ಬೆಂಗಳೂರು:ಬೀಗ ಹಾಕಿದ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಬೀಗ ಮುರಿದು ಚಿನ್ನಾಭರಣ ಕದ್ದು ಕಾಡಿನಲ್ಲಿ ಮಲಗುತ್ತಿದ್ದ ರೌಡಿಶೀಟರ್ ಸೇರಿ ಇಬ್ಬರನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಸಪ್ತಗಿರಿ ಲೇಔಟ್ ನಿವಾಸಿ ನರಸಿಂಹ ರೆಡ್ಡಿ (36) ಮತ್ತು ತಮಿಳುನಾಡಿನ ಹೊಸೂರು ನಿವಾಸಿ ವಿನು ಚಕ್ರವರ್ತಿ (36) ಬಂಧಿತರು. ಆರೋಪಿಗಳಿಂದ 81.25 ಲಕ್ಷ ರೂ. ಮೌಲ್ಯದ 1 ಕೆಜಿ 141 ಗ್ರಾಂ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ್ದ 2 ಕಾರುಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಒಂದೇ ಒಂದು ವಸ್ತುವಿನಿಂದ ಹಳಿ ತಪ್ಪಿದ ಸಬರಮತಿ ಎಕ್ಸ್​ಪ್ರೆಸ್​ ರೈಲು! ಸಂಚಾರ ಸ್ಥಗಿತ
ಬನಶಂಕರಿ 3ನೇ ಹಂತದ ನಿವಾಸಿ, ಮೇ 10ರಂದು ಮನೆಗೆ ಬೀಗ ಹಾಕಿಕೊಂಡು ಆಸ್ಪತ್ರೆಗೆ ತೆರಳಿದ್ದರು. ದುಷ್ಕರ್ವಿುಗಳು ಬೀಗ ಮುರಿದು ಮನೆಗೆ ನುಗ್ಗಿ ಬೀರುವಿನಲ್ಲಿದ್ದ ಚಿನ್ನಾಭರಣ, ಬೆಳ್ಳಿ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಇನ್​ಸ್ಪೆಕ್ಟರ್ ಯು. ಸತೀಶ್​ಕುಮಾರ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.
ನೆಲಮಂಗಳದ ಸೋಲೂರು ಮೂಲದ ನರಸಿಂಹ ರೆಡ್ಡಿ, ಗಿರಿನಗರ ಠಾಣೆ ರೌಡಿಶೀಟರ್. ಹಲವು ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾನೆ. ಈತನ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 49 ಅಪರಾಧ ಪ್ರಕರಣಗಳು ದಾಖಲಾಗಿವೆ. ಮೇ ನಲ್ಲಿ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದ ನರಸಿಂಹ ರೆಡ್ಡಿ, ತನ್ನ ಕಳ್ಳತನ ಚಾಳಿ ಮುಂದುವರಿಸಿದ್ದ. ಮತ್ತೊಬ್ಬ ಆರೋಪಿ ವಿನು ಚಕ್ರವರ್ತಿ ಅಪರಾಧ ಹಿನ್ನೆಲೆವುಳ್ಳವನಾಗಿದ್ದಾನೆ. ನರಸಿಂಹ ರೆಡ್ಡಿಯ ಸ್ನೇಹಿತನಾಗಿದ್ದು, ಕದ್ದ ವಸ್ತುಗಳನ್ನು ವಿಲೇವಾರಿ ಮಾಡುತ್ತಿದ್ದ.ಈತನ ವಿರುದ್ಧವೂ ಬೆಂಗಳೂರು ಹಾಗೂ ತಮಿಳುನಾಡಿನಲ್ಲಿ ಆರು ಅಪರಾಧ ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ:ಅವಳಿ ಕಂಚು ವಿಜೇತೆಗೆ ಇನ್ನು 3 ತಿಂಗಳು ಶೂಟಿಂಗ್​ನಿಂದ ಬಿಡುವು; ಭರತನಾಟ್ಯ, ಕುದುರೆಸವಾರಿಯತ್ತ ಮನು ಆಸಕ್ತಿ!
ನಗರದ ವಿವಿಧೆಡೆ ಸುತ್ತಾಡಿ ಬೀಗ ಹಾಕಿದ, ರಂಗೋಲಿ ಬಿಡಿಸದ ಮನೆಗಳನ್ನು ನರಸಿಂಹ ರೆಡ್ಡಿ ಗುರುತಿಸಿ ರಾತ್ರಿ ವೇಳೆ ಬೀಗ ಮುರಿದು ಚಿನ್ನಾಭರಣಗಳು, ಬೆಳ್ಳಿ ವಸ್ತುಗಳು, ನಗದು ಕಳವು ಮಾಡುತ್ತಿದ್ದ. ಕದ್ದ ವಸ್ತುಗಳನ್ನು ಮನೆ ಸಮೀಪದ ಚರಂಡಿಗಳು ಮತ್ತು ಕುಣಿಗಲ್-ಹಾಸನ ಮುಖ್ಯರಸ್ತೆಯ ಆಗ್ರೋ ಪ್ರೖೆವೇಟ್ ಲಿಮಿಟೆಡ್​ನ ಹಿಂಭಾಗದ ಕಲ್ಲು ಬಂಡೆ ಬಳಿ ಬಚ್ಚಿಟ್ಟಿದ್ದ. ನೆಲಮಂಗಲ ಬಳಿಯ ಗುಡೇಮಾರನಹಳ್ಳಿ ಮತ್ತು ಕೃಷ್ಣಗಿರಿಯ ಅರಣ್ಯ ಪ್ರದೇಶದಲ್ಲಿ ರಾತ್ರಿ ಮಲಗುತ್ತಿದ್ದ. ಅಗತ್ಯ ಇದ್ದಾಗ ಸ್ವಲ್ಪ ಸ್ವಲ್ಪ ಚಿನ್ನ ತೆಗೆದುಕೊಂಡು ಸ್ನೇಹಿತ ವಿನು ಚಕ್ರವರ್ತಿ ಸೇರಿದಂತೆ ಕೆಲ ಪರಿಚಿತರ ಮುಖಾಂತರ ವಿಲೇವಾರಿ ಮಾಡುತ್ತಿದ್ದ. ಆರೋಪಿಯ ಬಂಧನದಿಂದ ಗಿರಿನಗರ, ಬಸವನಗುಡಿ, ಜಯನಗರ ಠಾಣೆಯಲ್ಲಿ ದಾಖಲಾಗಿದ್ದ ತಲಾ ಒಂದು ಮನೆಗಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಅಡಮಾನ :ನರಸಿಂಹ ರೆಡ್ಡಿ ವಿಚಾರಣೆ ವೇಳೆ ಕದ್ದ ವಸ್ತುಗಳನ್ನು ಹೊಸೂರು ಮೂಲದ ಸ್ನೇಹಿತ ವಿನುಚಕ್ರವರ್ತಿಗೆ ನೀಡಿದ್ದಾಗಿ ಬಾಯ್ಬಿಟ್ಟಿದ್ದಾನೆ. ಈರೋಡ್ ಜೈಲಿನಿಂದ ವಿನುಚಕ್ರವರ್ತಿಯನ್ನು ಬಾಡಿವಾರೆಂಟ್ ಮೇಲೆ ವಶಕ್ಕೆ ಪಡೆದು ಕುಣಿಗಲ್-ಹಾಸನ ಮುಖ್ಯರಸ್ತೆಯ ಆಗ್ರೋ ಪ್ರೖೆವೇಟ್ ಲಿಮಿಟೆಡ್​ನ ಹಿಂಭಾಗದ ಕಲ್ಲು ಬಂಡೆ ಬಳಿ ಬಚ್ಚಿಟ್ಟಿದ್ದ ಚಿನ್ನಾಭರಣ, ತಮಿಳುನಾಡಿನ ಕೃಷ್ಣಗಿರಿಯಲ್ಲಿ ಜಪ್ತಿ ಮಾಡಿದ್ದಾರೆ.
ಕಳೆದ 34 ದಿನದಿಂದ ಊಟ ಮಾಡಿಲ್ಲ! 1.2 ಕೋಟಿ ರೂ. ಸಾಲವಿದೆ, ಕೈಯಲ್ಲಿ ಕೆಲಸವಿಲ್ಲ: ಕಣ್ಣೀರಿಟ್ಟ ನಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + fifteen =
Remember me
