ಮಂಗಳೂರು:ಖಾಸಗಿ ವೈದ್ಯಕೀಯ ಕಾಲೇಜೊಂದರ ಹಾಸ್ಟೆಲ್​ಗೆ ರಾತ್ರೋರಾತ್ರಿ ನುಗ್ಗಿ ವಿದ್ಯಾರ್ಥಿನಿಯೊಬ್ಬರ ಮಾನಭಂಗ ಮಾಡಿ ಹಣ ದರೋಡೆ ನಡೆಸಿದ್ದ ದುಷ್ಕರ್ಮಿಗೆ ದಕ್ಷಿಣ ಕ‌ನ್ನಡ ಜಿಲ್ಲೆಯ 6ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ 7 ವರ್ಷ ಕಠಿಣ ಸಜೆ ವಿಧಿಸಿ ಸೋಮವಾರ ತೀರ್ಪು ನೀಡಿದೆ.
ಮೈಸೂರು ಜಿಲ್ಲೆ ಕೆ.ಆರ್.ನಗರ ಮೂಲದ ನಾಗೇಶ್ ಅಲಿಯಾಸ್​ ನಾಗ(30) ಅಪರಾಧಿ. ಮಂಗಳೂರಿನ ಹೋಟೆಲ್​ಗಳಲ್ಲಿ ಕೆಲಸ ಮಾಡಿಕೊಂಡಿದ್ದ ಈತ 2017ರ ಡಿಸೆಂಬರ್​ 4ರಂದು ದೇರಳಕಟ್ಟೆ ಸಮೀಪ ಬಂದಿದ್ದ. ಅಲ್ಲಿರುವ ವೈದ್ಯಕೀಯ ಕಾಲೇಜು ಬಳಿ ಸುತ್ತಾಡುತ್ತಿದ್ದ ನಾಗೇಶ್​, ಮರುದಿನ ಅಂದ್ರೆ ಡಿಸೆಂಬರ್​ 5ರ ರಾತ್ರಿ 2 ಗಂಟೆ ಸುಮಾರಿಗೆ ಕಾಲೇಜು ವಿದ್ಯಾರ್ಥಿನಿಯರಿದ್ದ ಹಾಸ್ಟೆಲ್​ಗೆ ನುಗ್ಗಿದ್ದ. ಕಟ್ಟಡದ ಪೈಪ್ ಹಿಡಿದುಕೊಂಡು​ ಮೇಲಕ್ಕೆ ಹತ್ತಿದ್ದ ದುಷ್ಕರ್ಮಿ ಮೂರನೇ ಮಹಡಿಗೆ ನುಗ್ಗಿದ್ದ. ಜತೆಗೆ ಕಬ್ಬಿಣದ ರಾಡ್​ ಅನ್ನೂ ತಂದಿದ್ದ. ಕೆಲ ಕೋಣೆಗಳ ಬಾಗಿಲನ್ನು ತಳ್ಳಿದ್ದ. ಆ ಪೈಕಿ ತೆರೆದಿದ್ದ ಒಂದು ಬಾಗಿಲ ಒಳಹೊಕ್ಕ ದುಷ್ಕರ್ಮಿ, ಕೋಣೆಯಲ್ಲಿದ್ದ ಎಂಬಿಬಿಎಸ್​ ವಿದ್ಯಾರ್ಥಿಗೆ ರಾಡ್​ನಿಂದ ಬೆದರಿಸಿದ್ದ.ಇದನ್ನೂ ಓದಿರಿ4 ತಿಂಗಳ ಭ್ರೂಣ ಹೊಟ್ಟೆಯಲ್ಲಿರುವಾಗಲೇ ಗೃಹಿಣಿ ಆತ್ಮಹತ್ಯೆ!
ಹಾಸ್ಟೆಲ್​ನಲ್ಲಿದ್ದ ಕೇರಳ ಮೂಲದ ವಿದ್ಯಾರ್ಥಿನಿಯೊಬ್ಬಳ ಬಳಿ 5 ಲಕ್ಷ ರೂಪಾಯಿ ಕೊಡುವಂತೆ ದುಷ್ಕರ್ಮಿ ನಾಗೇಶ್ ಕಬ್ಬಿಣದ ರಾಡ್​ ಹಿಡಿದುಕೊಂಡು ಬೆದರಿಕೆ ಹಾಕಿದ್ದ. ಆಕೆಯ ಪರ್ಸ್​, ಎಟಿಎಂ ದರೋಡೆ ಮಾಡಿಕೊಂಡು ಪರಾರಿಯಾಗಿದ್ದ. ಈ ಬಗ್ಗೆ ಆ ವಿದ್ಯಾರ್ಥಿನಿ ಡಿಸೆಂಬರ್​ 10ರಂದು ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಅಷ್ಟರಲ್ಲಿ ಆತ ಎರಡ್ಮೂರು ಎಟಿಎಂಗಳಲ್ಲಿ ಹಣ ಡ್ರಾ ಮಾಡಿಕೊಂಡಿದ್ದ. ಈತನ ಬೆರಚ್ಚು, ಸಿಸಿ ಕ್ಯಾಮಾರದಲ್ಲಿ ಸಿಕ್ಕ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಲಾಗಿತ್ತು. ಈತನ ದುಷ್ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಅಪರಾಧಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.
ಕಗ್ಗತ್ತಲ ರಾತ್ರಿಯಲ್ಲಿ ಸದ್ದು ಮಾಡಿ ಸಿಕ್ಕಿಬಿದ್ದ ಕಳ್ಳರು!

ಸಾಯುತ್ತಿದ್ದ ನಾಯಿಗೆ ನೀರು ಕುಡಿಸಲು ಬಂದವ ಸ್ಥಳದಲ್ಲೇ ಶವವಾದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
