ಬೆಂಗಳೂರು:ನನ್ನ ತಾಯಿ ಆಸೆಪಟ್ಟರು ಎಂದು ನಾನು ಜಮೀನು ಖರೀದಿಸಿದೆ. ರಸ್ತೆ ವಿಚಾರಲ್ಲಿ ಜಗಳ ಆಗಿದೆ. ನಮಗೆ ತೊಂದರೆ ಕೊಡುವವರನ್ನು ನಾನು ಬಿಡುವುದಿಲ್ಲ ಎಂದು ನಟ ಯಶ್​ ಹೇಳಿದರು.
ಜಮೀನು ಗಲಾಟೆ ವಿಚಾರವಾಗಿ ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿದ ಯಶ್​, ನಾನು ಆ ಜಾಗ ತೆಗೆದುಕೊಂಡಿದ್ದು, ವ್ಯವಸಾಯಕ್ಕಾಗಿ. ದೊಡ್ಡ ಜಾಗವನ್ನು ತೆಗೆದುಕೊಂಡಾಗ ಸಾಮಾನ್ಯವಾಗಿ ಸಮಸ್ಯೆಯಾಗುತ್ತದೆ. ಮುಂದೆ ಆ ರೀತಿ ಆಗದಂತೆ ನೋಡಿಕೊಳ್ತೇವೆ. ನಮ್ಮ ಜಾಗದಲ್ಲಿ ಕೆಲವೊಂದು ಅಕ್ರಮಗಳು ನಡೆದಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ನಮ್ಮ ಜಗವನ್ನು ಭದ್ರ ಮಾಡಿಕೊಳ್ಳಬೇಕು. ಹೀಗಾಗಿ ಕಾಂಪೌಂಡ್​ ಹಾಕಬೇಕಿದೆ ಎಂದು ಯಶ್​ ತಿಳಿಸಿದರು.
ಇದನ್ನೂ ಓದಿರಿ:ಟೈಪಿಂಗ್​, ಷಾರ್ಟ್​ಹ್ಯಾಂಡ್​ ಕಲಿತಿರುವಿರಾ? ಕೋರ್ಟ್​ನಲ್ಲಿವೆ 18 ಹುದ್ದೆಗಳು
ರಸ್ತೆ ವಿಚಾರಕ್ಕೆ ಜಗಳ ನಡೆದಿದೆ. ರಸ್ತೆ ಮಾಡಿಕೊಡಲು ಸರ್ಕಾರಕ್ಕೆ ಹೇಳಿದ್ದೇನೆ. ಯಾರಿಗೂ ಅನ್ಯಾಯ ಮಾಡುವ ಉದ್ದೇಶ ನಮಗಿಲ್ಲ. ಇಂತಹ ಜಗಳಗಳು ಸಾಮಾನ್ಯ. ನಾವೇ ಕುಳಿತು ಬಗೆಹರಿಸಿಕೊಳ್ಳುತ್ತೇವೆ. ಕೋಪದಲ್ಲಿ ಒಂದೆರಡು ಮಾತುಗಳನ್ನು ಆಡಿರಬಹುದು. ಅದರಿಂದ ನೋವಾಗಿದ್ದರೆ ಕ್ಷಮಿಸಿ. ನಾನು ಬೇರೆ ಕೆಲಸದಲ್ಲಿ ಬಿಜಿಯಾಗಿದ್ದೇನೆ. ಈ ಸಮಸ್ಯೆ ಬಗೆಹರಿಸಲು ಸಮಯ ಬೇಕಾಗುತ್ತದೆ. ಎಲ್ಲವನ್ನು ಸರಿ ಮಾಡುತ್ತೇನೆಂದರು.
ಇದೇ ವೇಳೆ ಘಟನೆಗೆ ರಾಜಕೀಯ ಸ್ವರೂಪ ಇರಬಹುದಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಶ್​, ಹಾಗೇನು ಇಲ್ಲ. ಇದೊಂದು ಸಾಮಾನ್ಯ ಜಗಳವಷ್ಟೇ. ಹಾಗೇನಾದರೂ ರಾಜಕೀಯ ಸ್ವರೂಪ ಇದ್ದಲ್ಲಿ. ಏನು ಮಾಡಬೇಕೆಂದು ನನಗೆ ತಿಳಿದಿದೆ. ನಮಗೆ ತೊಂದರೆ ಕೊಡುವವರನ್ನು ನಾನು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. (ದಿಗ್ವಿಜಯ ನ್ಯೂಸ್​)
ನಾನು ಅಪ್ಪ-ಅಮ್ಮನಿಗೆ ಹುಟ್ಟಿದ ಮಗ, ಹಾಸನದವ, ಇಮೇಜ್​ ನೋಡುತ್ತ ಕೂರೋಕೆ ಆಗಲ್ಲ: ಯಶ್​ ಗರಂ

ನಾನು 20 ವರ್ಷ ಕಾಂಗ್ರೆಸ್​ನಲ್ಲೇ ಇದ್ದೆ, ಜಾರಕಿಹೊಳಿ ಸಿಡಿ ಮಾಡಿದ್ದೇ ಕಾಂಗ್ರೆಸ್​: ಸಚಿವರ ಸ್ಫೋಟಕ ಹೇಳಿಕೆ

VIDEO| ನಾಯಿಯನ್ನು ತೋಳ ಎಂದು ನಂಬಿಸುತ್ತಿರುವ ಚೀನಾ ಮೃಗಾಲಯ: ವಿಡಿಯೋ ವೈರಲ್​!

ಉತ್ತರಾಖಂಡ ಸಿಎಂ ಸ್ಥಾನಕ್ಕೆ ತಿರತ್ ಸಿಂಗ್ ರಾವತ್ ಆಯ್ಕೆ: ಸಂಜೆ 4ಕ್ಕೆ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 10 =
Remember me
