ಬೆಂಗಳೂರು:ಕೆಲಸ ಮಾಡುತ್ತಿದ್ದ ಮಾಲೀಕರ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದನ್ನು ಬ್ರೇನ್ ಮ್ಯಾಪಿಂಗ್ ಪರೀಕ್ಷೆಯಲ್ಲಿ ಮನೆಗೆಲಸದಾಳು ಬಾಯ್ಬಿಟ್ಟು ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾಳೆ.ಕೋಡಿಪಾಳ್ಯ ನಿವಾಸಿ ಶಾರದಮ್ಮ ಬಂಧಿತೆ. ಆಕೆಯಿಂದ 35 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವನ್ನು ಕೆಂಗೇರಿ ಪೊಲೀಸರು ಜಪ್ತಿ ಮಾಡಿದ್ದಾರೆ. ಕೋಡಿಪಾಳ್ಯ ವಿನಾಯಕ ಲೇಔಟ್​ನ ರಿಯಲ್ ಎಸ್ಟೇಟ್ ಏಜೆಂಟ್ ಶಶಿಕಾಂತ್ ಮನೆಯಲ್ಲಿ ಶಾರದಮ್ಮ ಚಿನ್ನಾಭರಣ ಕಳವು ಮಾಡಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ನಕಲಿ ದಾಖಲೆ ಸೃಷ್ಟಿಸಿ ಕಾರುಗಳ ಮಾರಾಟ! 2.56 ಕೋಟಿ ರೂ. ಮೌಲ್ಯದ 17 ಕಾರು ಜಪ್ತಿ
ವಿನಾಯಕ ಲೇಔಟ್​ನಲ್ಲಿ ಶಶಿಕಾಂತ್ ಕುಟುಂಬ ನೆಲೆಸಿದೆ. ಶಶಿಕಾಂತ್​ರ ಪತ್ನಿ ಚಂದ್ರಿಕಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶ್ರುಶೂಷಕಿಯಾಗಿದ್ದಾರೆ. ಮೂರು ತಿಂಗಳಿಂದ ಅವರ ಮನೆಯಲ್ಲಿ ಶಾರದಮ್ಮ ಕೆಲಸಕ್ಕೆ ಹೋಗುತ್ತಿದ್ದಳು. ಮಾಲೀಕರಿಗೆ ತಿಳಿಯದಂತೆ ಒಂದೊಂದಾಗಿ ಆಭರಣವನ್ನು ಕಳವು ಮಾಡಿದ್ದರು. ಕೆಲ ದಿನಗಳ ಹಿಂದೆ ಶಶಿಕಾಂತ್ ಪತ್ನಿಗೆ ಆಭರಣ ನಾಪತ್ತೆಯಾಗಿರುವ ಸಂಗತಿ ಅರಿವಿಗೆ ಬಂದಿದೆ. ಈ ಬಗ್ಗೆ ಮನೆಯಲ್ಲಿ ಹುಡುಕಾಡಿದಾಗ ಪತ್ತೆಯಾಗಿಲ್ಲ. ಅನುಮಾನದ ಮೇಲೆ ಮನೆ ಕೆಲಸದಾಳು ಶಾರದಮ್ಮಳನ್ನು ಪ್ರಶ್ನಿಸಿದಾಗ ತನಗೇನು ತಿಳಿದಿಲ್ಲ ಎಂದಿದ್ದಾರೆ.
ಕೊನೆಗೆ ಕೆಂಗೇರಿ ಠಾಣೆಗೆ ಶಶಿಕಾಂತ್ ನೀಡಿದರು. ಈ ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರು, ಶಾರದಮ್ಮಳ ವಿಚಾರಣೆ ನಡೆಸಿದಾಗಲೂ ಬಾಯ್ಬಿಟ್ಟಿಲ್ಲ. ಕೊನೆಗೆ ಮಡಿವಾಳದ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್​ಎಸ್​ಎಲ್) ಬ್ರೇನ್ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾಳೆ. ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆಭರಣಗಳು ಪತ್ತೆಯಾದವು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತುಟಿಕ್​ ಪಿಟಿಕ್​ ಎನ್ನದೇ ತಲೆಬಗ್ಗಿಸಬೇಕು ನೀನು: ಶಾಹೀನ್ ಆಫ್ರಿದಿ ವಿರುದ್ಧ ಸಿಡಿದೆದ್ದ ಪಾಕ್​ ಮಾಜಿ ಆಟಗಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
