ಕಾರವಾರ:‘ಈ ರಸ್ತೆಯ ಜಾಗ ಮಾರಾಟಕ್ಕಿದೆ…’ ಹೌದು ಇಂತಹದ್ದೊಂದು ಫಲಕ ಹೊನ್ನಾವರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 206ರ ಗುಂಡಬಾಳ ಬಳಿ ಹಾಕಲಾಗಿದ್ದು, ಈ ದೃಶ್ಯ ಜಾಲತಾಣದಲ್ಲಿ ವೈರಲ್​ ಆಗಿದೆ.
ರಸ್ತೆಯಲ್ಲಿ ಅಳವಡಿಸಿರುವ ಫಲಕದಲ್ಲಿ ‘ಜಾಗ ಮಾರಾಟಕ್ಕಿದೆ… ವ್ಯವಸ್ಥಾಪಕರು ಮತ್ತು ಶಾಸಕರು ಶಿರಸಿ ಮತ್ತು ಸಿದ್ದಾಪುರ ವಿಧಾನಸಭಾ ಕ್ಷೇತ್ರ’ ಎಂಬ ಬರಹ ಇದೆ. ಅಂದಹಾಗೆ ರಸ್ತೆಯೋ, ರಸ್ತೆ ಪಕ್ಕದ ಜಾಗವೋ ಮಾರಾಟಕ್ಕಿದೆ. ಅದನ್ನು ಖರೀದಿಸಿಯೇ ಬಿಡೋಣ ಅಂದುಕೊಳ್ಳುವ ಮುನ್ನ ಜೋಕೆ! ಯಾಕೆಂದರೆ ಈ ಫಲಕ ಹಾಕಿರೋದು ಸ್ಥಳೀಯ.
ಗುಂಡಬಾಳ ಬಳಿ ವರ್ಷದ ಹಿಂದೆ ಧರೆ ಕುಸಿದು ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ರಾಷ್ಟ್ರೀಯ ಹೆದ್ದಾರಿ ಇಲಾಖೆ ಕುಸಿದ ಭಾಗದಲ್ಲಿ ಒಂದು ಕಾಂಪೌಂಡ್​ ಕಟ್ಟಿಬಿಟ್ಟಿದೆ. ಯಾವುದೇ ಶಾಶ್ವತ ಕಾಮಗಾರಿ ನಡೆಸಿಲ್ಲ. ಹಾಳಾದ ರಸ್ತೆ ರಿಪೇರಿ ಮಾಡಿಲ್ಲ ಎಂಬ ಕಾರಣಕ್ಕೆ ಅದೇ ಜಾಗ ಮಾರಾಟಕ್ಕಿದೆ ಎಂದು ಸ್ಥಳೀಯ ರಾಜೇಶ ಶೇಟ್​ ಎಂಬಾತ ಫಲಕ ಅಳವಡಿಸಿ ಜಾಲತಾಣಗಳಲ್ಲಿ ಹರಿಬಿಟ್ಟು ವಿಭಿನ್ನ ಪ್ರತಿಭಟನೆ ನಡೆಸಿದ್ದಾನೆ.
ಅಲ್ಲದೆ, ಅಲ್ಲಿನ ಪರಿಸ್ಥಿತಿಯನ್ನು ಫೋಟೋ ಹಾಗೂ ವಿವರಗಳನ್ನು ಫೇಸ್​ಬುಕ್​ನಲ್ಲಿ ಬರೆದಿದ್ದು, ಫೋಟೋ ಸಾಕಷ್ಟು ವೈರಲ್​ ಆಗಿದೆ. ಶಿರಸಿ ಮತ್ತು ಕುಮಟಾ ದೇವಿಮನೆ ಘಟ್ಟ ಬಂದಾದರೆ ಕರಾವಳಿಯಿಂದ ಸಿದ್ದಾಪುರಕ್ಕೆ ಸಂಪರ್ಕ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿ 206 ಪ್ರಮುಖವಾಗಲಿದೆ. ಆದರೆ, ಒಂದೂವರೆ ವರ್ಷ ಕಳೆದರೂ ಶಾಶ್ವತ ಕಾಮಗಾರಿ ಕೈಗೊಳ್ಳದೆ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಜನಪ್ರತಿನಿಧಿಗಳು ಮೌನ ವಹಿಸಿದ್ದಾರೆ ಎಂದು ಅವರು ದೂರಿದ್ದಾರೆ.
ಇನ್ನೇನು ನಿಶ್ಚಿತಾರ್ಥ ನಡೆಯಬೇಕು… ಅಷ್ಟರಲ್ಲಿ ಬಂದ ಜವರಾಯ ಅಕ್ಕ-ತಂಗಿಯ ಪ್ರಾಣ ಹೊತ್ತೊಯ್ದ!

ತುಂಬಾ ಆಸೆಯೊಂದಿಗೆ ಬಂದ ಗೆಳತಿಯನ್ನು ರಾತ್ರೋರಾತ್ರಿ ಕಾರಿನಿಂದ ಕೆಳಗಿಳಿಸಿ ಮಾಡಬಾರದ್ದನ್ನು ಮಾಡಿದ್ಲು!

ವಾಟ್ಸ್​ಆ್ಯಪ್​ ವಿಡಿಯೋ ಕರೆ ಮಾಡಿದ್ದ ಯುವತಿ ಬೆತ್ತಲಾಗಿ ನಿಂತಿದ್ದಳು! ಮುಂದೆ ಆಗಿದ್ದೆಲ್ಲವೂ ಅವಾಂತರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 3 =
Remember me
