ಕಲಬುರಗಿ:ರೈಲು ಸುರಂಗ ಮಾರ್ಗದಲ್ಲಿನ ಹಳಿಯ ಮೇಲೆ ಬಂಡೆ ಬಿದ್ದ ಕಾರಣ ಸೋಮವಾರ ಎರಡು ಕಲಬರ್ಗಿ-ಬೀದರ್​ ನಡುವೆ ಎರಡು ಘಂಟೆಗಳ ಕಾಲ ಟ್ರೈನ್​ ಸಂಚಾರ ಸ್ಥಗಿತಗೊಳಿಸಲಾಗಿತ್ತು.
ಘಟನೆಯೂ ಬೀದರ್​-ಕಲಬುರ್ಗಿ ನಡುವಿನ ಕಮಲಾಪುರದ ಮರಗುತ್ತಿಯಲ್ಲಿ ನಡೆದಿದ್ದು, ಬೆಳಗ್ಗೆ 9 ಘಂಟೆ ಸುಮಾರಿಗೆ ಘಟನೆ ನಡೆದಿದೆ. ಸ್ಥಳಲ್ಲೆ ಆಗಮಿಸಿದ ರೈಲ್ವೆ ಇಲಾಖೆಯ ಸಿಬ್ಬಂದಿ ಬಂಡೆಯನ್ನು ರೈಲಿನ ತೆಗೆದು ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಬೆಳಗ್ಗೆ 7:30ಕ್ಕೆ ಬೀದರ್​ನಿಂದ ಕಲಬುರ್ಗಿ ಕಡೆ ಹೊರಟಿದ್ದ ಡೆಮು ರೈಲು 9 ಘಂಟೆ ಸುಮಾರಿಗೆ ಮರಗುತ್ತಿ ಸುರಂಗ ಮಾರ್ಗ ಪ್ರವೇಶಿಸಿದೆ. ಟನಲ್​​ನೊಳಗೆ ರೈಲು ಸಂಚರಿಸುವ ವೇಳೆ ಮೇಲಿನಿಂದ ಬಂಡೆಯೊಂದು ಕಳಚಿ ಬಿದ್ದಿದೆ. ಕೂಡಲೇ ಎಚ್ಚೆತ್ತ ಲೋಕೋ ಪೈಲಟ್​ ರೈಲಿನ ವೇಗವನ್ನು ಕಡಿಮೆ ಮಾಡಿ ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದಾರೆ.
ಇದನ್ನೂ ಓದಿ:ಎತ್ತು ಬೆದರಿಸುವ ಸ್ಪರ್ಧೆಯಲ್ಲಿ ಅವಘಡ; ಹಲವರಿಗೆ ಗಾಯ
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ರೈಲ್ವೆ ಇಲಾಖೆ ಸಿಬ್ಬಂದಿ ಬಂಡೆಯನ್ನು ಕಡಿದು ರೈಲಿನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. 11:20ರ ವೇಳೆಗ ರೈಲು ಕಲಬುರ್ಗಿ ಸ್ಟೇಷನ್​ ತಲುಪಿತ್ತು. ಅಷ್ಟರಲ್ಲಾಗಲೇ ರೈಲಿನಲ್ಲಿದ್ದ ಅರ್ಧಕ್ಕೂ ಹೆಚ್ಚು ಪ್ರಯಾಣಿಕರು ಕಾಲ್ನಡಿಗೆ ಮೂಲಕ ಕಮಲಾಪುರಕ್ಕೆ ಬಂದು ಬಸ್​ ಮೂಲಕ ತೆರಳಿದ್ದರು.
ಘಟನೆ ಕುರೊಇತು ಪ್ರತಿಕ್ರಯಿಸಿರುವ ಪ್ರಯಾಣಿಕರೊಬ್ಬರು ಸುರಂಗ ಮಾರ್ಗದ ಮಧ್ಯದಲ್ಲಿ ಮೆಷ್ ಹಾಕಿ ಸಿಮೆಂಟ್​ ಹಾಕಲಾಗಿದೆ. ಇದು ಕಚ್ಚಾ ಕಾಮಗಾರಿಯಾಗಿದ್ದು ಬಂಡೆ ಕಳಚಿ ಬಿದ್ದಿದೆ. ಸುರಂಗ ಮಾರ್ಗದುದ್ದಕ್ಕೂ ಕಬ್ಬಿಣ್ಣದ ರಾಡ್​ಗಳನ್ನು ಹಾಕಿ ಆರ್​ಸಿಸಿಯಿಂದ ಮುಚ್ಚಬೇಕಿತ್ತು. ಮಳೆಗಾಲ ಆಗಿರುವುದರಿಂದ ಗುಡ್ಡಗಳು ಮೇಲಿನಿಂದ ಬೀಳುವ ಸಾಧ್ಯತೆ ಹೆಚ್ಚಿದೆ. ರೈಲ್ವೆ ಇಲಾಖೆಯವರು ಈ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 5 =
Remember me
