ಬೆಂಗಳೂರು:ಬೆಳೆ, ಕಾಳು, ಅಕ್ಕಿಗೆ ಹುಳಗಳು ಸೇರದಂತೆ ನೋಡಿಕೊಳ್ಳುವುದು ಮಹಿಳೆಯರಿಗೆ ಇರುವ ದೊಡ್ಡ ಕೆಲಸವಾಗಿದೆ. ಎಷ್ಟೇ ಮುಂಜಾಗ್ರತೆ ವಹಿಸಿದರೂ ಅಕ್ಕಿಗೆ ಕೀಟಗಳು ಬರಬಹುದು.
ನೀವು ಅದನ್ನು ಎಷ್ಟು ಕ್ಲೀನ್‌ ಮಾಡಿದರೂ ಕೀಟಗಳು ಅಕ್ಕಿಯಿಂದ ದೂರ ಹೋಗುವುದು ಕಷ್ಟ ಹಾಗೂ ಸ್ವಚ್ಛಗೊಳಿಸಲು ಬಯಸಿದರೂ, ಆದರಿಂದ ಹೆಚ್ಚಿನ ಸಮಯ ವ್ಯರ್ಥವಾಗುತ್ತದೇ ಹೊರೆತು ಕೀಟಗಳು ದೂರ ಹೋಗುವುದಿಲ್ಲ. ಈ ಸಮಸ್ಯೆಗೆ ನಾವು ಕೆಲವು ಸುಲಭ ಪರಿಹಾರವನ್ನು ನೀಡುತ್ತೇವೆ.
1) ಧಾನ್ಯಗಳು, ಪ್ರಮುಖವಾಗಿ ಅಕ್ಕಿಯನ್ನು ಗಾಳಿಯಾಡದ ಕಂಟೇನರ್‌ಗಳಲ್ಲಿ ತಂಪಾದ ಮತ್ತು ಶುಷ್ಕ ಸ್ಥಳದಲ್ಲಿ ಸಂಗ್ರಹಿಸಲು ಸೂಚಿಸಲಾಗುತ್ತದೆ.
2) ಅಕ್ಕಿಯನ್ನು ದೀರ್ಘಕಾಲದವರೆಗೆ ಸಂಗ್ರಹಿಸಿಡುವುದಾದರೆ, ಅದನ್ನು ಬಿಸಿಲಿನಲ್ಲಿ ಒಣಗಿಸಿ ತೆಗೆದಿಟ್ಟುಕೊಳ್ಳಿ. ಇದರಿಂದ ಅಕ್ಕಿಯು ದೀರ್ಘಕಾಲದವರೆಗೆ ಚೆನ್ನಾಗಿರುತ್ತದೆ.

3) ಮಳೆಗಾಲದಲ್ಲಿ, ಅಕ್ಕಿಯನ್ನು ಬೆಳಕು ಮತ್ತು ಗಾಳಿ ಇರುವ ಸ್ಥಳದಲ್ಲಿ ಸಂಗ್ರಹಿಸಬೇಕು. ನೀವು ಬಳಸುವ ಅಕ್ಕಿಗೆ ನೀರು ಸೇರದಂತೆ ಜಾಗೃತಿ ವಹಿಸಬೇಕು.
4) ಅಕ್ಕಿಯನ್ನು ಒಣ ಸ್ಥಳದಲ್ಲಿ ಇರಿಸಿ. ಒದ್ದೆಯಾದ ಸ್ಥಳಗಳಲ್ಲಿ ಅಕ್ಕಿಯನ್ನು ಸಂಗ್ರಹಿಸಬೇಡಿ.

5) ಅಕ್ಕಿಯನ್ನು ಪಾತ್ರೆಯಲ್ಲಿ ಸಂಗ್ರಹಿಸುವ ಬದಲಾಗಿ ಬಾಕ್ಸ್​​, ಗೋಣಿ ಚೀಲದಲ್ಲಿ ಸಂಗ್ರಹಿಸಿ ಇಡಬೇಕು.

6) ಅಕ್ಕಿಯ ಚೀಲ ಪಕ್ಕದಲ್ಲಿ ಮಸಾಲೆಗಳನ್ನು ಇಡಬೇಡಿ. ಜೀರಿಗೆ ಮತ್ತು ಕೊತ್ತಂಬರಿ ಮುಂತಾದ ಬಿಸಿ ಮಸಾಲೆಗಳ ಪರಿಮಳವು ಅನ್ನವನ್ನು ತ್ವರಿತವಾಗಿ ಹೀರಿಕೊಳ್ಳುತ್ತದೆ. ಇದು ಅನ್ನದ ರುಚಿಯನ್ನು ಬದಲಾಯಿಸಬಹುದು.
26 ವರ್ಷದಿಂದ ಪರೀಕ್ಷೆ ಬರೆದರೂ 1 ಸೆಮ್ ಪಾಸಾಗಿಲ್ಲ; 4 ವಿದ್ಯಾರ್ಥಿಗಳ ಪ್ರವೇಶವನ್ನು ರದ್ದುಗೊಳಿಸಿದ ವೈದ್ಯಕೀಯ ವಿಶ್ವವಿದ್ಯಾಲಯ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 − 3 =
Remember me
