ಉಡುಪಿ:ಶಾಲೆಗೆ ತೆರಳುವರ ರಸ್ತೆಯ ದುರವಸ್ಥೆಯನ್ನು ನೋಡಿ ನೋಡಿ ಬೇಸತ್ತು ರೋಸಿ ಹೋದ ವಿದ್ಯಾರ್ಥಿಗಳೇ ಅದನ್ನು ದುರಸ್ತಿ ಮಾಡಿದ ಪ್ರಕರಣವೊಂದು ಮಕ್ಕಳ ದಿನಾಚರಣೆಯಂದು ನಡೆದಿದೆ. ಉಡುಪಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಬೈಂದೂರು ತಾಲೂಕು ತಗ್ಗರ್ಸೆ ಗ್ರಾಮ ಮೂಡಣ ಬೈಲು ರಸ್ತೆ ಮೂಲಕ ಶಾಲೆಗೆ ತೆರಳುತ್ತಿದ್ದು, ಅದನ್ನು ವಿದ್ಯಾರ್ಥಿಗಳೇ ಇಂದು ದುರಸ್ತಿ ಮಾಡಿದರು. ಜಿಲ್ಲಾ ಪಂಚಾಯತ್​ ರಸ್ತೆ ಇದಾಗಿದ್ದು, ದುರವಸ್ಥೆಗೆ ಒಳಗಾಗಿ ಬಹಳ ಸಮಯವಾಗಿದ್ದರೂ ದುರಸ್ತಿ ಆಗಿರಲಿಲ್ಲ.
ಸ್ಥಳೀಯರು ಈ ಕುರಿತು ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಪ್ರಯೋಜನ ಆಗಿರಲಿಲ್ಲ. ಡಾಂಬರ್ ರಸ್ತೆಯ ಕೆಲವೆಡೆ ಸಂಪೂರ್ಣ ಕಿತ್ತು ಹೋಗಿ ಸಂಚಾರಕ್ಕೆ ತೊಡಕಾಗಿದ್ದಷ್ಟೇ ಅಲ್ಲದೆ, ಶಾಲಾ-ಕಾಲೇಜು ಮಕ್ಕಳು ನಿತ್ಯ ಸಂಚರಿಸುವ ಈ ರಸ್ತೆಯನ್ನು ದುರಸ್ತಿಗೊಳಿಸಲು ಅಧಿಕಾರಿಗಳು ಮನಸು ಮಾಡಿರಲಿಲ್ಲ. ಇದರಿಂದ ಬೇಸತ್ತ ವಿದ್ಯಾರ್ಥಿಗಳೇ ಇಂದು ಹಾರೆ ಹಿಡಿದು ರಸ್ತೆಯನ್ನು ತಕ್ಕಮಟ್ಟಿಗೆ ದುರಸ್ತಿ ಪಡಿಸಿದರು.
ಪುರುಷರೇ ‘ಸೋ ಸ್ವೀಟ್​’, ಮಹಿಳೆಯರಲ್ಲ..!; ಇಲ್ಲಿದೆ ಅಂಕಿ-ಅಂಶ..

ಮೂರು ವರ್ಷದ ಮಗುವನ್ನೂ ಬಿಡದ ಕಾಮುಕ ಮುದುಕ; ಅತ್ಯಾಚಾರ ಆರೋಪಿಯ ಬಂಧನ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 19 =
Remember me
