ಬೆಂಗಳೂರು: ವಿದ್ಯುತ್ ಮೇಲಿನ ಅವಲಂಬನೆ ಹೆಚ್ಚುತ್ತಿರುವ ಹೊತ್ತಿನಲ್ಲಿ ಭವಿಷ್ಯದ ಲೆಕ್ಕಾಚಾರ ಹಾಕುವ ದಶಕದ ರೋಡ್‌ಮ್ಯಾಪ್‌ಗೆ ಸರ್ಕಾರ ತಯಾರಿ ನಡೆಸಿದೆ.ಕೇಂದ್ರ ಸರ್ಕಾರ ರಿಸೋರ್ಸ್ ಅಡಿಕ್ವೆಸಿ ಮಾರ್ಗಸೂಚಿಗಳನ್ವಯ ಎಲ್ಲಾ ರಾಜ್ಯಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಗಳಿಗೆ ಅನುಗುಣವಾಗಿ ಉತ್ಪಾದನಾ ಮೂಲ ಹೊಂದುವುದು ಅತ್ಯವಶ್ಯಕ. ಆ ಪ್ರಕಾರ ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ.ರಾಜ್ಯದಲ್ಲಿ ‘ರಿಸೋರ್ಸ್ ಅಡಿಕ್ವೆಸಿ’ ಪರಿಣಾಮಕಾರಿ ಅಧ್ಯಯನಕ್ಕಾಗಿ ಸಮಿತಿ ರಚಿಸಲಾಗಿದೆ. ಈ ಸಮಿತಿ 60 ದಿನಗಳಲ್ಲಿ ತನ್ನ ವರದಿಯನ್ನು ನೀಡಲಿದೆ.
ವಿದ್ಯುತ್ ಸ್ವಾವಲಂಬನೆಗಾಗಿ ಅಧ್ಯಯನ ನಡೆಸಲು ವಿದ್ಯುತ್ ಬಳಕೆದಾರರ ಸಂಸ್ಥೆಗಳು ಹಾಗೂ ಇತರೆ ಭಾಗಿದಾರರೊಂದಿಗೆ ಚರ್ಚಿಸಿ ಸಮಗ್ರ ಅಧ್ಯಯನ ಕೈಗೊಳ್ಳಬೇಕಾಗುತ್ತದೆ.ಈ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವ್ಯವಸ್ಥಾಪಕರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಿದ್ದು, ಈ ಸಮಿತಿಯಲ್ಲಿ ಕೆಪಿಸಿಸಿ, ಬೆಸ್ಕಾಂ, ಸೆಸ್ಕ್, ಮೆಸ್ಕಾ ಂ, ಹೆಸ್ಕಾಂ, ಜೆಸ್ಕಾಂ, ಪಿಸಿಕೆಲ್, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕರು ಸದಸ್ಯರಾಗಿರುತ್ತಾರೆ. ಇಂಧನ ಇಲಾಖೆ, ಕೆಪಿಟಿಸಿಎಲ್ ನಿರ್ದೇಶಕರು (ಪ್ರಸರಣ), ಎಸ್ಕಾಂಗಳ ನಿರ್ದೇಶಕರು(ತಾಂತ್ರಿಕ) ಸದಸ್ಯರಾಗಿರುತ್ತಾರೆ. ಒಟ್ಟಾರೆ 19 ಅಧಿಕಾರಿಗಳ ತಂಡ ಈ ಕಾರ್ಯ ನಡೆಸಲಿದೆ.ರಾಜ್ಯ ಮತ್ತು ದೇಶದಲ್ಲಿರುವ ಉತ್ಪಾದನಾ ಸಾಮರ್ಥ್ಯ ಮತ್ತು ಬೇಡಿಕೆ, ಮುಂಬರುವ ವರ್ಷಗಳಲ್ಲಿ (2032) ಸ್ಥಾಪಿಸಬೇಕಾದ ಉತ್ಪಾದನಾ ಸಾಮರ್ಥ್ಯ, ಪ್ರಸರಣ ವ್ಯವಸ್ಥೆ ಹಾಗೂ ರಾಜ್ಯದ ವಿತರಣಾ ವ್ಯವಸ್ಥೆಯನ್ನೊಳಗೊಂಡಂತೆ ಸಮಗ್ರ ಅಧ್ಯಯನ ನಡೆಸಲಾಗುತ್ತದೆ.
ರಾಜ್ಯದಲ್ಲಿ ಪ್ರಮುಖ ವಿದ್ಯುತ್ ಬಳಕೆಯಾಗುವ ಕೈಗಾರಿಕಾ ಇಲಾಖೆ, ನೀರಾವರಿ, ಪಂಚಾಯತ್ ರಾಜ್ ಮುಂತಾದ ಇಲಾಖೆಗಳೊಂದಿಗೆ ಮುಂಬರುವ ವರ್ಷಗಲ್ಲಿ ಆಗುವ ಅಭಿವೃದ್ಧಿ ಯೋಜನೆಗಳ ಹಾಗೂ ಅವುಗಳಿಂದ ವಿದ್ಯುತ್ ಬೇಡಿಕೆಗಳ ಬಗ್ಗೆ ಸಮಾಲೋಚಿಸಿ ವಿವರ ಕ್ರೋಡೀಕರಿಸಲಾಗುತ್ತದೆ. ಅದೇ ರೀತಿ ರಾಜ್ಯದ ಪ್ರಮುಖ ಕೈಗಾರಿಕಾ ವಾಣಿಜ್ಯ ಸಂಘಗಳಾದ ಕಾಸಿಯಾ, ಅಸಚೋಮ್ ಇತ್ಯಾದಿ ಸಂಸ್ಥೆಗಳೊಂದಿಗೆ ಮುಂಬರುವ ವರ್ಷಗಳ ವಿದ್ಯುತ್ ಬೇಡಿಕೆ ಬಗ್ಗೆ ಚರ್ಚೆ ಮಾಡಲಾಗುತ್ತದೆ.ಮುಂದಿನ ಹತ್ತು ವರ್ಷಗಳಿಗೆ ಗರಿಷ್ಠ ಬೇಡಿಕೆ ಮತ್ತು ವಿದ್ಯುತ್ ಅವಶ್ಯಕತೆಯ ವಿವರಗಳೊಂದಿಗೆ ಪ್ರಸ್ತುತ ಉತ್ಪಾದನಾ ಸಾಮರ್ಥ್ಯ ವೃದ್ಧಿ ಹೆಚ್ಚಿಸಲು ಯಾವ ಮೂಲಗಳಿಂದ ವಿದ್ಯುತ್ ಉತ್ಪಾದನೆ ಮಾಡಬಹುದು, ಸಾಮರ್ಥ್ಯ ವೃದ್ಧಿಸಬಹುದು, ಪ್ರಸರಣಾ ಮೂಲಸೌಲಭ್ಯ ಹಾಗೂ ವಿತರಣಾ ಜಾಲದ ಕುರಿತು ವರದಿ ತಯಾರಿಸಲಾಗುತ್ತದೆ. ಗ್ರಿಡ್ ಸ್ಥಿರತೆಗಾಗಿ ್ಲೆಕ್ಸಿಬಲ್ ರಿಸೋರ್ಸ್ ಮೂಲಗಳ ಅಗತ್ಯತೆ ಹಾಗೂ ಸಮಯಕ್ಕೆ ಅನುಷ್ಠಾನಗೊಳ್ಳುವ ಕಾರ್ಯಪಥವನ್ನು ಸೂಚಿಸಲು ಈ ಸಮಿತಿಗೆ ತಿಳಿಸಲಾಗಿದೆ.ಅದೇ ರೀತಿ ಮುಂದಿನ ಹತ್ತು ವರ್ಷಗಳ ವಿದ್ಯುತ್ ಕ್ಷೇತ್ರದ ಅಭಿವೃದ್ಧಿಗೆ ಉತ್ಪಾದನೆ, ಪ್ರಸರಣೆ ಮತ್ತು ವಿತರಣಾ ವ್ಯವಸ್ಥೆಯಲ್ಲಿ ಹಂತ-ಹಂತವಾಗಿ ಬೇಕಾದ ಬಂಡವಾಳ ಹೂಡಿಕೆ ಅಂದಾಜಿಸಲಾಗುತ್ತದೆ.ಈ ಅಧ್ಯಯನ ವರದಿಯನ್ನು ಕೆಇಆರ್‌ಸಿ ಗಮನಕ್ಕೆ ತಂದು ಅಭಿಪ್ರಾಯ ಪಡೆಯಬೇಕಾಗುತ್ತದೆ. ಈ ಸಮಿತಿ ಸಮಗ್ರ ವರದಿ ನೀಡಲು 60 ದಿನಗಳ ಕಾಲಾವಕಾಶ ನೀಡಲಾಗಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:6 − 3 =
Remember me
