ಬೆಂಗಳೂರು:ನಿಮ್ಮ ಜೀವನ-ದೇಹ ನಿಮ್ಮದಲ್ಲ. ಅದನ್ನು ನಿಮ್ಮ ಅಪ್ಪ-ಅಮ್ಮ ಕೊಟ್ಟಿರುವ ಭಿಕ್ಷೆ. ಇದನ್ನರಿತುಕೊಂಡು ನಡೆಯಿರಿ ಎಂದು ನಟ ಯಶ್​ ರಾಜ್ಯದ ಯುವಜನತೆಗೆ ಸಂದೇಶ ನೀಡಿದ್ದಾರೆ.
‘ನನಗೂ ಮಕ್ಕಳಿದ್ದಾರೆ. ಅವರಿಗೆ ಏನು ಸಮಸ್ಯೆ ಆಗುತ್ತೋ ಅಂತಾ ಅಪ್ಪ-ಅಮ್ಮ ಯೋಚನೆ ಮಾಡ್ತಾರೆ. ತುತ್ತು ಕೊಟ್ಟು ಮುಂದೆ ಏನೋ ಮಾಡಬೇಕು ಅಂತಾ ಬೆಳೆಸಿರ್ತಾರೆ. ಅಪ್ಪ-ಅಮ್ಮನಿಗಾಗಿ ಗೌರವ ತರುವ ಕೆಲಸ ಮಾಡಿ ಎಂದು ಸಲಹೆ ನೀಡಿದ್ದಾರೆ’. ಅಷ್ಟಕ್ಕೂ ಈ ಮಾತನ್ನು ಯಶ್​ ಹೇಳಿದ್ದು ಯಾವ ಕಾರಣಕ್ಕೆ ಗೊತ್ತಾಇದನ್ನೂ ಓದಿರಿ‘ನಂಗೆ ಸಂಜನಾನೂ ಗೊತ್ತಿಲ್ಲ, ರಾಗಿಣಿನೂ ಗೊತ್ತಿಲ್ಲ… ಗೊತ್ತಿರೋದು ನನ್ನ ಹೆಂಡ್ತಿ ಮಾತ್ರ’
ಡ್ರಗ್ಸ್​ ಮಾಫಿಯಾದ ಬೇರು ಎಲ್ಲೆಡೆ ವ್ಯಾಪಿಸಿಕೊಂಡಿದ್ದು, ದುಶ್ಚಟಕ್ಕೆ ಹಲವರು ಬಲಿಯಾಗಿದ್ದಾರೆ, ಬಹುತೇಕರು ಡ್ರಗ್ಸ್ ಜಾಲಕ್ಕೆ ಸಿಲುಕಿ ಬದುಕನ್ನೇ ಸರ್ವನಾಶ ಮಾಡಿಕೊಳ್ಳುತ್ತಿದ್ದಾರೆ. ಕಳೆದ ವಾರದಿಂದ ರಾಜ್ಯದಲ್ಲೂ ಡ್ರಗ್ಸ್ ಮಾಫಿಯಾ ಭಾರೀ ಸದ್ದು ಮಾಡುತ್ತಿದ್ದು, ಈ ಕೇಸ್​ನಲ್ಲಿ ಸ್ಯಾಂಡಲ್​ವುಡ್​ನ ನಟಿಯರಿಬ್ಬರು ಅರೆಸ್ಟ್ ಆಗಿದ್ದಾರೆ.
ಈ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಯಶ್​, ಡ್ರಗ್ಸ್ ಅನ್ನೋದು ದೇಶ ಹಾಗೂ ಜಗತ್ತಿಗೆ ಮಾರಕ. ಈ ದಂಧೆಯಲ್ಲಿ 10 ವಲಯದವರೂ ಇರ್ತಾರೆ. ಆದರೆ ಅದರಲ್ಲಿ ಹೈಲೆಟ್ ಆಗೋದು ಕನ್ನಡ ಚಿತ್ರರಂಗ ಮಾತ್ರ. ಬರೀ ಚಿತ್ರರಂಗ ಅಂತಾ ಹೇಳೋದು ಸರಿಯಲ್ಲ. ರಾಜ್ಯದ ಕೆಲ ಯುವಕರು-ಯುವತಿಯರು, ಜನರು ಅಂತಾ ಹೇಳಿ. ಈ ಮಾಫಿಯಾದಿಂದ ಎಲ್ಲ ವಲಯದಲ್ಲೂ ಸಮಸ್ಯೆ ಆಗ್ತಿದೆ ಎಂದರು.
ಡ್ರಗ್ಸ್ ನಿಯಂತ್ರಣ ಕುರಿತು ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಮಾಧ್ಯಮಗಳು ಒಳ್ಳೆಯ ಕೆಲಸ ಮಾಡುತ್ತಿವೆ ಎಂದ ಯಶ್​, ದರಿದ್ರ ಡ್ರಗ್ಸ್ ತಗೊಂಡು ಹಾಳಾಗಬಾರದು. ಮರ್ಯಾದೆಯಿಂದ ಇಂತಹ ದುಶ್ಚಟಗಳನ್ನು ಬಿಟ್ಟು, ಅಪ್ಪ-ಅಮ್ಮನಿಗಾಗಿ ಬದುಕಿ ಎಂದು ಸಂದೇಶ ನೀಡಿದರು.
ಸಿನಿಪ್ರಿಯರಿಗೆ ಗುಡ್ ನ್ಯೂಸ್, ಚಿತ್ರಮಂದಿರ ಓಪನ್​ಗೆ ಡೇಟ್​ ಫಿಕ್ಸ್

ಡ್ರಗ್ಸ್ ಕೇಸ್​ನಲ್ಲಿ ಬರೀ ಹೆಣ್ಮಕ್ಕಳದ್ದೇ ಹೆಸರು; ನಟಿ ಪಾರುಲ್​ ಆಕ್ರೋಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − one =
Remember me
