ಕಲಬುರಗಿ:ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕೆಎಸ್ಆರ್​ಟಿಸಿ ಬಸ್ಸನ್ನೆ ಈ ಖತರ್ನಾಕ್ ಕಳ್ಳರು ಎಗರಿಸಿದ್ದಾರೆ! ಈ ವಿಚಿತ್ರ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ಬಸ್ ನಿಲ್ದಾಣದಲ್ಲಿ ಇಂದು ಮುಂಜಾನೆ 3:30ಕ್ಕೆ ನಡೆದಿದೆ.
ಬೀದರ್​ನ ಬಸ್ ಡಿಪೋ ನಂಬರ್ 2ಗೆ ಸೇರಿದ ಸರ್ಕಾರಿ ಬಸ್ಸನ್ನು ಕಳ್ಳರು ಕಲಬುರಗಿ ಜಿಲ್ಲೆಯ ಚಿಂಚೋಳಿ ಬಸ್ ನಿಲ್ದಾಣದಿಂದ ಕದ್ದೊಯ್ದಿದ್ದಾರೆ. ಇವರು ಕದ್ದೊಯ್ದ ಬಸ್​ನ ಸಂಖ್ಯೆ KA38 F 971 ಆಗಿದೆ.
ನಸುಕಿನ ಜಾವ 3:30 ರ ಸುಮಾರಿಗೆ ಚಾಲಕ ಹಾಗೂ ಬಸ್​ ನಿರ್ವಾಹಕ ಇಬ್ಬರೂ ವಿಶ್ರಾಂತಿ ಕೋಣೆಯಲ್ಲಿ ಮಲಗಿದ್ದಾಗ ಬಸ್ ಈ ಕಳ್ಳರು ಬಸ್​ ಕಳ್ಳತನ ಮಾಡಿದ್ದಾರೆ. ಬೆಳಗ್ಗೆ ಎದ್ದು ನೋಡಿದಾಗ ಬಸ್​ ನಾಪತ್ತೆಯಾಗಿದ್ದು ಈ ಬಗ್ಗೆ ವರದಿ ಮಾಡಿದ್ದಾರೆ. ಆ ಸಂದರ್ಭ ಅಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಬೆಳಗಿನ ಜಾವ 3:30ರ ಸುಮಾರಿಗೆ ಬಸ್​ ನಿರ್ಗಮನ ದ್ವಾರದಿಂದ ಹೊರ ಹೋಗಿದ್ದು ಕಂಡುಬಂದಿದೆ.

ಕದ್ದ ಬಸ್ಸನ್ನು ಮಿರಿಯಾಣ ಮಾರ್ಗವಾಗಿ ತಾಂಡುರ ಮೂಲಕ ತೆಲಂಗಾಣದ ಕಡೆಗೆ ಕಳ್ಳರು ತೆಗೆದುಕೊಂಡು ಹೋಗಿದ್ದು ಬಸ್ ಹುಡುಕಾಟದ ಸಲುವಾಗಿ ತೆಲಂಗಾಣಕ್ಕೆ ಎರಡು ಪೊಲೀಸ್ ತಂಡ ತೆರಳಿವೆ. ಸ್ಥಳಕ್ಕೆ ಚಿಂಚೋಳಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
Sign in to your account
Please enter an answer in digits:3 × three =
Remember me
