ಮಂಡ್ಯ:ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಬಜೆಟ್​ನಲ್ಲಿ ಘೊಷಿಸಿರುವ ನದಿ ಜೋಡಣೆ ವಿಷಯ ಜಿಲ್ಲೆಯಲ್ಲಿ ಕಾಮೋಡ ಕವಿಯುವಂತೆ ಮಾಡಿದೆ. ಅಲ್ಲದೆ ಯೋಜನೆಯಿಂದ ತಮಿಳುನಾಡು, ಆಂಧ್ರ, ತೆಲಂಗಾಣಕ್ಕಷ್ಟೇ ಉಪಯೋಗವೆಂದು ಜಲತಜ್ಞರು ಹೇಳಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.
ಹಲವು ವರ್ಷದಿಂದ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ತಾರತಮ್ಯದ ನೀತಿ ಅನುಸರಿಸಲಾಗುತ್ತಿದೆ. ಅಂತೆಯೇ ಕಾವೇರಿ-ಪೆನ್ನಾರ್ ನದಿ ಜೋಡಣೆ ವಿಚಾರದಲ್ಲಿಯೂ ನ್ಯಾಯ ಸಿಗುವ ಸಾಧ್ಯತೆ ಇಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಪೂರಕವೆಂಬಂತೆ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೇಕೆದಾಟು ಯೋಜನೆ ಆಗಲಿ:ನದಿಗಳನ್ನು ಜೋಡಣೆ ಮಾಡುವುದರಿಂದ ರಾಜ್ಯಕ್ಕೆ ಅನುಕೂಲವಿಲ್ಲ. ಇಷ್ಟಾದರೂ ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಎಂಬಂತೆ ಬಜೆಟ್​ನಲ್ಲಿ ಘೊಷಣೆ ಮಾಡಲಾಗಿದೆ. ಯೋಜನೆಗೆ ಸಂಬಂಧಿಸಿದಂತೆ ಡಿಪಿಆರ್ ಕೂಡ ಕೊಟ್ಟಿಲ್ಲ. ಆದ್ದರಿಂದ ಇದರ ಹಿಂದಿನ ಮರ್ಮವೇನು ಎಂದು ರೈತರು ಪ್ರಶ್ನಿಸುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೆ ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಇದ್ದರೆ ರಾಜ್ಯಕ್ಕೆ ಅದರಲ್ಲಿಯೂ ಹಳೇ ಮೈಸೂರು ಭಾಗದ ಜನರಿಗೆ ಅನುಕೂಲವಾಗುವ ಮೇಕೆದಾಟು ಯೋಜನೆ ನಿರ್ವಣಕ್ಕೆ ಚಾಲನೆ ನೀಡಲಿ. ಅದನ್ನು ಬಿಟ್ಟು ಸಮಸ್ಯೆ ಎದುರಾಗುವ ಯೋಜನೆ ಅನುಷ್ಠಾನ ಬೇಕಾಗಿಲ್ಲ ಎಂದು ಸ್ಪಷ್ಟನುಡಿಗಳನ್ನಾಡುತ್ತಿದ್ದಾರೆ. ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡುವಂತಿಲ್ಲ. ರಾಜ್ಯ ಸರ್ಕಾರ ಅದರಲ್ಲಿಯೂ ಜಿಲ್ಲೆಯ ಜನಪ್ರತಿನಿಧಿಗಳು ಯೋಜನೆಗೆ ವಿರೋಧ ವ್ಯಕ್ತಪಡಿಸುವುದರ ಜತೆಗೆ ರದ್ದು ಮಾಡಿಸುವ ನಿಟ್ಟಿನಲ್ಲಿ ಹೋರಾಟ ಮಾಡಬೇಕು. ಈಗಾಗಲೆ ಕಾವೇರಿ ನ್ಯಾಯಾಧೀಕರಣದ ತೀರ್ಪಿನಿಂದಾಗಿ ಕೆಆರ್​ಎಸ್ ಡ್ಯಾಂನಲ್ಲಿ ನೀರಿದ್ದರೂ ಬಳಕೆ ಮಾಡಿಕೊಳ್ಳದಂತಹ ಸ್ಥಿತಿ ನಿರ್ವಣವಾಗಿದೆ. ನೀರು ಬಿಡುವ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲು ಹೆದರುವಂತಾಗಿದೆ. ಆದ್ದರಿಂದ ನದಿ ಜೋಡಣೆ ಯೋಜನೆ ಅವಶ್ಯಕತೆ ಇಲ್ಲ ಎನ್ನುವ ಆಕ್ರೋಶ ರೈತರಿಂದ ಕೇಳಿಬರುತ್ತಿದೆ.
ನದಿ ಜೋಡಣೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಗಳ ನಡುವೆ ವಿಸõತವಾಗಿ ಚರ್ಚೆ ನಡೆಯಬೇಕು. ಯೋಜನೆಯಿಂದ ಅನುಕೂಲವೂ ಇರಬಹುದು ಹಾಗೂ ಅನನುಕೂಲವೂ ಇದೆ. ಅಂತೆಯೇ ಪ್ರಮುಖವಾಗಿ ಈ ಯೋಜನೆಯಿಂದ ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದ ಹಿಂದಿನ ಒಪ್ಪಂದಗಳ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
|ಪಿ.ಎಂ.ನರೇಂದ್ರಸ್ವಾಮಿಮಾಜಿ ಸಚಿವ
ರಾಷ್ಟ್ರೀಯ ಪಕ್ಷಗಳು ಕರ್ನಾಟಕದ ಯಾವುದೇ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇದು ನೀರಾವರಿ, ಗಡಿ ವಿವಾದ ಸೇರಿ ಅನೇಕ ವಿಚಾರದಲ್ಲಿ ಸಾಬೀತಾಗಿದೆ. ಪ್ರಸ್ತುತ ಕೇಂದ್ರದ ವಿತ್ತ ಸಚಿವರು ಘೊಷಿಸಿರುವ ನದಿ ಜೋಡಣೆಯಿಂದ ಕರ್ನಾಟಕಕ್ಕೆ ಯಾವುದೇ ಲಾಭ ಆಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಆದ್ದರಿಂದ ಯೋಜನೆ ಬಗ್ಗೆ ಸಂಪೂರ್ಣ ಚರ್ಚೆಯಾಗಬೇಕಿದೆ. ಅಂತೆಯೇ ನೀರಾವರಿ ವಿಚಾರದಲ್ಲಿ ರಾಜ್ಯ ಸರ್ಕಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಲಹೆ ಪಡೆಯಬೇಕು.
|ಸಿ.ಎಸ್.ಪುಟ್ಟರಾಜುಮೇಲುಕೋಟೆ ಶಾಸಕ
ನದಿ ಜೋಡಣೆ ಕುರಿತು ಡಿಪಿಆರ್ ತೀರ್ಮಾನ ಬರಲಿ. ಅದರಲ್ಲಿ ಏನು ನಿರ್ಣಯ ಆಗುತ್ತೋ ನೋಡೋಣ. ಅದರಲ್ಲಿ ಒಳ್ಳೆಯದು ಇದ್ದರೆ ಖಂಡಿತ ಮುಂದು ವರಿಸೋಣ. ಕೆಟ್ಟದ್ದು ಅಂತಾ ಬಂದರೆ ಬಿಡೋಣ.
|ಬಿ.ಸಿ.ಪಾಟೀಲ್ಸಚಿವ
ಕೇಂದ್ರ ಸರ್ಕಾರ ಬಜೆಟ್​ನಲ್ಲಿ ಘೊಷಿಸಿರುವ ನದಿಗಳ ಜೋಡಣೆ ಯೋಜನೆಯಿಂದ ಭವಿಷ್ಯದಲ್ಲಿ ಒಳ್ಳೆಯದಾಗಲಿದೆ. ಆದರೆ ಇದರಲ್ಲಿ ರಾಜ್ಯಕ್ಕೆ ಅನ್ಯಾಯ ವಾದರೆ ಸಹಿಸುವ ಮಾತೇ ಇಲ್ಲ. ಕಾಂಗ್ರೆಸ್​ನವರು ಎಲ್ಲ ವಿಚಾರಗಳಲ್ಲೂ ರಾಜಕೀಯ ಮಾಡುತ್ತಾರೆ. ನದಿ ಜೋಡಣೆಯಂತಹ ಉತ್ತಮ ಯೋಜನೆಯಲ್ಲೂ ರಾಜಕೀಯ ನುಸುಳುವುದು ಸಹಿಸಲು ಸಾಧ್ಯವಿಲ್ಲ. ಯಾವುದೇ ಸರ್ಕಾರವಿರಲಿ ಒಳ್ಳೆಯ ಯೋಜನೆ ರೂಪಿಸಿದರೆ ಅದನ್ನು ಸ್ವಾಗತಿಸಬೇಕು.
|ಕೆ.ಎಸ್.ಈಶ್ವರಪ್ಪಗ್ರಾಮೀಣಾಭಿವೃದ್ಧಿ ಸಚಿವ
ನದಿ ಜೋಡಣೆಯಿಂದ ನಮ್ಮ ರಾಜ್ಯಕ್ಕೆ ಅನ್ಯಾಯ ವಾಗುವುದಾದರೆ, ಅದಕ್ಕೆ ನಾವು ಒಪ್ಪುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ನಮ್ಮ ರಾಜ್ಯದ ನೀರಿಗೆ ತೊಂದರೆ ಆಗಬಾರದು ಎಂಬುದು ನಮ್ಮ ನಿಲುವು. ರಾಜ್ಯ ಸರ್ಕಾರದ ಅನುಮತಿ ಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. ನೀರು ಹಂಚಿಕೆಯಲ್ಲಿ ಸಮಸ್ಯೆ ಆದರೆ, ನಾವು ಅನುಮತಿ ಕೊಡುವುದಿಲ್ಲ ಎಂದರು. ಸಿನಿಮಾ ಮಂದಿರಗಳಿಗೆ 50:50 ರೂಲ್ಸ್ ತೆಗೆಯಬೇಕು ಎನ್ನುವ ವಿಚಾರದಲ್ಲಿ ಚರ್ಚೆ ನಡೆದಿದೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆಗೆ ಚರ್ಚೆ ಮಾಡಿ ಅಂತಿಮ ನಿರ್ಣಯ ತೆಗೆದುಕೊಳ್ಳುವುದಾಗಿ ಸಚಿವ ಅಶೋಕ್ ತಿಳಿಸಿದರು.
ಪಿಸ್ತೂಲ್ ತೋರಿಸಿ ಬೆದರಿಸಿದ ಬಿಜೆಪಿ ಮುಖಂಡ; ಎಗ್​ರೈಸ್​ ಅಂಗಡಿ ವಿಚಾರಕ್ಕೆ ಜಗಳ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
