ಚಾಮರಾಜನಗರ:ಸರಗಳ್ಳತನ, ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಚಾಣಾಕ್ಷ ಸರಗಳ್ಳನನ್ನು ಬಂಧಿಸುವಲ್ಲಿ ಇದೀಗ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ತಾಲೂಕಿನ ಮೇಗಲಹುಂಡಿ ಗ್ರಾಮದ ಸುರೇಶ್ ಆಲಿಯಾಸ್ ಸೂರಪ್ಪನನ್ನು (31) ಸಂತೇಮರಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ವಶಕ್ಕೆ ಪಡೆದು ಆರೋಪಿಯಿಂದ ಒಂದು ಕಬ್ಬಿಣದ ರಾಡು, ಚಾಕು, 72 ಚಿನ್ನದ ಗುಂಡುಗಳು ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:ಸರ್ಕಾರ ಜಿಂದಾಲ್‌ಗೆ ಜಮೀನು ನೀಡಿದ್ದು ಸ್ವಾಗತಾರ್ಹ
ಆರೋಪಿ ಸುರೇಶ್ ಆ.23ರಂದು ಮಂಗಲ ಹೊಸೂರು ಗ್ರಾಮದಲ್ಲಿ ಮಹಿಳೆಯೊಬ್ಬರಿಗೆ ಚಾಕು ತೋರಿಸಿ, ಎದುರಿಸಿ ಸುಮಾರು 20 ಸಾವಿರ ರೂ. ಬೆಲೆಬಾಳುವ 72 ಚಿನ್ನದ ಗುಂಡುಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದನು. ಅದಲ್ಲದೇ ಆರೋಪಿಯ ಸಂತೇಮರಹಳ್ಳಿ, ಯಳಂದೂರು, ಹನೂರು, ಚಾಮರಾಜನಗರ ಗ್ರಾಮಾಂತರ, ಮೈಸೂರು ಜಿಲ್ಲೆಯ ಕವಲಂದೆ, ವರುಣಾ ಪೊಲೀಸ್ ಠಾಣೆ, ಮೈಸೂರು ದಕ್ಷಿಣ, ಟಿ.ನರಸೀಪುರ ಪೊಲೀಸ್ ಠಾಣೆಯ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಕಳ್ಳತನ, ಹಲವು ಸರಗಳ್ಳತನ, ಬೈಕ್ ಕಳ್ಳತನ ಮಾಡಿರುವುದಾಗಿ ಕಂಡುಬಂದಿದೆ.
ಆರೋಪಿಯ ಮೇಲೆ ಈಗಾಗಲೇ ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ 2, ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 4, ಯಳಂದೂರು ಪೊಲೀಸ್ ಠಾಣೆಯಲ್ಲಿ 2, ಕವಲಂದೆ, ಕೆ.ಎಂ.ದೊಡ್ಡಿ, ಮೈಸೂರು ದಕ್ಷಿಣ ಹಾಗೂ ವರುಣಾ ಪೊಲೀಸ್ ಠಾಣೆಯಲ್ಲಿ ತಲಾ 1 ಪ್ರಕರಣ ದಾಖಲಾಗಿದೆ. ಈಗಾಗಲೇ ಆರೋಪಿಯನ್ನು ನ್ಯಾಯಾಂಗ ಬಂಧಕ್ಕೆ ಒಪ್ಪಿಸಲಾಗಿದ್ದು, ತಪ್ಪಿತಸ್ಥನನ್ನು ಪತ್ತೆಹಚ್ಚಿದ ಪೊಲೀಸ್ ತಂಡಕ್ಕೆ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ 25 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ.
ಮಧ್ಯರಾತ್ರಿ ತಾಯಿ ಜತೆಗೆ ಮಲಗಿದ್ರೂ ಬಿಡಲಿಲ್ಲ! ಆಘಾತಕಾರಿಯಾಗಿದೆ ನಟಿ ಶ್ರೀದೇವಿಕಾ ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + eight =
Remember me
