ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರಕ್ಕೆ ಬಂದು ಹೆಣ್ಣು ಭ್ರೂಣ ತೆಗೆಸಿ ಕೊಂಡಿದ್ದ ಮಹಾರಾಷ್ಟ್ರದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಇವರನ್ನು ಮಧ್ಯವರ್ತಿಯೊಬ್ಬರು ಮಹಾಲಿಂಗಪುರದ ಆಸ್ಪತ್ರೆಯೊಂದರ ಮಾಜಿ ಆಯಾ ಬಳಿ ಕರೆದುಕೊಂಡು ಬಂದಿದ್ದರು. ಗರ್ಭಪಾತ ಮಾಡಿಸಿಕೊಂಡು ಹೋಗುವಾಗ ಮಾರ್ಗಮಧ್ಯೆ ಆಕೆ ಮೃತಪಟ್ಟಿದ್ದು, ಅಲ್ಲಿನ ಆಸ್ಪತ್ರೆಯ ವೈದ್ಯರು ಪೊಲೀಸರಿಗೆ ವಿಷಯ ತಿಳಿಸಿದ ಮೇಲೆ ಭ್ರೂಣಹತ್ಯೆ ಪ್ರಕರಣ ಬಯಲಾಗಿದೆ. ಅಬಾರ್ಷನ್ ಮಾಡಿದ ಮಹಿಳೆ ವಿರುದ್ಧ ಈ ಹಿಂದೆಯೂ ಇಂಥ ಪ್ರಕರಣಗಳು ದಾಖಲಾಗಿದ್ದವು. ಆದರೂ ಅದೇ ಕೆಲಸ ಮುಂದುವರಿಸಿದ್ದರು. ಅಂದರೆ ಹಿಂದಿನ ಪ್ರಕರಣಗಳಲ್ಲಿ ಸರಿಯಾದ ತನಿಖೆ ನಡೆದಿಲ್ಲ, ಈ ಮಹಿಳೆ ವಿರುದ್ಧ ಕ್ರಮವಾಗಿಲ್ಲ, ಹಾಗಾಗಿಯೇ ಆಕೆ ಇಂತಹ ಕೃತ್ಯ ಎಸಗುವುದನ್ನು ಧೈರ್ಯವಾಗಿ ಮುಂದುವರಿಸಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಇನ್ನೊಂದೆಡೆ ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ಹೆಣ್ಣುಭ್ರೂಣವನ್ನು ರಹಸ್ಯವಾಗಿ ತೆಗೆಸಿಕೊಂಡ ಕೆ.ಆರ್. ನಗರ ಮೂಲದ ಇಬ್ಬರು ಮಹಿಳೆಯರು ನಂತರದ ದಿನಗಳಲ್ಲಿ ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಕೆ.ಆರ್. ನಗರದ ಆಸ್ಪತ್ರೆಗಳಲ್ಲಿ ದಾಖಲಾದರೆ ತಮ್ಮ ಕೃತ್ಯ ಬೆಳಕಿಗೆ ಬರಬಹುದೆಂಬ ಭಯದಿಂದ ಮತ್ತೆ ಪಾಂಡವಪುರಕ್ಕೇ ಬಂದು ಭ್ರೂಣ ತೆಗೆಸಿಕೊಂಡ ಸ್ಥಳದಲ್ಲಿಯೇ ಚಿಕಿತ್ಸೆ ಪಡೆಯಲು ಮುಂದಾಗಿದ್ದರು. ಆದರೆ ಗರ್ಭಪಾತ ಮಾಡಿಸಿದ್ದ ಶುಶ್ರೂಷಕಿ ಅವರಿಬ್ಬರನ್ನೂ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಕೈತೊಳೆದುಕೊಂಡಿದ್ದರು. ದುರದೃಷ್ಟವಶಾತ್ ಆ ಪೈಕಿ ಒಬ್ಬ ಮಹಿಳೆ ಮೃತಪಟ್ಟಿದ್ದಾರೆ. ಈ ವಿಷಯವನ್ನು ಆರೋಗ್ಯ ಇಲಾಖೆಯ ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ್ದಾರೆ.
ಕಳೆದ ವರ್ಷ ರಾಜ್ಯದಲ್ಲಿ ಹೆಣ್ಣುಭ್ರೂಣ ಪತ್ತೆಯ ಜಾಲ ಮತ್ತು ಹತ್ಯೆಯ ಹಲವಾರು ಪ್ರಕರಣಗಳು ಒಮ್ಮಿಂದೊಮ್ಮೆಲೇ ಬಹಿರಂಗಗೊಂಡು ತೀವ್ರ ಸಂಚಲನಕ್ಕೆ ಕಾರಣವಾಗಿದ್ದವು. ಈಗ ಮತ್ತೆ ಅದೇ ರೀತಿಯ ವರದಿಗಳು ಬಂದಿದ್ದು, ಇದು ರಾಜ್ಯದಲ್ಲಿ ಭ್ರೂಣಹತ್ಯೆಯ ಸರಣಿ ಮುಂದುವರಿದಿರುವುದನ್ನು ತೋರಿಸುತ್ತದೆ. ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಕಠಿಣ ಕಾನೂನು ಈಗಾಗಲೇ ಜಾರಿಯಲ್ಲಿದೆ. ಕಠಿಣ ನಿಯಮಗಳಿದ್ದರೂ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ನಿರಂತರವಾಗಿ ನಡೆಯುತ್ತಿರುವುದು ಆತಂಕಕಾರಿ ವಿಷಯ. ಕಾನೂನಿನ ನಿಯಮಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸದೇ ಇರುವುದು ಇದಕ್ಕೆ ಕಾರಣವಿರಬಹುದು. ಅಥವಾ ಈ ಸಂಗತಿಗಳೆಲ್ಲ ಅತ್ಯಂತ ಗುಟ್ಟಾಗಿ ನಡೆಯುವುದೂ ಒಂದು ಕಾರಣವಿರಬಹುದು. ಏನಾದರೂ ಏರುಪೇರು ಸಂಭವಿಸಿದಾಗ ಮಾತ್ರವೇ ಗುಟ್ಟು ರಟ್ಟಾಗುತ್ತದೆ. ‘ಹೆಣ್ಣು ಹುಟ್ಟಿದರೆ ಕುಟುಂಬಕ್ಕೆ ಹೊರೆ’ ಎಂಬ ಹಳೇ ಕಾಲದ ಭಾವನೆ ಈಗಲೂ ಕೆಲವರಲ್ಲಿ ಬೇರೂರಿರುವುದೇ ಈ ಪಿಡುಗು ಇನ್ನೂ ಮುಂದುವರಿಯುತ್ತಿರುವುದಕ್ಕೆ ಮುಖ್ಯ ಕಾರಣ. ಇತ್ತೀಚಿನ ದಶಕಗಳಲ್ಲಿ ಮಹಿಳೆಯರು ಸುಶಿಕ್ಷಿತರಾಗಿ, ಉದ್ಯೋಗಸ್ಥರಾಗಿ, ಕುಟುಂಬಕ್ಕೆ ಆಧಾರಸ್ತಂಭ ವಾಗಿ ತಮ್ಮ ಮಹತ್ವ ಏನೆಂಬುದನ್ನು ತೋರಿಸಿದ್ದಾರೆ. ಇಡೀ ಸಮಾಜಕ್ಕೆ ಮತ್ತು ಸ್ವಂತ ಕುಟುಂಬಕ್ಕೆ ತಮ್ಮ ಅಸ್ತಿತ್ವ ಎಷ್ಟು ಪ್ರಯೋಜನಕರ ಎಂಬುದನ್ನು ಪದೇಪದೆ ಸಾಬೀತು ಮಾಡಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಕೆಲವರಲ್ಲಿ ಹೆಣ್ಣಿನ ಬಗ್ಗೆ ಇರುವ ತಾತ್ಸಾರ ಮನೋಭಾವ ಹೋಗಿಲ್ಲ. ಈ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಜನಜಾಗೃತಿ ಮೂಡಿಸ ಬೇಕಾದ ಜವಾಬ್ದಾರಿ ಸ್ವಯಂಸೇವಾ ಸಂಘಟನೆಗಳು ಮತ್ತು ಸರ್ಕಾರದ ಮೇಲಿದೆ.
ಕನ್ಯಾಕುಮಾರಿಯಲ್ಲಿ ನಾಳೆ ಮೋದಿ ಧ್ಯಾನ: ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × 1 =
Remember me
