ತುಮಕೂರು:ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಚಲಾಯಿಸಿದ್ದರಿಂದ ಉಂಟಾಗಿರುವ ಅಡ್ಡಪರಿಣಾಮ ಅತಿರೇಕಕ್ಕೆ ಹೋಗಿದ್ದು, ಮಾಜಿ ಸಿಎಂ ಹಾಗೂ ಶಾಸಕರ ಬೆಂಬಲಿಗರ ಮಧ್ಯೆ ಇಂದು ದ್ವೇಷ ಜ್ವಾಲೆಯಾಗಿ ಹೊರಹೊಮ್ಮಿದೆ.
ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್​ ಶಾಸಕ, ಗುಬ್ಬಿ ಕ್ಷೇತ್ರದ ಶ್ರೀನಿವಾಸ್ ಅಡ್ಡಮತದಾನ ಮಾಡಿದ್ದರಿಂದ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಕಿಡಿಕಾರಿದ್ದರು. ಅದನ್ನು ವಿರೋಧಿಸಿ ಏಕವಚನದಲ್ಲೇ ಸವಾಲೊಡ್ಡುವಂತೆ ಶ್ರೀನಿವಾಸ್ ಮಾತನಾಡಿದ್ದು, ಎರಡೂ ಕಡೆಯವರ ಬೆಂಬಲಿಗರನ್ನು ರೊಚ್ಚಿಗೆಬ್ಬಿಸಿತ್ತು.
ಇದು ಮೊದಲು ಎಚ್​ಡಿಕೆ ಬೆಂಬಲಿಗರು ಶ್ರೀನಿವಾಸ್ ತಿಥಿಯ ಆಹ್ವಾನ ಪತ್ರಿಕೆ ಮಾಡಿ ಹಂಚಿದ್ದು, ಬಳಿಕ ಶ್ರೀನಿವಾಸ್ ಬೆಂಬಲಿಗರೂ ಎಚ್​ಡಿಕೆ ಕೈಲಾಸ ಸಮಾರಾಧನೆಯ ಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದರು.
ಇಂದು ಇದು ಮತ್ತೊಂದು ಹಂತಕ್ಕೆ ತಲುಪಿದ್ದು, ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಕುಮಾರಸ್ವಾಮಿ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಭ್ರಷ್ಟ ಕುಮಾರಸ್ವಾಮಿ, ನಯವಂಚಕ ಕುಮಾರಸ್ವಾಮಿ, ಊಸರವಳ್ಳಿ ಕುಮಾರಸ್ವಾಮಿ ಎಂದು ಧಿಕ್ಕಾರ ಕೂಗಿದ್ದಲ್ಲದೆ ಕುಮಾರಸ್ವಾಮಿ ಪ್ರತಿಕೃತಿಗೆ ಬೆಂಕಿ ಹಚ್ಚಿ, ಸತ್ತ ಸತ್ತ ಕುಮಾರಸ್ವಾಮಿ ಸತ್ತ ಎಂದು ಶ್ರೀನಿವಾಸ್ ಬೆಂಬಲಿಗರು ದ್ವೇಷ ವ್ಯಕ್ತಪಡಿಸಿದ್ದಾರೆ.
ರಾಜ್ಯಸಭೆ ‘ಅಡ್ಡ’ಪರಿಣಾಮ: ಶಾಸಕರ ತಿಥಿ ಪೋಸ್ಟರ್​ಗೆ ಪ್ರತಿಯಾಗಿ ಮಾಜಿ ಸಿಎಂ ಕೈಲಾಸ ಸಮಾರಾಧನೆ ಪೋಸ್ಟರ್!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + two =
Remember me
