ಬೆಂಗಳೂರು:ಪತ್ರಿಕೋದ್ಯಮ ಎಂದರೆ ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಬ ಎಂದೇ ಹೇಳಲಾಗುತ್ತದೆ. ಜನರ ಸಮಸ್ಯೆಗಳನ್ನು ವರದಿ ಮಾಡುವುದೇ ಕರ್ತವ್ಯ. ಈ ಮೂಲಕ ಸಮಾಜದಲ್ಲಿ ಜಾಗೃತಿ ತರುವ ಕೆಲಸ ಪತ್ರಕರ್ತರದ್ದು.
ಆದರೆ ಇಲ್ಲಿ ಮಾತ್ರ ಕೆಲ ಖದೀಮರು, ತಮ್ಮನ್ನು ತಾವು ಪತ್ರಕರ್ತರು ಎಂದು ಹೇಳಿಕೊಂಡು ಜನರಿಂದ ಸುಲಿಗೆ ಮಾಡುತ್ತಿದ್ದರು. ಇದೀಗ “ನಾವು ಕನ್ನಡ ನ್ಯೂಸ್ ಚಾನೆಲ್​ನವರು” ಎಂದು ಹೇಳಿಕೊಂಡು ಸುಲಿಗೆ ಮಾಡುತ್ತಿದ್ದ 4 ಜನರನ್ನು ಬಂಧಿಸಲಾಗಿದೆ
ಬಂಧಿತರನ್ನು ಆನಂದ್, ಕೇಶವಮೂರ್ತಿ, ಶ್ರೀನಿವಾಸ್, ಆತ್ಮಾನಂದ್ ಎಂದು ಗುರುತಿಸಲಾಗಿದೆ. ಇವರು ತಮ್ಮನ್ನು ತಾವು, ಎ.ಕೆ ನ್ಯೂಸ್ ಚಾನೆಲ್​ನವರು ಎಂದು ಹೇಳಿಕೊಂಡು ಜನರನ್ನು ಯಾಮಾರಿಸುತ್ತಿದ್ದರು.
ಇದನ್ನೂ ಓದಿ:ಗೃಹಲಕ್ಷ್ಮೀಗೆ ಸರ್ವರ್ ಸಂಕಷ್ಟ; ಗ್ರಾಮ ಒನ್ ಕೇಂದ್ರಗಳಲ್ಲಿ ಸುಲಿಗೆ
ಇವರು, ಕೆಲ ವ್ಯಕ್ತಿಗಳ ಬಳಿ ಹೋಗಿ “ನಿಮ್ಮ ಬಗ್ಗೆ ಸುದ್ದಿ ಬರೆದು ಪ್ರಸಾರ ಮಾಡುತ್ತೇವೆ. ಪೊಲೀಸರಿಗೆ ಹೇಳಿ ಕ್ರಿಮಿನಲ್ ಕೇಸ್ ದಾಖಲು ಮಾಡಿಸುತ್ತೇವೆ” ಎಂದು ಬೆದರಿಸುತ್ತಿದ್ದ ಆಸಾಮಿಗಳು ನಂತರ ಹಣ ಸುಮ್ಮನಾಗಲು ಹಣಕ್ಕೆ ಬೇಡಿಕೆ ಇರಿಸುತ್ತಿದ್ದರು.
ಈ ಬಗ್ಗೆ ಸಾರ್ವಜನಿಕರೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ಈ ಕೇಸ್​ಅನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ತನಿಖೆ ನಡೆಸಿದ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 11 =
Remember me
