೇರಿದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಈ ಹಿಂದಿನ ಸಮಿತಿ ಅವಧಿಯಲ್ಲಿ ನಡೆದ ಪಠ್ಯ ಪುಸ್ತಕ ಮತ್ತು ಈಗಿನ ಸಮಿತಿ ನಡೆಸಿದ ಪಠ್ಯ ಪುಸ್ತಕವನ್ನು ಬಿಡುಗಡೆ ಮಾಡಿ ಸಾರ್ವಜನಿಕರ ಅಭಿಪ್ರಾಯಕ್ಕೆ ಮುಂದಾಗುವುದಾಗಿ ಇತ್ತೀಚೆಗೆ ಹೇಳಿದ್ದರು. ಸಚಿವರ ಸೂಚನೆ ಹಿನ್ನೆಲೆಯಲ್ಲಿ ಇದೀಗ ವೆಬ್​ಸೈಟ್​ನಲ್ಲಿ ಮೂರು ಸಮಿತಿಗಳ ಪಠ್ಯ ಅಪ್​ಲೋಡ್ ಮಾಡಲಾಗಿದೆ.
ವಿವಾದವೇನು?:ಪಠ್ಯಪುಸ್ತಕ ಪರಿಷ್ಕರಣೆಗೆ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಸಮಿತಿ ರಚಿಸಿದ್ದಕ್ಕೆ ರಾಜ್ಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಯಿತು. ಪಠ್ಯದಲ್ಲಿ ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್, ಕುವೆಂಪು ಅವರಿಗೆ ಅಪಮಾನ ಮಾಡಲಾಗಿದೆ. ಹಿಂದುಪರ ಧೋರಣೆಗಳನ್ನು ಪಠ್ಯದಲ್ಲಿ ಅಳವಡಿಸಲಾಗಿದೆ ಎಂದು ಗಂಭೀರ ಆರೋಪಗಳು ಕೇಳಿಬಂದಿದ್ದವು.
ಆಕ್ಷೇಪಕ್ಕಿಲ್ಲ ಅವಕಾಶ?:ಪ್ರಸ್ತುತ ಪರಿಷ್ಕರಿಸಿರುವ ಪಠ್ಯ ಪುಸ್ತಕದಲ್ಲಿ ಆಕ್ಷೇಪಾರ್ಹ ವಿಷಯಗಳಿದ್ದಲ್ಲಿ ಅವುಗಳನ್ನು ಮತ್ತೊಮ್ಮೆ ಪರಿಷ್ಕರಿಸುವ ಮುಕ್ತ ಮನಸ್ಸು ನಮ್ಮ ಸರ್ಕಾರ ಹೊಂದಿದೆ ಎಂದು ತಿಳಿಸುವ ಮೂಲಕ ಪಠ್ಯ ಪುಸ್ತಕ ವಿವಾದಕ್ಕೆ ಅಂತ್ಯ ಹಾಡಲು ಸಿಎಂ ಪ್ರಯತ್ನಿಸಿದ್ದರು. ಇದಾದ ಬಳಿಕ ಶಿಕ್ಷಣ ಸಚಿವರು ಕೂಡ ಮೂವರು ಸಮಿತಿಯ ಪಠ್ಯ ಪುಸ್ತಕಗಳನ್ನು ಆನ್​ಲೈನ್​ನಲ್ಲಿ ಹಾಕಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ತಿಳಿಸಿದ್ದರು. ಅದರಂತೆ ಇದೀಗ ಕರ್ನಾಟಕ ಪಠ್ಯಪುಸ್ತಕ ಸೊಸೈಟಿ ವೆಬ್​ಸೈಟ್ ktbs.kar.nic.in ಅಪ್​ಲೋಡ್ ಮಾಡಲಾಗಿದೆ. ಆದರೆ ಮೂರು ಸಮಿತಿಯಲ್ಲಿ ಏನಾದರೂ ಆಕ್ಷೇಪಾರ್ಹ ಅಂಶಗಳಿದ್ದರೆ ಸಾರ್ವಜನಿಕರು ತಿಳಿಸಬಹುದು ಎಂದು ಸಚಿವರು ಹೇಳಿದ್ದರು. ಆದರೆ ಆಕ್ಷೇಪಾರ್ಹ ಅಂಶಗಳನ್ನು ಎಲ್ಲಿ ಮತ್ತು ಯಾರಿಗೆ ಸಲ್ಲಿಸ ಬೇಕು ಎಂಬುದರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿಲ್ಲ.
ಭಾರತವನ್ನು ಇಬ್ಭಾಗ ಮಾಡಿ, ಪಾಕಿಸ್ತಾನದ ಧ್ವಜ ಹಾರಿಸಿದ್ದ ಜೆಎನ್​ಯುು ಕನ್ನಡ ಪಠ್ಯದ ಬಗ್ಗೆ ಪ್ರತಿಕ್ರಿಯಿಸುವುದರ ಹಿಂದೆ ಹಿಂದು ಸಮಾಜವನ್ನೂ ಒಡೆಯುವ ಷಡ್ಯಂತ್ರ ಅಡಗಿದೆ. ಹಿಂದೆ ತುಕಡೆ ಗ್ಯಾಂಗ್ ಮಾಡಿದ ಕೆಲಸವನ್ನೇ ರಾಜ್ಯದಲ್ಲಿ ಬರಗೂರು ರಾಮಚಂದ್ರಪ್ಪ ಸಮಿತಿ ಮಾಡಿದೆ.
|ಬಿ.ಸಿ.ನಾಗೇಶ್ಶಿಕ್ಷಣ ಸಚಿವ
ಸಂವಿಧಾನ ವಿರೋಧಿ, ಕರ್ನಾಟಕದ ಅಸ್ಮಿತೆಗೆ ಧಕ್ಕೆ ತರುವಂಥ ಪಠ್ಯ ವಿರೋಧಿಸಿ ಬುಧವಾರ ರಾಜ್ಯಾದ್ಯಂತ ‘ಕರ್ನಾಟಕ ಅಸ್ಮಿತೆ ಜನಾಂದೋಲನ’ ಸಮಿತಿ ಹೋರಾಟ ನಡೆಸಲಿದೆ. ಕುವೆಂಪು ಜನ್ಮಸ್ಥಳ ಕುಪ್ಪಳ್ಳಿಯಿಂದ ತೀರ್ಥಹಳ್ಳಿವರೆಗೆ ಚಿಂತಕರು, ಸಾಹಿತಿಗಳು, ತಜ್ಞರು, ಸಂಶೋಧಕರು, ಮಠಾಧೀಶರು ಪಾದಯಾತ್ರೆ ನಡೆಸಲಿದ್ದಾರೆ. ಕಲಬುರಗಿ ಜಗತ್ ವೃತ್ತದ ಬಸವೇಶ್ವರ ಮೂರ್ತಿ ಆವರಣದಲ್ಲಿ ಬುಧವಾರ ಬೆಳಗ್ಗೆ 10ರಿಂದ ಗುರುವಾರ ಬೆಳಗ್ಗೆ 10ರವರೆಗೆ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ.
|ಪ್ರಿಯಾಂಕ್ ಖರ್ಗೆಶಾಸಕ
ಶಿಕ್ಷಣ ಸಚಿವರ ಸೂಚನೆ ಮೇರೆಗೆ ಮೂರು ಸಮಿತಿಯವರ ಪಠ್ಯಪುಸ್ತಕವನ್ನು ಕರ್ನಾಟಕ ಪಠ್ಯಪುಸ್ತಕ ಸೊಸೈಟಿ ವೆಬ್​ಸೈಟ್ ಹಾಕಲಾಗಿದೆ.
|ಮಾದೇಗೌಡಕರ್ನಾಟಕ ರಾಜ್ಯ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕ
ಪ್ರತಿಭಟನೆಗೆ ಎಚ್​ಡಿಡಿ ಬೆಂಬಲ:ವಿವಾದಿತ ಪಠ್ಯಪುಸ್ತಕ ಪರಿಷ್ಕರಣೆ ಕೈಬಿಡಬೇಕು. ರೋಹಿತ್ ಚಕ್ರತೀರ್ಥ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜೂ. 18ರಂದು ಕುವೆಂಪು ಹೋರಾಟ ಸಮಿತಿ ಹಾಗೂ ಇತರೆ ಸಂಘಟನೆಗಳು ನಡೆಸಲಿರುವ ಹೋರಾಟಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಜೂ.18 ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯಲಿರುವ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಸರ್ಕಾರದ ನಡೆಯನ್ನು ಖಂಡಿಸುವುದಾಗಿಯೂ ತಿಳಿಸಿದ್ದಾರೆ.
ಅಮ್ಮನಾದ ನಟಿ ಪ್ರಣೀತಾ; ಮುನ್ನಾಭಾಯಿ ಎಂಬಿಬಿಎಸ್​ ಚಿತ್ರದ ದೃಶ್ಯ ನೆನಪಿಸಿಕೊಂಡಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
