ವಿಜಯನಗರ:ವಿಜಯನಗರದಲ್ಲಿ ಕೊಟ್ಟೂರು ಪಟ್ಟಣದಲ್ಲಿ ಹಾಡಹಗಲೇ ದರೋಡೆ ನಡೆದಿದೆ.
ಕೊಟ್ಟೂರು ಪಟ್ಟಣದ ವಿದ್ಯಾನಗರದಲ್ಲಿ ಮನೆಯಲ್ಲಿ ಯಾರೂ ಇಲ್ಲ ಎನ್ನುವುದನ್ನು ಗಮನಿಸಿದ ಕಳ್ಳರು ಸೂರ್ಯ ನೆತ್ತಿ ಸುಡುವಾಗಲೇ ಕಳ್ಳತನ ಶುರು ಮಾಡಿಕೊಂಡಿದ್ದಾರೆ. ಹಾಡಗಲೆ ಮನೆಗೆ ನುಗ್ಗಿ ನಗದು -ಬಂಗಾರ ಸೇರಿ ಬಹಳಷ್ಟು ಮೌಲ್ಯದ ವಸ್ತುಗಳನ್ನು ಕದ್ದಿದ್ದಾರೆ.
ಬ್ಯೂಟಿಪಾರ್ಲರ್ ನಡೆಸುತ್ತಿರುವ ಸುಧಾ, ಮಧ್ಯಾಹ್ನ 1.15ಕ್ಕೆ ತಮ್ಮ ಮನೆಯಿಂದ ಪಾರ್ಲರ್ ಗೆ ಹೋಗಿದ್ದಾರೆ. ಇವರ ಪತಿ ಗುರುಸಿದ್ದಪ್ಪ ಉಜ್ಜಿಯಿನಿಗೆ ಹೋಗಿರುವುದನ್ನು ಗಮನಿಸಿದ್ದ ಕಳ್ಳರು ಭಾರೀ ಪ್ಲಾನ್​ ಮಾಡಿ ಕೃತ್ಯ ಎಸಗಿದ್ದಾರೆ. ಈ ಸಂದರ್ಭ ಒಟ್ಟು 6 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಈ ಕಳ್ಳರು ವಿದ್ಯಾನಗರದಲ್ಲಿರುವ ಮನೆ ಬೀಗ ಮುರಿದು 14 ತೊಲ ಬಂಗಾರ, 62 ಸಾವಿರ ರೂ. ನಗದು ಕಳ್ಳತನ ಮಾಡಿದ್ದಾರೆ.
ಆದರೆ ಅದರಷ್ಟವಶಾತ್​ ಇಬ್ಬರು ವ್ಯಕ್ತಿಗಳು ಈ ಮನೆಯಿಂದ ಕಾಂಪೌಂಡ್ ಹಾರಿ ಹೋಗಿದ್ದನ್ನು ರೇಖಾ ಎಂಬ ಮಹಿಳೆ ನೋಡಿದ್ದಾರೆ. ಘಟನಾ ಸ್ಥಳಕ್ಕೆ DYSP ಹರೀಶ್, CPI ಸೋಮಶೇಖರ್ ಕೆಂಚಾರೆಡ್ಡಿ, ಭೇಟೆ ನೀಡಿ ಪರಿಶೀಲನೆ ನಡೆಸಿದ್ದು ಬಳ್ಳಾರಿಯಿಂದ ಬೆರಳಚ್ಚು ತಜ್ಞರು ಮತ್ತು ಶ್ವಾನದಳವನ್ನು ಕರೆಸಿ ಪರೀಕ್ಷಿಸಿದ್ದಾರೆ. ಸದ್ಯ ಗುರುಸಿದ್ದಪ್ಪ ನೀಡಿದ ದೂರಿನ ಅನ್ವಯ ಕೊಟ್ಟೂರು ಪೋಲಿಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
