ಬೆಂಗಳೂರು: ಬಾಗಲೂರಿನಲ್ಲಿ ಕುಡಿದ ಅಮಲಿನಲ್ಲಿ ಮನೆಗೆ ಬರುವ ದಾರಿ ತಪ್ಪಿ ರಸ್ತೆಯಲ್ಲಿ ಓಡಾಡುತ್ತಿದ್ದ  ಫೋಟೋಗ್ರಾಫರ್‌ನ್ನು ಅಡ್ಡಗಟ್ಟಿದ ದರೋಡೆಕೋರರು ಮೊಬೈಲ್‌ನೊಂದಿಗೆ ಪರಾರಿಯಾಗಿದ್ದಾರೆ. ಬಾಗಲೂರಿನ ಮ್ಯಾಥ್ಯೂ (30) ಮೊಬೈಲ್ ಕಳೆದುಕೊಂಡವರು.
ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿರುವ ಮ್ಯಾಥ್ಯೂ, ಸೋಮವಾರ ರಾತ್ರಿ 9 ಗಂಟೆಗೆ ಮದ್ಯಪಾನ ಮಾಡಿ ಕ್ಯಾಮರಾವನ್ನು ಕತ್ತಿಗೆ ಹಾಕಿಕೊಂಡು ಬಾಗಲೂರಿನ ವಿನಾಯಕನಗರದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಕುಡಿದ ಮತ್ತಿನಲ್ಲಿ ಮನೆಗೆ ಹೋಗುವ ದಾರಿ ತಪ್ಪಿ ಬೇರೆ ದಾರಿಯಲ್ಲಿ ಸಾಗುತ್ತಿದ್ದರು.
ಈ ವೇಳೆ ಬೈಕ್‌ನಲ್ಲಿ ಬಂದ ದರೋಡೆಕೋರರು ಮ್ಯಾಥ್ಯೂನ್ನು ಅಡ್ಡಗಟ್ಟಿದ್ದಾರೆ. ‘ನಂದಿಬೆಟ್ಟಕ್ಕೆ ಹೋಗಿ ಫೋಟೋ ತೆಗೆಯಬೇಕು ನಿಮ್ಮ ಕ್ಯಾಮರಾ ಕೊಡಿ ಎಂದು ದರೋಡೆಕೋರರು ಒತ್ತಾಯಿಸಿದ್ದರು. ಇದರಿಂದ ಆತಂಕಗೊಂಡ ಮ್ಯಾಥ್ಯು, ಇದು ನನ್ನ ಸ್ನೇಹಿತನ ಕ್ಯಾಮರಾವಾಗಿದ್ದು, ಆತನಿಗೆ ಕರೆ ಮಾಡಿ ಕೊಡುತ್ತೇನೆ ಮಾತನಾಡಿ ಎಂದು ಹೇಳಿದ್ದರು. ಮ್ಯಾಥ್ಯೂ ಜೇಬಿನಿಂದ ಮೊಬೈಲ್ ತೆಗೆಯುತ್ತಿದ್ದಂತೆ ಇವರ ಕೈಯಿಂದ ಮೊಬೈಲ್ ಕಸಿದುಕೊಂಡ ದರೋಡೆಕೋರರು ಪರಾರಿಯಾಗಿದ್ದಾರೆ. ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
