ಬೆಂಗಳೂರು:ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ ”ರಾಬರ್ಟ್​” ರಿಲೀಸ್​ಗೆ ಟಾಲಿವುಡ್​ ತೆಗೆದಿದ್ದ ಕ್ಯಾತೆಗೆ ನಟ ದರ್ಶನ್​ ಫುಲ್​ ಗರಂ ಆಗಿದ್ದರು. ಅಲ್ಲದೆ, ಆಂಧ್ರದ ಈ ನಡೆಗೆ ರಾಜ್ಯದಲ್ಲೂ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಈ ಸಮಸ್ಯೆ ಇತ್ಯರ್ಥಕ್ಕೆ ಸೌತ್ ಇಂಡಿಯನ್ ಫಿಲ್ಮ್ ಚೇಂಬರ್ ಅಭಯ ನೀಡಿದೆ.
ಮಾರ್ಚ್​ 11ರಂದು ರಾಬರ್ಟ್​ ಸಿನಿಮಾ ರಿಲೀಸ್​ಗೆ ನಿರ್ಮಾಪಕರು ಡೇಟ್​ ಫಿಕ್ಸ್​ ಮಾಡಿದ್ದು,ರಾಬರ್ಟ್​ ಸಿನಿಮಾ ಬಿಡುಗಡೆಯಾಗುವ ಸಮಯದಲ್ಲದೇ ತೆಲುಗಿನ “ಶ್ರೀಕಾರನ್”, “ಗಾಲಿ ಸಂಪತ್” ಹಾಗೂ “ಜಾಥಿ ರತ್ನಲು” ಚಿತ್ರಗಳು ಬಿಡುಗಡೆ ಆಗ್ತಿವೆ. ಹಾಗಾಗಿ ತೆಲುಗು ಚಿತ್ರಗಳಿಗೆ ತೊಂದರೆ ಆಗದಿರಲಿ ಎಂದು ರಾಬರ್ಟ್ ರಿಲೀಸ್​ ದಿನಾಂಕವನ್ನು ಮುಂದೂಡಿ ಎಂದು ರಾಬರ್ಟ್ ನಿರ್ಮಾಪಕರಿಗೆ ಆಂಧ್ರದ ಸಿನಿಮಾ ವಿತರಕರು ಸಲಹೆ ಕೊಟ್ಟಿದ್ದರು. ಇದಕ್ಕೆ ರಾಬರ್ಟ್​ ಸಿನಿಮಾ ನಿರ್ಮಾಪಕ ಉಮಾಪತಿ ಗರಂ ಮತ್ತು ನಟ ದರ್ಶನ್​ ಗರಂ ಆಗಿದ್ದರು. ಅಲ್ಲದೆ, ಈ ಸಮಸ್ಯೆ ಬಗೆಹರಿಸುವಂತೆ ನಟ ದರ್ಶನ್​ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಜ.29ರಂದು ದೂರು ನೀಡಿದ್ದರು.
ಇದೇ ವಿಚಾರವಾಗಿ ಇಂದು(ಭಾನುವಾರ) ಸೌತ್ ಇಂಡಿಯನ್ ಫಿಲ್ಮ್ ಚೇಂಬರ್​ಗೆ ಕರ್ನಾಟಕ ಫಿಲ್ಮ್ ಚೇಂಬರ್ ದೂರು ನೀಡಿತು.  ಸಕರಾತ್ಮಕವಾಗಿ ಸ್ಪಂದಿಸಿದ ಸೌತ್ ಇಂಡಿಯನ್ ಫಿಲ್ಮ್ ಚೇಂಬರ್, ಮಾ.11ರಂದೇ ಸಿನಿಮಾ ಬಿಡುಗಡೆಗೆ ಅವಕಾಶ ಸಿಗುವ ಬಗ್ಗೆ ಭರವಸೆ ನೀಡಿದೆ. ಸಭೆಯಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್, ನಿರ್ಮಾಪಕರ ವಲಯದ ಕಾರ್ಯದರ್ಶಿ ಎನ್.ಎಂ.ಸುರೇಶ್ ಪಾಲ್ಗೊಂಡಿದ್ದರು.
ಕರ್ನಾಟಕದ ಈ ಊರಲ್ಲಿ 150 ಎಕರೆ ಜಮೀನು ಫ್ರೀ! ಸಿಕ್ಕಷ್ಟು ಜಾಗಕ್ಕೆ ಬೇಲಿ ಹಾಕಿದ ಜನ

ನಿವೃತ್ತ ಉಪನ್ಯಾಸನ ಪತ್ನಿ, ಇಬ್ಬರು ಮಕ್ಕಳು ನಾಲೆಗೆ ಹಾರಿ ಆತ್ಮಹತ್ಯೆ! ಸಾವಿಗೂ ಮುನ್ನ ನಡೆದಿತ್ತು ವಾಕ್ಸಮರ

ಹೊಸಕೋಟೆಯಲ್ಲಿ ಪ್ರತಿಭಟನೆ, ಲಾಠಿ ಚಾರ್ಜ್: ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಎಫ್​ಐಆರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
