ಬೆಂಗಳೂರು:ಕಾಂತಾರ ಎನ್ನುವ ಟೈಟಲ್​ ಕೇಳಿದ್ರೆ ಸಾಕು ಮೈ ರೋಮಾಂಚನವಾಗುತ್ತದೆ. ಈ ಸಿನಿಮಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಪ್ರತಿಯೊಬ್ಬರು ಹರಸಿ..ಹಾರೈಸಿ ಮೆಚ್ಚಿದ ಸಿನಿಮಾ ಕಾಂತಾರ. ಈ ಸಿನಿಮಾ ತಂಡ ಟೀಸರ್, ಪೋಸ್ಟರ್​ ರೀಲಿಸ್​ ಮಾಡಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ಕ್ಯೂರಾಸಿಟಿ ಮೂಡಿಸಿದೆ. ಈ ಕುರಿತಾಗಿ ನಟ ರಿಷಬ್​ ಶೆಟ್ಟಿ ಅವರು ಮಾತನಾಡಿ ಕೆಲವು ಇಂಟ್ರಸ್ಟಿಂಗ್​ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ರಿಷಬ್​ ಶೆಟ್ಟಿ , ಕಾಂತಾರ ಸಿನಿಮಾದ ಸಂಪೂರ್ಣ ಸಕ್ಸಸ್​​ನ್ನು ನಾನು ಕನ್ನಡಿಗರಿಗೆ ಅರ್ಪಿಸುತ್ತೇನೆ. ಕಾಂತಾರ ಸಿನಿಮಾಗಿಂತ ಮೊದಲು ಏನು ನಡೆಯಿತ್ತು ಎನ್ನುವುದನ್ನು ನಾವು ಹೇಳಲು ಹೋರಟಿದ್ದೇವೆ. ಈ ಸಿನಿಮಾಕ್ಕೂ ನಿಮ್ಮ ಆಶಿರ್ವಾದ ಇರಲಿ. ಈ ಹಿಂದೆ ನೀವು ನೀಡಿದ್ದ ಪ್ರೋತ್ಸಾಹದ ಜವಾಬ್ದಾರಿಯೊಂದಿಗೆ ಈ ಚಿತ್ರ ತಂಡ ಈಗಲೂ ಕೆಲಸ ಮಾಡಲಿದೆ. ಕಾಂತಾರ ಅಧ್ಯಾಯದ 1ನ್ನು ಈಗ ಶುರು ಮಾಡಿದ್ದೇವೆ. ಕಾಂತರ ಸಿನಿಮಾವನ್ನು ಈಗಾಗಲೇ ನೋಡಿ ಅದ್ಭುತವಾದ ಹಿಟ್​ ಸಿನಿಮಾವಾಗಿ ಮಾಡಿದ್ದೀರ ಎಂದಿದ್ದಾರೆ.

ಈ ಸಿನಿಮಾ ಬಗ್ಗೆ ನಾನು ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ. ಮಾತಿಗಿಂತ ಕೆಲಸ ಮುಖ್ಯವಾಗುತ್ತದೆ. ಈಗಾಗಲೇ ಸಿನಿಮಾ ಕುರಿತಾಗಿ ಒಂದು ಗ್ಲಿಮ್ಸ್​, ಪೋಸ್ಟರ್​ ಕೂಡಾ ಬಿಟ್ಟಿದ್ದೇವೆ. ಅದೇ ಸಿನಿಮಾ ಬಗ್ಗೆ ಒಂದುಷ್ಟು ಕಥೆ ಹೇಳುತ್ತದೆ. ಕನ್ನಡ ಕಲಾವಿದರಿಗೆ ಮೊದಲ ಆದ್ಯತೆಯನ್ನು ಈ ಸಿನಿಮಾದಲ್ಲಿ ನೀಡಲಾಗುತ್ತದೆ. ನಾವು ಈ ಸಿನಿಮಾವನ್ನು ಮಾಡಿದ್ದೇ ಮೊದಲು ಕನ್ನಡದಲ್ಲಿ. ಈ ಬಾರಿ ಮತ್ತಷ್ಟು ಹೊಸ ಪ್ರತಿಭೆಗಳನ್ನು ಹುಡುಕುತ್ತಿದ್ದೇವೆ. ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಕಲಾವಿದರನ್ನು ಹುಡುಕುವ ಪ್ರಯತ್ನ ನಡೆಯುತ್ತಿದೆ. ಥಿಯೇಟರ್​ ಆರ್ಟಿಸ್ಟ್​ಗಳನ್ನು ಹುಡುಕುವ ಪ್ರಯತ್ನ ನಡೆಯುತ್ತಿದೆ. ಕಥೆ ಏನು ಕೇಳುತ್ತದೆ ಎಂಬುವ ಆಧಾರದ ಮೇಲೆ  ಚಿತ್ರತಂಡ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ಈ ಸಿನಿಮಾ ಹೀರೋಯಿನ್​ ಯಾರು ಎನ್ನುವ ಪ್ರಶ್ನೆಗೆ ಉತ್ತರಿಸಿದ ರಿಷಬ್​ ಅವರು,  ಈ ಸಿನಿಮಾಕ್ಕಲೆ ನನ್ನನ್ನು ಮಾತ್ರ ನಾನು ಪೈನಲ್​ ಮಾಡಿದ್ದೇನೆ. ಈ ಸಿನಿಮಾ ಪಾತ್ರ ಆಯ್ಕೆ ಕುರಿತಾಗಿ ಯಾವುದೇ ರಿವೀಲ್​​ ಮಾಡುವುದಿಲ್ಲ. ಟೆಕ್ನಿಕಲ್​ ಟೀಮ್​ನಲ್ಲಿ ಯಾವುದೇ ಬದಲಾವಣೆ ಇಲ್ಲ. ಹೊಸ ತಂತ್ರಜ್ಞರೂ ಕೂಡಾ ಸೇರಲಿದ್ದಾರೆ. ಸಿನಿಮಾದಲ್ಲಿ ಮೊದಲಿದ್ದವರು ಹಾಗೂ ಹೊಸ ಕಲಾವಿದರ ಬಳಗ ಇರಲಿದೆ ಎಂದು ಹೇಳಿದ್ದಾರೆ.

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 + 18 =
Remember me
