ಹರೀಶ್ ಬೇಲೂರು ಬೆಂಗಳೂರುರಾಜ್ಯದಲ್ಲಿ ಪಡಿತರ ಪಡೆಯಲು ಎಪಿಎಲ್ ಕಾರ್ಡ್​ದಾರರು ನಿರಾಸಕ್ತಿ ತೋರಿರುವ ಹಿನ್ನೆಲೆಯಲ್ಲಿ ಆ ಕಾರ್ಡ್​ಗಳಿಗೆ ರೇಷನ್ ಕೊಡುವುದನ್ನು ನಿಲ್ಲಿಸಲು ಆಹಾರ ಇಲಾಖೆ ನಿರ್ಧರಿಸಿದೆ. ರಾಜ್ಯಾದ್ಯಂತ 24 ಲಕ್ಷ ಎಪಿಎಲ್ ಕಾರ್ಡ್​ಗಳಿದ್ದು, ಶೇ.80 ಕಾರ್ಡ್​ದಾರರು ಪ್ರತಿ ತಿಂಗಳು ರೇಷನ್ ಪಡೆಯುತ್ತಿಲ್ಲ. ಹೀಗಾಗಿ, ಇನ್ಮುಂದೆ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಗುರುತಿನ ಚೀಟಿಗಾಗಿ ಮಾತ್ರವೇ ಅಥವಾ ರೇಷನ್​ಗಾಗಿಯೋ ಎಂಬುದನ್ನೂ ಪ್ರತ್ಯೇಕವಾಗಿ ನಮೂದಿಸಿ ಕಾರ್ಡ್ ಮಂಜೂರು ಮಾಡಲಾಗುತ್ತಿದೆ.
ಗುರುತಿನ ಚೀಟಿಗಾಗಿ ಕಾರ್ಡ್ ಪಡೆಯುವವರಿಗೆ ರೇಷನ್ ಸಿಗುವುದಿಲ್ಲ. ಎಪಿಎಲ್​ಗೆ ವ್ಯಯಸುತ್ತಿರುವ ಅನುದಾನ ಕಡಿತಗೊಳಿಸಿ ಬಿಪಿಎಲ್ ಪಡಿತರದಾರರಿಗೆ ಬೇರೆ ರೇಷನ್ ನೀಡುವ ಚಿಂತನೆ ನಡೆದಿದೆ. ಹಲವು ವರ್ಷಗಳಿಂದ ಕೆಲವರು ನ್ಯಾಯಬೆಲೆ ಅಂಗಡಿಗಳಲ್ಲಿ ರೇಷನ್ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಾಳಧನಿಕರು ಎಪಿಎಲ್ ಕಾರ್ಡ್ ಅಕ್ಕಿಯನ್ನು ಪಾಲಿಶ್ ಮಾಡಿ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 35ರಿಂದ 50 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ, ಪಡಿತರ ಸೋರಿಕೆ ತಡೆಗಟ್ಟಲು ಸರ್ಕಾರ ಎಪಿಎಲ್ ಕಾರ್ಡ್ ರದ್ದುಪಡಿಸಲು ನಿರ್ಧರಿಸಿತ್ತು. ಇದೀಗ, ಕಾರ್ಡ್​ಗಳನ್ನು ಡಿಲೀಟ್ ಮಾಡಲು ಮುಂದಾಗಿದೆ.
ಜಿಲ್ಲಾವಾರು ಎಪಿಎಲ್ ಮಾಹಿತಿ: ಬೆಂಗಳೂರು 4,37,651, ಬೆಳಗಾವಿ 3,23,164, ದಕ್ಷಿಣಕನ್ನಡ 1,73,720, ಕಲಬುರಗಿ 1,15,594, ಉಡುಪಿ 1,15, 126, ಮೈಸೂರು 1,11,024, ಶಿವಮೊಗ್ಗ 1,03,347, ಧಾರವಾಡ 95,973, ಉತ್ತರ ಕನ್ನಡ 90,190,ವಿಜಯಪುರ 86,914, ತುಮಕೂರು 66,503, ಚಿಕ್ಕಮಗಳೂರು 64,857, ಬಾಗಲಕೋಟೆ 63,573, ಮಂಡ್ಯ 57,472, ಬೀದರ್ 53,621, ಹಾವೇರಿ 53,263, ದಾವಣಗೆರೆ 45,854, ಚಿತ್ರದುರ್ಗ 44,454, ಬಳ್ಳಾರಿ 43,757, ಹಾಸನ 43,281, ರಾಯಚೂರು 42,561, ಗದಗ 38,666, ಕೊಡಗು 37,198, ವಿಜಯನಗರ 33,320, ಕೋಲಾರ 27,369, ಬೆಂ.ಗ್ರಾಮಾಂತರ 23,158, ಚಿಕ್ಕಬಳ್ಳಾಪುರ 19,281, ರಾಮನಗರ 17,839, ಯಾದಗಿರಿ 17,609, ಚಾಮರಾಜನಗರ 14,739.
ಬಿಪಿಎಲ್​ಗಳೂ ರದ್ದು: ರಾಜ್ಯದಲ್ಲಿರುವ 1,16,95,029 ಬಿಪಿಎಲ್ ಕಾರ್ಡ್​ಗಳ ಪೈಕಿ 3.26 ಲಕ್ಷ ಕಾರ್ಡ್ ಆರು ತಿಂಗಳಿಂದ ರೇಷನ್ ಪಡೆಯುತ್ತಿಲ್ಲ ಎಂದು ಇಲಾಖೆ ಹೇಳಿಕೊಂಡಿದೆ. ಅಂತಹ ಕಾರ್ಡ್​ಗಳ ರದ್ದತಿಗೂ ಸರ್ಕಾರ ಸೂಚನೆ ಕೊಟ್ಟಿದೆ. ಹೃದಯ ಸಮಸ್ಯೆ, ಕ್ಯಾನ್ಸರ್ ಸೇರಿ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು, ಪಿಂಚಣಿ ಹಾಗೂ ಆರ್​ಟಿಇ ಅಡಿ ಶಿಕ್ಷಣ ಸೇರಿ ಇತರ ಸರ್ಕಾರಿ ಸೌಕರ್ಯ ಪಡೆದುಕೊಳ್ಳುವ ನಿಟ್ಟಿನಲ್ಲಿ ಲಕ್ಷಾಂತರ ಮಂದಿ ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ಇದರಿಂದಾಗಿ ಪ್ರತಿ ತಿಂಗಳು ರೇಷನ್ ತೆಗೆದುಕೊಳ್ಳದ ಕಾರಣ ಸರ್ಕಾರದ ಬೊಕ್ಕಸಕ್ಕೆ ಮಾಸಿಕ 50 ಲಕ್ಷ ರೂ.ನಂತೆ ವರ್ಷಕ್ಕೆ 60 ಕೋಟಿ ರೂ. ಉಳಿತಾಯವಾಗುತ್ತದೆ. ಹೀಗಿದ್ದರೂ, ಪಡಿತರ ಪಡೆಯದ ಕಾರ್ಡ್​ಗಳ ರದ್ದುಪಡಿಸಲು ಇಲಾಖೆ ಮುಂದಾಗಿದೆ.
ಪಡಿತರ ಚೀಟಿದಾರರಿಗೆ ಶೀಘ್ರದಲ್ಲಿ ಹಣದ ಬದಲು ಅಕ್ಕಿ ನೀಡುವ ಪ್ರಯತ್ನ ನಡೆದಿದೆ. ಅಕ್ಕಿ ಖರೀದಿಗಾಗಿ ತೆಲಂಗಾಣ, ಆಂಧ್ರ ಮತ್ತು ಛತ್ತೀಸ್​ಗಢದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಹೊಸದಾಗಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೆ 15 ದಿನದೊಳಗೆ ಕಾರ್ಡ್ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
| ಕೆ.ಎಚ್.ಮುನಿಯಪ್ಪ ಆಹಾರ ಸಚಿವ (ರಾಯಚೂರಿನಲ್ಲಿ)
ಪಡಿತರ ಪಡೆಯದ ಕಾರ್ಡ್​ಗಳನ್ನು ರದ್ದುಪಡಿಸಿದರೆ ನ್ಯಾಯಬೆಲೆ ಅಂಗಡಿಗಳು ಹೊಂದಿರುವ ಕಾರ್ಡ್ ಗಳ ಸಂಖ್ಯೆ ಕಡಿಮೆಯಾಗುತ್ತದೆ. ಜತೆಗೆ, ಕಮಿಷನ್ ಹಣ ಖೋತಾ ಆಗುತ್ತದೆ. ಕಾರ್ಡ್ ರದ್ದು ಬದಲು ಅವಶ್ಯಕತೆ ಇರುವವರಿಗೆ ಕೆಜಿಗೆ 15 ರೂ.ನಂತೆ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ವಿತರಿಸಲು ಇಲಾಖೆ ಕ್ರಮ ಕೈಗೊಳ್ಳಬೇಕು.
| ಟಿ.ಕೃಷ್ಣಪ್ಪ ರಾಜ್ಯ ಸರ್ಕಾರಿ ಪಡಿತರ ವಿತರಕ ಸಂಘದ ಅಧ್ಯಕ್ಷ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × 4 =
Remember me
