ವಿಜಯಪುರ/ಮಂಗಳೂರು:ಕರೊನಾ ಆರಂಭವಾದಾಗ ಬಹಳಷ್ಟು ಊರುಗಳಲ್ಲಿ ಹೊರಗಿನವರು ಬರದಂತೆ ರಸ್ತೆಗಳನ್ನು ಬಂದ್ ಮಾಡಿದ್ದ ಪ್ರಕರಣಗಳು ಈಗ ಮರುಕಳಿಸಿದ್ದು, ಇಂಥವು ಮತ್ತಷ್ಟು ಕಂಡುಬರುವ ಸಾಧ್ಯತೆಗಳು ಹೆಚ್ಚಾಗಿವೆ. ಏಕೆಂದರೆ ಈಗಾಗಲೇ ಕೆಲವಡೆ ರಸ್ತೆ ಬಂದ್​ ಮಾಡಿರುವಂಥ ಸನ್ನಿವೇಶಗಳು ಕಂಡುಬಂದಿವೆ.
ಪ್ರಮುಖವಾಗಿ ಮಹಾರಾಷ್ಟ್ರ ಹಾಗೂ ಕೇರಳಗಳಲ್ಲಿ ಕರೊನಾ ಹಾವಳಿ ಹೆಚ್ಚಾಗಿರುವುದರಿಂದ ಅಲ್ಲಿಂದ ತಮ್ಮಲ್ಲಿಗೆ ಬಂದೀತು ಎಂಬ ಭಯದಲ್ಲಿ ಅನೇಕರು ನೆರೆರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬಂದ್​ ಮಾಡಲಾರಂಭಿಸಿದ್ದಾರೆ.
ಇದನ್ನೂ ಓದಿ:ಪೊಲೀಸ್ ಕೈಗೇ ಕಚ್ಚಿದ ಯುವತಿ; ಚಿಕ್ಕಪೇಟೆಯಲ್ಲಿ ಸಣ್ಣ ವಿಷಯಕ್ಕೇ ನಡೆಯಿತು ದೊಡ್ಡ ರಾದ್ಧಾಂತ!
ವಿಜಯಪುರ ಜಿಲ್ಲೆಯಲ್ಲಿ ಭೀಮಾನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿರೋ ಹಿಂಗಣಿ ಬ್ಯಾರೇಜ್ ಮೇಲಿನ ಸಂಚಾರ ಬಂದ್ ಮಾಡಲಾಗಿದೆ. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ ಹಾಗೂ ವಿಜಯಪುರ ಜಿಲ್ಲೆಗೆ ಸಂಪರ್ಕ ಕೊಂಡಿಯಾಗಿರೋ ಹಿಂಗಣಿ ಬ್ಯಾರೇಜ್ ಮೇಲೆ ಜೆಸಿಬಿ ಮೂಲಕ ಮಣ್ಣಿನ ಒಡ್ಡು ಹಾಕಿ ಮುಳ್ಳು ಕಂಟಿಗಳನ್ನು ಪೊಲೀಸರ ಸಮ್ಮುಖದಲ್ಲೇ ಇರಿಸಲಾಗಿದೆ.
ಇದನ್ನೂ ಓದಿ:ಸಾವಿಗೆ ವೈದ್ಯರೇ ಕಾರಣ, ಅವರನ್ನು ಬಂಧಿಸಿ; ಹೆರಿಗೆ ವೇಳೆ ಸತ್ತ ಗರ್ಭಿಣಿಯ ಸಂಬಂಧಿಕರ ಆಗ್ರಹ
ಆದರೆ ಕೆಲವರು ಬ್ಯಾರೇಜ್ ಮೇಲೇ ಬೈಕ್​ಗಳನ್ನು ಹತ್ತಿಸಿಕೊಂಡು ಹೋಗಲು ಪ್ರಯತ್ನ ಮಾಡುತ್ತಿರುವ ಪ್ರಕರಣಗಳೂ ಕಂಡುಬಂದಿವೆ. ಇನ್ನೊಂದೆಡೆ ಕೇರಳಲ್ಲಿ ಕರೊನಾ ಹಾವಳಿ ಇರುವುದರಿಂದ ಅಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನೂ ಬಂದ್​ ಮಾಡಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಪಾಣಾಜೆ ಬಳಿ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನೂ ಜಿಲ್ಲಾಡಳಿತವೇ ಬಂದ್​ ಮಾಡಿದೆ. ಸದ್ಯದಲ್ಲೇ ಗಡಿಭಾಗದ ಇನ್ನೂ ಕೆಲವೆಡೆ ಹೀಗೆ ಸಂಪರ್ಕ ಕಡಿತಗೊಂಡರೂ ಅಚ್ಚರಿ ಇಲ್ಲ.
ನಿಮ್ಮಲ್ಲಿ ಈ ಲಕ್ಷಣಗಳಿದ್ದರೆ ತುರ್ತಾಗಿ ಕರೊನಾ ಲಸಿಕೆ ತೆಗೆದುಕೊಳ್ಳುವುದು ಅನಿವಾರ್ಯ..

ಲವ್​ ಮಾಡಲ್ಲ ಅಂದಿದ್ದಕ್ಕೆ ಕಪಾಳಕ್ಕೆ ಬಾರಿಸಿದ ಮ್ಯಾನೇಜರ್​; ಹೊಡೆದ ರಭಸಕ್ಕೆ ದಿಢೀರ್ ಬಿದ್ದ ಯುವತಿ..

ಪೊಲೀಸರಿನ್ನು ಕ್ರಿಮಿನಲ್‌ಗಳ ಜತೆ ಪಾರ್ಟಿಗೆ ಹಾಜರಾಗುವಂತಿಲ್ಲ; ರೌಡಿ-ಗೂಂಡಾಗಳ ಸಮಾರಂಭಗಳಲ್ಲಿ ಭಾಗಿ ಆಗುವಂತಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 5 =
Remember me
