ಕೆಎಸೈ-ಜೋ ವೆಲ್ಲರ್ ನಡುವಿನ ಬಾಕ್ಸಿಂಗ್ ಪಂದ್ಯದ ಟಿಕೆಟ್ ಆನ್​ಲೈನ್​ನಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಬಿಕರಿಯಾಗಿ ಆಯೋಜಕರ ಊಹೆಯನ್ನೇ ಉಲ್ಟಾ ಮಾಡಿದವು. 2018ರ ಫೆಬ್ರುವರಿ 3ರಂದು ಆಯೋಜಿತವಾದ ಈ ಪಂದ್ಯವನ್ನು ಯೂಟ್ಯೂಬ್​ನಲ್ಲಿ 2 ಕೋಟಿ ಜನರು ವೀಕ್ಷಿಸಿ ಹೊಸ ದಾಖಲೆ ಬರೆದರು.
ನೋಡನೋಡುತ್ತಲೇ ಮೊಬೈಲ್ ಎಂಬ ಮಾಯೆ ನಮ್ಮನ್ನೆಲ್ಲರನ್ನು ಆವರಿಸಿಕೊಂಡ ರೀತಿ ಊಹೆಗೂ ನಿಲುಕದ್ದು. ಇತ್ತೀಚಿನ ವರದಿಯೊಂದರ ಪ್ರಕಾರ ಜಾಗತಿಕವಾಗಿ ಮೊಬೈಲ್ ಬಳಕೆದಾರರ ಸಂಖ್ಯೆ ಏಳು ಬಿಲಿಯನ್ (700 ಕೋಟಿ) ಯಾನೆ ಜಗತ್ತಿನ ಶೇಕಡಾ 86 ರಷ್ಟು ಜನಸಂಖ್ಯೆಯನ್ನು ತಲುಪಿದೆ. ಸಹಜವಾಗಿಯೇ ಇದು ಡಿಜಿಟಲ್ ಸರಕು ತಯಾರಕರು ಯಾನೆ ಛಜಿಜಜಿಠಿಚ್ಝ ್ಚ್ಞಛ್ಞಿಠಿ cಛಿಚಠಿಟ್ಟ ಗಳಿಗೆ ಒಂದು ದೊಡ್ಡ ಅವಕಾಶವನ್ನೇ ತೆರೆದಿರಿಸಿದೆ. ಗಣತಿಯೊಂದರ ಪ್ರಕಾರ ಡಿಜಿಟಲ್ ಸರಕು ತಯಾರಕರ ಸಂಖ್ಯೆ ಕಳೆದ ವರ್ಷ ಭಾರತದಲ್ಲಿ ಎಂಬತ್ತು ಮಿಲಿಯನ್ (8 ಕೋಟಿ) ತಲುಪಿದ್ದು ಪ್ರಸಕ್ತ ವರ್ಷ ಅದು ನೂರು ಮಿಲಿಯನ್ ದಾಟುವ ನಿರೀಕ್ಷೆಯಿದೆ. ಈ ಮೂಲಕ ಭಾರತವು ಜಗತ್ತಿನಲ್ಲಿಯೇ ಅತಿಹೆಚ್ಚು ಡಿಜಿಟಲ್ ಸರಕು ತಯಾರಕರ ದೇಶವೆನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮೊಬೈಲ್ ಬಳಕೆದಾರರ ನೆಚ್ಚಿನ ವೇದಿಕೆಗಳ ವಿಷಯಕ್ಕೆ ಬಂದರೆ ಯೂಟ್ಯೂಬ್ ಶೇಕಡಾ ಮೂವತ್ತೆಂಟು ಮೊಬೈಲ್ ಬಳಕೆದಾರರನ್ನು ಹೊಂದಿದ್ದು ಮೊದಲ ಸ್ಥಾನದಲ್ಲಿದೆ. ಶೇಕಡಾ 11 ಪಾಲು ಹೊಂದುವುದರ ಮೂಲಕ ಇನ್​ಸ್ಟಾಗ್ರಾಮ್ ಎರಡನೆಯ ಸ್ಥಾನದಲ್ಲಿದ್ದು ಟ್ವಿಟರ್ ಮತ್ತು ಫೇಸ್ ಬುಕ್ ತದನಂತರದ ಸ್ಥಾನಗಳನ್ನು ಅಲಂಕರಿಸಿವೆ. ರೇಸ್​ನಲ್ಲಿ ತನ್ನ ಪ್ರತಿಸ್ಪರ್ಧಿಗಳಿಗಿಂತ ಬಹಳಷ್ಟು ಮುಂದಿರುವ ಯೂಟ್ಯೂಬ್ ಮೊದಲಿಗೆ ಆರಂಭವಾಗಿದ್ದು ಬಳಕೆದಾರರು ತಮ್ಮ ವೈಯಕ್ತಿಕ ವಿಡಿಯೋಗಳನ್ನು ಹಂಚಿಕೊಳ್ಳಲು. ನಂತರ ವೈವಿಧ್ಯಮಯ ವಿಷಯಗಳನ್ನು ತನ್ನ ಬತ್ತಳಿಕೆಗೆ ಸೇರಿಸುವ ಮೂಲಕ ಅದು ಇದೀಗ ದೃಶ್ಯಮಾಹಿತಿಯ ಕಣಜ. ಅದರ ಜತೆಗೆ ಪ್ರತಿಭೆಯಿದ್ದೂ ಸೂಕ್ತ ವೇದಿಕೆಯಿಲ್ಲದೆ ಪರದಾಡುತ್ತಿದ್ದ ಅನೇಕರಿಗೆ ಯೂಟ್ಯೂಬ್ ವರದಾನವಾಗಿದೆ. ಇದನ್ನು ಸಮರ್ಪಕವಾಗಿ ಬಳಸಿ ತಮ್ಮ ಪ್ರತಿಭೆಯನ್ನು ಬಳಕೆದಾರರಿಗೆ ತಲುಪಿಸುತ್ತಲೇ ತಮ್ಮ ಹಿಂಬಾಲಕರ ಸಂಖ್ಯೆಯನ್ನೂ ವೃದ್ಧಿಸಿಕೊಂಡು ಯಶಸ್ಸಿನ ಮೇರನ್ನು ತಲುಪಿದವರು ಅದೆಷ್ಟೋ ಜನ. ಹೀಗಾಗಿ, ಈ ದಿನಗಳಲ್ಲಿ ಯೂಟ್ಯೂಬರ್ ಅನ್ನೋದು ಇದೀಗ ಒಂದು ಪದವಿ ಮತ್ತು ಹುದ್ದೆ.
ಜನಪ್ರಿಯತೆಯ ದೃಷ್ಟಿಯಿಂದ ಯೂಟ್ಯೂಬರ್​ಗಳು ಯಾವ ಸಿನಿಮಾ ಮತ್ತು ಕ್ರೀಡಾತಾರೆಗಳಿಗೂ ಕಮ್ಮಿಯಿಲ್ಲ. ಕೋಟ್ಯಂತರ ಅಭಿಮಾನಿಗಳನ್ನು ದೇಶ, ಭಾಷೆಗಳ ಗಡಿಯನ್ನು ಮೀರಿ ಸಂಪಾದಿಸಿರುವ ಅನೇಕ ಪ್ರತಿಭಾವಂತರು ಇಲ್ಲಿದ್ದಾರೆ. ಅಭಿಮಾನಿಗಳನ್ನು ಗಳಿಸಿದ ಮೇಲೆ ಅವರ ಸಂಖ್ಯೆಯ ಮೇಲೆ ಕಣ್ಣಿಟ್ಟು ತನ್ನ ಚಾನೆಲ್ ಮೇಲೆ ಅವರ ಆಸಕ್ತಿ ಕುಂದದಂತೆ ನೋಡಿಕೊಳ್ಳಲು ಯೂಟ್ಯೂಬರ್​ಗಳೂ ಪಡಬಾರದ ಕಷ್ಟಗಳನ್ನು ಪಡಬೇಕಾಗುತ್ತದೆ. ಕೆಲವೊಮ್ಮೆ ಇಂತಹ ಗಿಮಿಕ್​ಗಳೇ ಅವರ ಚಾನೆಲ್​ಗಿಂತ ಹೆಚ್ಚು ಮಜಾ ನೀಡುತ್ತವೆ. ಇತ್ತೀಚೆಗೆ ಅಂತಹುದೊಂದು ಪ್ರಹಸನ ಭಾರಿ ಚರ್ಚೆಯಲ್ಲಿದೆ.
2017ರ ಒಂದು ದಿನ ಇಂಗ್ಲೆಂಡ್ ಮೂಲದ ಜನಪ್ರಿಯ ಯೂಟ್ಯೂಬರ್​ಗಳಾದ ಜೋ ವೆಲ್ಲರ್ ಮತ್ತು ಥಿಯೋ ಬೇಕರ್ ತಾವಿಬ್ಬರೂ ಬಾಕ್ಸಿಂಗ್ ಪಂದ್ಯವನ್ನಾಡುತ್ತಿರುವ ವಿಡಿಯೋವೊಂದನ್ನು ಯೂಟ್ಯೂಬ್​ನಲ್ಲಿ ಹಂಚಿಕೊಂಡರು. ಜೋ ವೆಲ್ಲರ್ ಗೀತರಚನೆಕಾರ ಹಾಗೂ ಗಾಯಕರಾಗಿದ್ದರೆ ಥಿಯೋ ಬೇಕರ್ ಫುಟ್ಬಾಲ್ ವಿಮರ್ಶಕ. ಜತೆಗೆ ಇಬ್ಬರೂ ಲಕ್ಷಗಟ್ಟಲೇ ಹಿಂಬಾಲಕರನ್ನು ಹೊಂದಿರುವಂಥವರು. ಈ ಜಿಗ್ರಿಗಳು ತಮಾಷೆಗೆಂದು ಹರಿಬಿಟ್ಟ ವಿಡಿಯೋ ಎರಾ›ಬಿರ್ರಿ ಜನಪ್ರಿಯವಾಗಿ ಕೋಟಿಗಟ್ಟಲೇ ವೀಕ್ಷಣೆ ಪಡೆಯಿತು. ಈ ವಿಡಿಯೋ ನೋಡಿದ ಮತ್ತೊಬ್ಬ ಜನಪ್ರಿಯ ಯೂಟ್ಯೂಬರ್ ಕೆಎಸೈ ಇವರಿಬ್ಬರ ಪಂದ್ಯದ ಜಯಶಾಲಿಯನ್ನು ನಾನು ಕಾದಾಡುತ್ತೇನೆ ಎಂದು ಕಾಮೆಂಟಿಸಿದ. ಅಸಲಿಗೆ ಕೆಎಸೈ ಹೇಳಿದ್ದು ಕೂಡ ತಮಾಷೆಯೇ ಆಗಿತ್ತು. ಆದರೆ, ತಮಾಷೆಗೆ ಜೋ ವೆಲ್ಲರ್ ಪಂಥಾಹ್ವಾನವನ್ನು ಸ್ವೀಕರಿಸಿರುವ ಪ್ರತಿಕ್ರಿಯೆ ನೀಡಿದ್ದು ಕೆಎಸೈಗೆ ಇರುಸುಮುರುಸಾದರೂ ಹಿಂದಡಿಯಿಡುವಂತಿರದ ಕಾರಣಕ್ಕೆ ಬಾಕ್ಸಿಂಗ್ ಪಂದ್ಯಾವಳಿಗಳ ಆಯೋಜಕನಾದ ಆಲಿವರ್​ನನ್ನು ಪಂದ್ಯ ಆಯೋಜಿಸಲು ಸಂರ್ಪಸಿದ. ಯೂಟ್ಯೂಬ್​ನಲ್ಲಿ ಬುರುಡೆ ಬಿಟ್ಟು ಹಿಂಬಾಲಕರನ್ನು ಪಡೆದಿರುವ ಇಬ್ಬರ ಕಾದಾಟಕ್ಕೆ ಏಳುಸಾವಿರ ವೀಕ್ಷಕರ ಸಾಮರ್ಥ್ಯದ ತನ್ನ ಕ್ರೀಡಾಂಗಣ ಖಾಲಿ ಹೊಡೆಯುವ ಎಲ್ಲ ಲಕ್ಷಣಗಳೂ ಕಂಡುಬಂದ ಕಾರಣಕ್ಕೆ ಮೊದಲಿಗೆ ಸಮ್ಮತಿಸದ ಆಲಿವರ್​ನನ್ನು ಅದ್ಹೇಗೋ ಕೆಎಸೈ ಒಪ್ಪಿಸಿ ಪಂದ್ಯವನ್ನು ಘೊಷಿಸಲು ಯಶಸ್ವಿಯೂ ಆದ. ಪಂದ್ಯಕ್ಕೆ ಮುಹೂರ್ತ ನಿಕ್ಕಿಯಾದ ತಕ್ಷಣವೇ ಇಬ್ಬರ ಕಡೆಯಿಂದಲೂ ಎದುರಾಳಿಯನ್ನು ಹಂಗಿಸುವ, ಕಿಚಾಯಿಸುವ ಮಾತುಗಳು ಬರಲಾರಂಭಿಸಿದವು. ಮಜವೆಂದರೆ ಈ ಪಂದ್ಯದ ಟಿಕೆಟ್ ಆನ್​ಲೈನ್​ನಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಬಿಕರಿಯಾಗಿ ಆಯೋಜಕರ ಊಹೆಯನ್ನೇ ಉಲ್ಟಾ ಮಾಡಿದವು. 2018ರ ಫೆಬ್ರುವರಿ 3ರಂದು ಆಯೋಜಿತವಾದ ಈ ಪಂದ್ಯವನ್ನು ಯೂಟ್ಯೂಬ್​ನಲ್ಲಿ 20 ಮಿಲಿಯನ್ (2 ಕೋಟಿ) ಜನರು ವೀಕ್ಷಿಸಿ ಹೊಸ ದಾಖಲೆ ಬರೆದರು. ಜಿದ್ದಾಜಿದ್ದಿ ಪಂದ್ಯದಲ್ಲಿ ಕೊನೆಗೂ ಗೆದ್ದ ಕೆಎಸೈ ಆ ಭರದಲ್ಲಿ ಮತ್ತೊಬ್ಬ ಜನಪ್ರಿಯ ಯೂಟ್ಯೂಬರ್ ಜೇಕ್ ಪಾಲ್​ನನ್ನು ತನ್ನ ಜೊತೆ ಕಾದಾಡಲು ಆಹ್ವಾನಿಸಿದ. ಈ ಪಂದ್ಯವಂತೂ ವೀಕ್ಷಣೆ ಮತ್ತು ಜನಪ್ರಿಯತೆಯಲ್ಲಿ ಹೊಸ ದಾಖಲೆ ಬರೆದು ಖುದ್ದು ಬಾಕ್ಸಿಂಗ್ ಲೋಕದ ಸೂಪರ್ ಸ್ಟಾರ್ ಮೈಕ್ ಟೈಸನ್ ಈ ಯೂಟ್ಯೂಬರ್​ಗಳು ಬಾಕ್ಸಿಂಗ್​ಗೆ ಮರುಹುಟ್ಟು ನೀಡಿದ್ದಾರೆಂದು ಶಹಬ್ಬಾಸಗಿರಿ ನೀಡಿದ. ಹೀಗೆ ಆರಂಭವಾದ ಯೂಟ್ಯೂಬ್ ಬಾಕ್ಸಿಂಗ್ ಮುಂದೆ ಟಿಕ್​ಟಾಕ್, ಕಿರುತೆರೆ ತಾರೆಗಳನ್ನೂ ಸೇರಿಸಿಕೊಂಡು ಸೆಲೆಬ್ರಿಟಿ ಬಾಕ್ಸಿಂಗ್ ಎಂಬ ಹೆಸರಿನೊಂದಿಗೆ ನಿರಂತರವಾಗಿ ಆಯೋಜನೆಗೊಳ್ಳುತ್ತ ಜನಪ್ರಿಯತೆಯ ಉತ್ತುಂಗಕ್ಕೇರಿ ಮುನ್ನಡೆಯುತ್ತಿದೆ.
ಸದ್ಯಕ್ಕೆ ಟ್ರೆಂಡಿಂಗ್​ನಲ್ಲಿರುವ ಸೆಲೆಬ್ರಿಟಿ ಬಾಕ್ಸಿಂಗ್​ಗೆ ಇತ್ತೀಚೆಗೆ ಮತ್ತೊಂದು ತಿರುವು ಸಿಕ್ಕಿದೆ. ಎಲಾನ್ ಮಸ್ಕ್ ಗೊತ್ತಲ್ಲ. ಟೆಸ್ಲಾ, ಸ್ಪೇಸ್ ಎಕ್ಸ್ ಕಂಪನಿಗಳ ಒಡೆಯ. ಜಗತ್ತಿನ ಅತ್ಯಂತ ಸಿರಿವಂತ ಉದ್ಯಮಿ. 2016ರಲ್ಲಿ ಎಲಾನ್ ಮಸ್ಕ್ ತನ್ನ ಕಂಪನಿಯಾದ ಸ್ಪೇಸ್ ಎಕ್ಸ್ ಜತೆಗೆ ಫೇಸ್ ಬುಕ್ ಮಾಲೀಕ ಮಾರ್ಕ್ ಝುುಕಬರ್ಗ್ ಮಾಡಿಕೊಂಡ ಒಪ್ಪಂದದನ್ವಯ ಫಾಲ್ಕನ್ 9 ಎಂಬ ಉಪಗ್ರಹವನ್ನು ಸ್ಪೇಸ್ ಎಕ್ಸ್​ನ ರಾಕೆಟ್​ನಲ್ಲಿ ಹಾರಿಸಬೇಕಿತ್ತು. ಆದರೆ, ದುರದೃಷ್ಟವಶಾತ್ ಅದರ ಮೇಲೆ ಪರೀಕ್ಷೆಗಳು ನಡೆಯುತ್ತಿದ್ದ ಸಮಯದಲ್ಲಿಯೇ ರಾಕೆಟ್ ಸ್ಪೋಟಿಸಿ ಉಪಗ್ರಹ ಸುಟ್ಟು ಪೂರ್ತಿ ಯೋಜನೆಯೇ ಟುಸ್ ಪಟಾಕಿಯಾಯ್ತು. ಈ ಯೋಜನೆಯ ಮೇಲೆ ಕಂಪನಿಯು ಹೂಡಿದ್ದ ಅಂದಾಜು ಇನ್ನೂರು ಮಿಲಿಯನ್ ಡಾಲರ್​ಗೆ (1653 ಕೋಟಿ ರೂಪಾಯಿ) ಎಳ್ಳುನೀರು ಬಿಡುವಂತಾಗಿದ್ದಕ್ಕೆ ಕೋಪಿಸಿಕೊಂಡಿದ್ದ ಝುುಕರ್ಬರ್ಗ್ ಹಲವೆಡೆ ಎಲಾನ್ ಮಸ್ಕ್ ಮೇಲೆ ಬಹಿರಂಗವಾಗಿಯೇ ಕೋಪ ವ್ಯಕ್ತಪಡಿಸಿದ್ದ. ಮುಂದೆ ಈ ವಿಷಯದ ಸಂಬಂಧ ಇಬ್ಬರೂ ಹಲವು ವೇದಿಕೆಗಳಲ್ಲಿ ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದಿದೆ. ಇಲ್ಲಿಂದ ಆರಂಭವಾದ ಇಬ್ಬರ ದುಷ್ಮನಿಯು ಸಮಯ ಸಂದರ್ಭ ಸಿಕ್ಕಾಗಲೆಲ್ಲ ಹೊರಬರುತ್ತಲೇ ಇತ್ತು.
ಇದರ ಮೇಲೆಯೂ ಇತ್ತೀಚಿನ ತಾಂತ್ರಿಕ ಬೆಳವಣಿಗೆಗಳ ಕುರಿತು ಇಬ್ಬರಲ್ಲಿಯೂ ಹಲವು ಭಿನ್ನಾಭಿಪ್ರಾಯಗಳಿವೆ. ಅದರಲ್ಲಿ ಮುಖ್ಯವಾದದ್ದು ಕೃತಕ ಬುದ್ಧಿಮತ್ತೆ. ಕೃತಕ ಬುದ್ಧಿಮತ್ತೆಯನ್ನು ಝುುಕರ್ಬರ್ಗ್ ಹಲವೆಡೆ ಸಮರ್ಥಿಸಿಕೊಂಡಿದ್ದರೆ, ಎಲಾನ್ ಮಸ್ಕ್ ಇದು ಮುಂದಿನ ಪೀಳಿಗೆಗೆ ಮಾರಕವಾಗಬಲ್ಲ ಸಾಮರ್ಥ್ಯವನ್ನು ಹೊಂದಿದ್ದು ಇದರ ಬಗ್ಗೆ ಎಚ್ಚರ ವಹಿಸುವ ಅಗತ್ಯತೆಯನ್ನು ಪ್ರತಿಪಾದಿಸುತ್ತ ಬಂದಿದ್ದಾನೆ. ಈ ಕುರಿತು ಇಬ್ಬರಿಗೂ ಸಾಮಾಜಿಕ ಜಾಲತಾಣಗಳಲ್ಲಿಯೂ ಹಲವು ಬಾರಿ ವಾದವಿವಾದಗಳಾಗಿದ್ದುಂಟು. ಇಷ್ಟು ಸಾಲದಕ್ಕೆ ಮಸ್ಕ್​ನ ಟ್ವೀಟರ್​ಗೆ ಎದುರಾಗಿ ಇತ್ತೀಚೆಗಷ್ಟೇ ಝುುಕರ್ಬರ್ಗ ಥ್ರೆಡ್ಸ್ ಬಿಡುಗಡೆ ಮಾಡಿದ ನಂತರವಂತೂ ಉರಿಯುತ್ತಿರುವ ಬೆಂಕಿಗೆ ತುಪ್ಪ ಹಾಕಿದಂತಿದೆ. ಝುುಕರ್ಬರ್ಗ್ ಥ್ರೆಡ್ಸ್ ಬಿಡುಗಡೆ ಮಾಡುವ ಸುಳಿವು ಸಿಕ್ಕ ಕೂಡಲೇ ಮಸ್ಕ್ ಅದರ ಕುರಿತು ವ್ಯಂಗ್ಯದ ಟ್ವೀಟ್ ಮಾಡಿದ್ದಾನೆ. ಇದಕ್ಕೆ ಪ್ರತಿಯಾಗಿ ಯಾರೋ ಯಾವುದಕ್ಕೂ ಹುಷಾರಾಗಿರಿ ಝುುಕರ್ಬರ್ಗ್ ಬ್ರೇಝಿಲ್ ಮೂಲದ ಸಮರ ಕಲೆ ಜಿಜೂಜಿಟ್ಸುನ ಪರಿಣತ ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಕ್ಕೆ ಝುುಕರ್ಬರ್ಗ್ ಸ್ಥಳ ತಿಳಿಸಿ, ನಾನಂತೂ ರೆಡಿ ಎಂಬರ್ಥದಲ್ಲಿ ಉತ್ತರಿಸಿದ್ದೇ ಬಂತು ಮತ್ತೆ ಇಬ್ಬರಲ್ಲಿ ಘರ್ಷಣೆ ಶುರುವಾಗಿದೆ. ಇಬ್ಬರೂ ತಾವು ಬಾಕ್ಸಿಂಗ್ ಕಲಿಗಳ ಜತೆಗೆ ತರಬೇತಿ ನಡೆಸುತ್ತಿರುವ ಚಿತ್ರಗಳನ್ನು ತಮ್ಮ ತಮ್ಮ ಜಾಲತಾಣಗಳಲ್ಲಿ ಪ್ರಕಟಿಸಿರುವುದು ಸದ್ಯದಲ್ಲೇ ಇಬ್ಬರ ಜಗಳ ಬೀದಿಗೆ ಬರುವ ಲಕ್ಷಣ ದಟ್ಟವಾಗುವಂತೆ ಗೋಚರಿಸುತ್ತಿದೆ. ಇದರ ನಡುವೆ ಈ ಬಾಕ್ಸಿಂಗ್ ಪಂದ್ಯ ಗ್ರೀಸ್​ನಲ್ಲಿ ನಡೆಸಲು ಅಲ್ಲಿನ ಆಯೋಜಕರು ಝುುಕರ್ಬರ್ಗ್​ಗೆ ಸಂರ್ಪಸಿರುವ ಸುದ್ದಿ ಹರಿದಾಡುತ್ತಿದೆ. ಮತ್ತೊಂದೆಡೆ ಪಂದ್ಯದ ಫಲಿತಾಂಶದ ಕುರಿತು ಚರ್ಚೆಗಳೂ ಜೋರಾಗಿ ಜಾಲತಾಣಗಳಲ್ಲಿ ನಡೆಯುತ್ತಿದ್ದರೆ ಇನ್ಯಾರೋ ಅವಕಾಶವಾದಿ ಇವರಿಬ್ಬರ ಕಾದಾಟದ ವಿಡಿಯೋ ಗೇಮ್ ಕೂಡ ಹರಿಬಿಟ್ಟಿದ್ದಾರೆ.
ಒಟ್ಟಿನಲ್ಲಿ ಸುದ್ದಿ ಮಾಡುವ ಜನರಿಗಾಗಿ ಮೀಸಲಿಟ್ಟಿರುವ ಹೊಸ ಜಮಾನಾದ ಮಾಧ್ಯಮಗಳ ಮಾಲಿಕರೇ ಇದೀಗ ಬೇಡದ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಸಿರಿವಂತರ ಈ ಸವಾಲ್ ಸೆಲೆಬ್ರಿಟಿ ಬಾಕ್ಸಿಂಗ್ ಎಂಬ ಹೊಸ ಟ್ರೆಂಡ್ ಇನ್ನೆಲ್ಲಿಗೆ ಕೊಂಡು ಹೋಗ ಲಿದೆಯೋ ಇನ್ನೇನೇನು ನಾವು ನೋಡಲಿದ್ದೇವೆಯೋ ಆ ಸಮಯವೇ ಹೇಳಲಿದೆ.
(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)
ನಿದ್ರಿಸಲು ಯಾರಾದರೂ ಅಡ್ಡಿಪಡಿಸಿದರೆ ಅವರ ವಿರುದ್ಧ ಕೇಸು ದಾಖಲಿಸಬಹುದಾ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − six =
Remember me
