ಕೊಡಗು:ವಿರಾಜಪೇಟೆ ಪೊಲಿಸರು ನಡೆಸಿದ ಭರ್ಜರಿ ಕಾರ್ಯಚರಣೆಯಲ್ಲಿ ವಿರಾಜಪೇಟೆ- ಕೇರಳ ಗಡಿಯಲ್ಲಿ ಸುಲಿಗೆ ಮಾಡುತ್ತಿದ್ದ 9 ಮಂದಿ ದರೋಡೆಕೊರರನ್ನು ಯಶಸ್ವಿಯಾಗಿ ಬಂಧಿಸಲಾಗಿದೆ. ಆಘಾತಕಾರಿಯೆಂದರೆ ದರೋಡೆ ಗ್ಯಾಂಗ್​ನಲ್ಲಿ ಸಿನಿಮಾ ಅಸೋಷಿಯೇಟ್ ಡೈರೆಕ್ಟರ್ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಯು ಸಹ ಭಾಗಿಯಾಗಿದ್ದಾರೆ.
ಬಂಧಿತರನ್ನು ರಾಮನಗರದ ಸಿನಿಮಾ ಅಸೋಷಿಯೇಟ್ ಡೈರೆಕ್ಟರ್ ಕೆ.ಎಸ್. ಸತೀಶ್ (33), ವಿ.ನಾರಾಯಣ ಸ್ವಾಮಿ, ಕೇರಳ ರಾಜ್ಯದ ಕೆ.ವಿ.ಅಭಿನವ್ (20), ಜಿ. ವೈಷ್ಣವ್(22), ತಮಿಳುನಾಡಿನ ಸಿ.ಸುರೇಶ್ (32), ಹಾಸನದ ಜಾನ್ ಪೌಲ್(28), ಬೆಂಗಳೂರು ಜ್ಞಾನೇಂದ್ರ ಪ್ರಸಾದ್‌(28), ಮೈಸೂರಿನ ಡಿ.ಎಚ್. ವಾದಿರಾಜ್ (25) ಎಂದು ಗುರುತಿಸಲಾಗಿದೆ.
ಅಂತರಾಜ್ಯ ಗಡಿಯಲ್ಲಿ ಹೊಂಚು ಹಾಕಿ‌‌ಕುಳಿತಿದ್ದ ಆರೋಪಿಗಳ ಬಳಿ ಲಾಂಗ್ ಮಚ್ಚು, ಎರಡು ತಲವಾರು, ಖಾರದ ಪುಡಿ ಮತ್ತು ಎಂಟು ಕೆಜಿ ಪಾದರಸವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:ಆಂಧ್ರದ ಮಾಜಿ ಸಿಎಂ ಎನ್​. ಚಂದ್ರಬಾಬು ನಾಯ್ಡು ಪ್ರಯಾಣಿಸುತ್ತಿದ್ದ ಕಾರು ಅಪಘಾತ
ಕೇರಳ ಗಡಿಯಲ್ಲಿ ದರೋಡೆಗೆ ಹೊಂಚು ಹಾಕಿ‌ ಎರಡು ಟೀಮ್​ ಎರಡು ಕಾರಿನಲ್ಲಿ ಕುಳಿತಿತ್ತು. ಈ ವೇಳೆ ವಿರಾಜಪೇಟೆ ಸಬ್ ಇನ್ಸ್‌ಪೆಕ್ಟರ್ ಬೊಜಪ್ಪ ನೇತೃತ್ವದಲ್ಲಿ ನಡೆದ ಕಾರ್ಯಚರಣೆ ಯಶಸ್ವಿಯಾಗಿದ್ದು, ಆರೋಪಿಗಳು ಹದಿನೈದು ದಿನ ನ್ಯಾಯಾಂಗ ಬಂಧನದಲ್ಲಿ ಇರಿಸಿಕೊಳ್ಳಲಾಗಿದೆ.
ಬಂಧಿತ ದರೋಡೆಕೊರರಲ್ಲಿ ಒಬ್ಬನಿಗೆ ಕೊರೊನಾ ಹಿನ್ನಲೆ ಆತನನ್ನು ಮಡಿಕೇರಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಡರಾತ್ರಿ ಆರೋಪಿಗಳನ್ನು ಬಂಧಿಸಲಾಗಿದ್ದು, ವಿರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ಭಾರತೀಯ ಸ್ತ್ರೀಯರ ಅವಹೇಳನ ಮಾಡಿದ್ದ ನಿಕ್ಸನ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 8 =
Remember me
