ಬೆಂಗಳೂರು:ರೈಸ್ ಪುಲ್ಲಿಂಗ್ ಮೆಷಿನ್ ನೀಡುವುದಾಗಿ ರಾಜ್ಯದ ವಿವಿಧೆಡೆ ಸಾರ್ವಜನಿಕರಿಂದ ಲಕ್ಷಾಂತರ ರೂ. ಪಡೆದು ವಂಚಿಸುತ್ತಿದ್ದ ಮಾಜಿ ಪೊಲೀಸ್ ಸೇರಿ ಮೂವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 2.88 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಾಜಿ ಕಾನ್‌ಸ್ಟೇಬಲ್ ವಿ.ಆರ್ ನಟೇಶ್ ಅಲಿಯಾಸ್ ವೆಂಕಟರಮಣ(44), ವೆಂಕಟೇಶ್ (47), ಸೋಮಶೇಖರ್ (47) ಬಂಧಿತರು. ಆರೋಪಿಗಳಿಂದ ರೈಸ್ ಪುಲ್ಲಿಂಗ್ ಯಂತ್ರ, ಬೆಂಝ್, ಫಾರ್ಚುನರ್, ಸ್ಕಾರ್ಪಿಯೋ ಕಾರುಗಳು, 1.332 ಗ್ರಾಂ ಚಿನ್ನದ ಆಭರಣಗಳು ಮತ್ತು 28 ಲಕ್ಷ ರೂ. ನಗದು ಹಣ ಜಪ್ತಿ ಮಾಡಿದ್ದಾರೆ.
ಶ್ರೀಮಂತ ಕುಳಗಳನ್ನು ಹುಡುಕುತ್ತಿದ್ದ ಆರೋಪಿಗಳು ತಮ್ಮ ಬಳಿ ರೈಸ್ ಪುಲ್ಲಿಂಗ್ ಯಂತ್ರ ಇರುವುದಾಗಿ ನಂಬಿಸುತ್ತಿದ್ದರು. ಇದು ಕೋಟ್ಯಂತರ ರೂ. ಬೆಲೆ ಬಾಳುವ ಯಂತ್ರವಾಗಿದ್ದು, ನಮಗೆ ಹಣದ ಅಗತ್ಯತೆ ಇರುವುದರಿಂದ ಇದನ್ನು ಕಡಿಮೆ ಬೆಲೆಗೆ ಕೊಡುತ್ತಿದ್ದೇವೆ. ನೀವು ಸೂಕ್ತ ಗ್ರಾಹಕರನ್ನು ಹುಡುಕಿದರೆ ಕೋಟ್ಯಂತರ ರೂ.ಗೆ ಮಾರಾಟ ಮಾಡಬಹುದು ಎಂದು ಹೇಳುತ್ತಿದ್ದರು. ಇವರ ಮಾತನ್ನು ನಂಬಿದ ಹಲವು ಮಂದಿ ಲಕ್ಷಾಂತರ ರೂ. ಮುಂಗಡವಾಗಿ ಕೊಟ್ಟಿದ್ದರು.
ಸಾರ್ವಜನಿಕರಿಂದ ಹಣ ಪಡೆದ ಬಳಿಕ ಯಾವುದೇ ರೈಸ್ ಪುಲ್ಲಿಂಗ್ ಯಂತ್ರ ಕೊಡದೇ ವಂಚಿಸುತ್ತಿದ್ದರು. ಸಾರ್ವಜನಿಕರಿಂದ ಪಡೆದ ಹಣದಲ್ಲಿ ಐಷಾರಾಮಿ ಕಾರುಗಳನ್ನು ಖರೀದಿಸಿ ಮೋಜು ಮಾಡಿ ದುಂದು ವೆಚ್ಚ ಮಾಡುತ್ತಿದ್ದರು. ವಿಚಾರಣೆ ವೇಳೆ ಆರೋಪಿಗಳು ಇದೇ ರೀತಿ ಹಲವು ಜನರಿಗೆ ವಂಚಿಸಿರುವುದು ಗೊತ್ತಾಗಿದೆ. ಇತ್ತೀಚೆಗೆ ಆರೋಪಿಗಳಿಂದ ವಂಚನೆಯಾದ ವ್ಯಕ್ತಿಯೊಬ್ಬರು ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು.
ಇದನ್ನೂ ಓದಿ:ವಾಟ್ಸ್​​ಆ್ಯಪ್​ ಸರ್ವರ್​​ ಡೌನ್​; ವಿಡಿಯೋ ಡೌನ್​ಲೋಡ್​ ಮಾಡಲಾಗದೆ ಪರದಾಡಿದ ನೆಟ್ಟಿಗರು
ಈ ಬಗ್ಗೆ ತನಿಖೆ ನಡೆಸಿದ ಸಿಸಿಬಿ ಡಿಸಿಪಿ ಯತೀಶ್ ಚಂದ್ರ, ಎಸಿಪಿ ಶಿವಕುಮಾರ್ ಇನ್‌ಸ್ಪೆಕ್ಟರ್ ಚಂದ್ರಕಲಾ ನೇತೃತ್ವದ ತಂಡ ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಬಂಧಿತರು ಬೆಂಗಳೂರು ಹಾಗೂ ರಾಜ್ಯದ ವಿವಿಧೆಡೆ ರೈಸ್ ಪುಲ್ಲಿಂಗ್ ದಂಧೆ ನಡೆಸುತ್ತಿದ್ದರು. ತಮ್ಮ ಮಾತಿಗೆ ಮರುಳಾಗುವ ವ್ಯಕ್ತಿಗಳಿಗೆ ತೋರಿಸಲೆಂದು ಕಬ್ಬಿಣದ ವಸ್ತುವೊಂದನ್ನು ರೈಸ್ ಪುಲ್ಲಿಂಗ್ ಯಂತ್ರ ಎಂದು ತೋರಿಸುತ್ತಿದ್ದರು. ಆರೋಪಿಗಳ ಮಾತಿನ ಮೋಡಿಗೆ ಮರುಳಾದ ಹಲವಾರು ಮಂದಿ ಹಣ ಕಳೆದುಕೊಂಡು ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದ್ದಾರೆ.
ಆರೋಪಿ ನಟೇಶ್ 2007ರಲ್ಲಿ ಸಿಎಆರ್‌ನಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಆಗಿ ಕೆಲಸ ಮಾಡುತ್ತಿದ್ದ. ನಂತರ ರೈಸ್ ಪುಲ್ಲಿಂಗ್ ದಂಧೆಗೆ ಸಿಲುಕಿ ಹಣ ಕಳೆದುಕೊಂಡಿದ್ದ. ನಷ್ಟ ಉಂಟಾದ ಬಳಿಕ ಪೊಲೀಸ್ ಕೆಲಸ ಬಿಟ್ಟು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ.
ಬಳಿಕ ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಇನ್ನಿಬ್ಬರು ಆರೋಪಿಗಳ ಜತೆಗೂಡಿ ರೈಸ್ ಪುಲ್ಲಿಂಗ್ ದಂಧೆಗೆ ಇಳಿದಿದ್ದ. ನಟೇಶ್ ವಿರುದ್ದ ನಂಜನಗೂಡು, ಕೋಣನಕುಂಟೆ, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ರೈಸ್‌ಪುಲ್ಲಿಂಗ್ ಹೆಸರಿನಲ್ಲಿ ಸಾರ್ವಜನಿಕರಿಗೆ ವಂಚನೆ ಮಾಡಿರುವ ಪ್ರಕರಣಗಳ ಸಂಬಂಧ ದೂರುಗಳು ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + four =
Remember me
