ಬೆಂಗಳೂರು:ಬೆಂಗಳೂರಿನಲ್ಲಿ ಮಿಡ್​ನೈಟ್ ಕಳ್ಳರ ಪುಂಡಾಟ ಹೆಚ್ಚಾಗುತ್ತಿದ್ದು ಇಂದು ಮುಂಜಾನೆ ಆಟೊದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಮಚ್ಚು ತೊರಿಸಿ ಹಣ ಲೂಟಿ ಮಾಡಿದ್ದಾರೆ. ಈ ಘಟನೆ ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ಬೆಳಗಿನ ಜಾವ 4.30ರ ಗಂಟೆ ಸುಮಾರಿಗೆ ನಡೆದಿದೆ.
ಮಚ್ಚಿನ ಸಮೇತ ಬಂದ ಕಳ್ಳರು ಮುಖಕ್ಕೆ ಕಪ್ಪು ಬಟ್ಟೆ ಧರಿಸಿದ್ದರು. ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನಿಗೆ ಮಚಚು ತೋರಿಸಿ ಹಣ ವಸೂಲಿ ಮಾಡಿ ಇಬ್ಬರು ಕಳ್ಳರು ಪರಾರಿಯಾಗಿದ್ದಾರೆ.
ಈ ಕಳ್ಳರು, ಮೆಜೆಸ್ಟಿಕ್​ನಿಂದ ಹೆಣ್ಣೂರು ಬಂಡೆಗೆ ಬರುತಿದ್ದ ಆಟೊಗೆ ಅಡ್ಡ ಹಾಕಿ ಕಳ್ಳತನ ಮಾಡಿದ್ದಾರೆ. ಈ ದರೋಡೆಕೋರರು, ಡಿಯೋ ಬೈಕ್​ನಲ್ಲಿ ಬಂದಿದ್ದು ಮಚ್ಚು ತೋರಿಸಿ ಬೆದರಿಸಿ ಪ್ರಯಾಣಿಕನ ಬಳಿ ಇದ್ದ 10 ಸಾವಿರ ಹಣ ಕಿತ್ತುಕೊಂಡು ಹೋಗಿದ್ದಾರೆ. ದುರದೃಷ್ಟಶಾತ್​ ಹಣ ಕಳೆದುಕೊಂಡ ಪ್ರಯಾಣಿಕ, ಈಗ ಅಸಹಾಯಕನಾಗಿ ಕೈ ಕಟ್ಟಿ  ನಿಂತಿದ್ದಾರೆ.
ಪ್ರಯಾಣಿಕ ಶಿವಾಜಿ ಘೋರ್ಪಡೆ, ಇಂದು ಬೆಳಗ್ಗೆ ಮೆಜೆಸ್ಟಿಕ್​ನಿಂದ ರ್ಯಾಪಿಡೋ ಆಟೊ ಬುಕ್​ ಮಾಡಿದ್ದರು. ಆ ಸಂದರ್ಭ ಬಂದ ಪುಟ್ಟಸ್ವಾಮಿ ಗೌಡ ಹೆಸರಿನ ಆಟೊ ಚಾಲಕ ಇವರನ್ನು ಪಿಕ್​ ಮಾಡಿದ್ದಾರೆ. ಇಬ್ಬರೂ ಹೆಣ್ಣೂರು ಕ್ರಾಸ್​ ಬಳಿ ಬಂದಾಗ ಈ ಘಟನೆ ನಡೆದಿದೆ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಹೆಣ್ಣೂರು ಪೊಲೀಸರು ಭೇಟಿ ನೀಡಿದ್ದಾರೆ. ಸದ್ಯ ಪೊಲೀಸರು ಕಳ್ಳರ ಜಾಡು ಹಿಡಿಯಲು ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 19 =
Remember me
