ಹುಬ್ಬಳ್ಳಿ:ಗ್ರಾಹಕರೊಬ್ಬರ ಮನೆಗೆ ಅಕ್ಕಿ ಮೂಟೆಯನ್ನು ಇಡಲು ಹೋದ ಆಟೋ ಚಾಲಕನೊಬ್ಬ ಮಾಡಬಾರದ ಕೆಲಸ ಮಾಡಿದ್ದಾನೆ. ಮನೆಯಲ್ಲಿದ್ದ ಯುವತಿಯ ಬಟ್ಟೆ ವಿವಸ್ತ್ರಗೊಳಿಸಿ ಬೆತ್ತಲೆ ಚಿತ್ರವನ್ನ ಮೊಬೈಲ್​ ಕ್ಯಾಮರಾದಲ್ಲಿ ಸೆರೆ ಹಿಡಿದವ ಮಾಡಿದ ಅವಾಂತರ ಅಷ್ಟಿಷ್ಟಲ್ಲ.
ಈ ಬಗ್ಗೆ ಸಂತ್ರಸ್ತ ಯುವತಿಯ ತಾಯಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹುಬ್ಬಳ್ಳಿಯ ಆಟೋ ಚಾಲಕ ಅನಿಲ್ ರಾಜ್ ಆರೋಪಿ. ಯುವತಿ ತಾಯಿ ಸರ್ಕಾರಿ ಉದ್ಯೋಗಿ. ಇವರಿಗೆ ಅನಿಲ್ ರಾಜ್​ ಪರಿಚಯವಿದ್ದ. ಆ ಹಿನ್ನೆಲೆಯಲ್ಲಿ ಯುವತಿಯ ತಾಯಿಯನ್ನು ಈತ ತನ್ನ ಆಟೋದಲ್ಲಿ ಕಚೇರಿಗೆ ಕರೆದುಕೊಂಡು ಹೋಗಿ ಬಿಡುತ್ತಿದ್ದ.ಇದನ್ನೂ ಓದಿರಿಅಯ್ಯೋ, ಮಗಳೇ ಆ ಒಂದು ಮಾತಿಗೆ ಎಂಥ ಸಾವು ತಂದುಕೊಂಡವ್ವ…
‘ಜ.21ರಂದು ನಾನು ಕಚೇರಿಗೆ ಹೋದ ಬಳಿಕ ಬೆಳಗ್ಗೆ 10.45ರ ಸುಮಾರಿಗೆ ನನ್ನ ಮಗಳು ಮಾತ್ರವೇ ಮನೆಯಲ್ಲಿ ಇರುವುದನ್ನ ಅರಿತ ಆರೋಪಿ ಅನಿಲ್​ ರಾಜ್​, ನಿಮ್ಮ ಅಮ್ಮ ಅಕ್ಕಿ ಕಳಿಸಿದ್ದಾರೆ ತೆಗೆದುಕೊಳ್ಳಿ ಎಂದು ಬಾಗಿಲು ತಟ್ಟಿದ್ದಾನೆ. ನನ್ನ ಮಗಳು ಬಾಗಿಲು ತೆಗೆಯುತ್ತಿದ್ದಂತೆ ಅಕ್ಕಿ ಕೊಟ್ಟವ ಕುಡಿಯಲು ನೀರು ಕೇಳಿದ್ದಾನೆ. ಆಕೆ ಒಳಗೆ ಹೋಗುತ್ತಿದ್ದಂತೆ ಒಳಗಿನಿಂದ ಬಾಗಿಲು ಹಾಕಿ ಚಾಕು ತೋರಿಸಿ ಬೆದರಿಸಿ ಬಟ್ಟೆ ಬಿಚ್ಚಿಸಿ ವಿಡಿಯೋ ಮಾಡಿಕೊಂಡಿದ್ದಾನೆ. ಈ ವಿಡಿಯೋ ಇಟ್ಟುಕೊಂಡು ನನ್ನ ಬಳಿ 25 ಲಕ್ಷ ರೂಪಾಯಿ ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ಜತೆಗೆ ಅನೈತಿಕ ಚಟುವಟಿಕೆ ನಡೆಸಲು ಯುವತಿಯನ್ನ ಕಳಿಸಬೇಕು. ಇಲ್ಲವಾದಲ್ಲಿ ಈ ವಿಡಿಯೋವನ್ನು ವೈರಲ್​ ಮಾಡುತ್ತೇನೆ ಎಂದು ಬ್ಲ್ಯಾಕ್​ಮೇಲ್​ ಮಾಡುತ್ತಿದ್ದಾನೆ’ ಎಂದು ಸಂತ್ರಸ್ತೆಯ ತಾಯಿ ದೂರಿನಲ್ಲಿ ವಿವರಿಸಿದ್ದಾರೆ.
ಆರೋಪಿಯ ಬ್ಲ್ಯಾಕ್​ಮೇಲ್​ಗೆ ರೋಸಿಹೋದ ಸಂತ್ರಸ್ತೆಯ ತಾಯಿ ಮಾ.23ರಂದು ಹಳೇ ಹುಬ್ಬಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
ಸಿಎಂ ಮನೆ ಮುಂದೆ ಹೈಡ್ರಾಮ! ಸೀರೆ ಬಿಚ್ಚಿಹೋಗಿದೆ ಬಿಟ್ಬಿಡಿ… ಪೊಲೀಸರು ಕಕ್ಕಾಬಿಕ್ಕಿ

ನರಹಂತಕ ಹುಲಿಯ ಅಂತ್ಯಸಂಸ್ಕಾರ ಮುಗಿದ ಬಳಿಕ ನಿಟ್ಟುಸಿರುಬಿಟ್ಟ ಜನರಿಗೆ ಬೆಳಂಬೆಳಗ್ಗೆ ಕಾದಿತ್ತು ಆಘಾತ!

‘ಸಿಡಿ ಲೇಡಿ’ಯ ಬೆಂಬಲಕ್ಕೆ ನಿಂತ ಕಾಂಗ್ರೆಸ್​ ಶಾಸಕಿಯರು!

ಸಿದ್ದರಾಮಯ್ಯ, ಡಿಕೆಶಿ, ರಮೇಶ್​ಕುಮಾರ್​ ಅವರೇ ನನಗೆ ರಕ್ಷಣೆ ಕೊಡಿ ಎಂದ ಸಿಡಿ ಲೇಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 4 =
Remember me
