ಬೆಂಗಳೂರು:ಆಸ್ಟ್ರೇಲಿಯಾ ಓಪನ್ ಟೆನ್ನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಕನ್ನಡಿಗ ರೋಹನ್ ಬೋಪಣ್ಣ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿಯಾಗಿ ಅಭಿನಂದಿಸಿ, 50 ಲಕ್ಷ ರೂಪಾಯಿ ಬಹುಮಾನ ಘೋಷಿಸಿದರು.
ಇದೇ ಸಮಯದಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ಶಿವರಾಜ ತಂಗಡಗಿ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಹಾಗೂ ರೋಹನ್ ಬೋಪಣ್ಣ ಅವರ ಕುಟುಂಬದವರು ಹಾಜರಿದ್ದರು.
ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ@rohanbopannaಅವರನ್ನು ಭೇಟಿಯಾಗಿ ಅಭಿನಂದಿಸಿ, 50 ಲಕ್ಷ ರೂ.ಗಳ ಬಹುಮಾನ ಘೋಷಿಸಿದೆ.ಸಚಿವರಾದ@PriyankKharge, ಶಿವರಾಜ ತಂಗಡಗಿ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಹಾಗೂ ರೋಹನ್ ಬೋಪಣ್ಣ ಅವರ…pic.twitter.com/kRA0ftRoq4
— Siddaramaiah (@siddaramaiah)February 13, 2024

ಜನವರಿ 27ರಂದು ನಡೆದ ಜಿದ್ದಾಜಿದ್ದಿನ ಪುರುಷರ ಡಬಲ್ಸ್​ ಫೈನಲ್​ ಪಂದ್ಯದಲ್ಲಿ ರೋಹನ್ ಬೋಪಣ್ಣ ಮತ್ತು ಅವರ ಜತೆಗಾರ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಸೇರಿಕೊಂಡು ಇಟಲಿಯ ಸಿಮೋನ್​ ಬೊಲೆಲ್ಲಿ-ಆ್ಯಂಡ್ರಿಯಾ ವಸಸ್ಸೊರಿ ವಿರುದ್ಧ 7-6(7-0), 7-5 ನೇರ ಸೆಟ್​ಗಳಿಂದ ಗೆಲುವು ಸಾಧಿಸಿದರು. ಪರುಷರ ಡಬಲ್ಸ್​ ಫೈನಲ್​ ಪಂದ್ಯದಲ್ಲಿ ಗೆದ್ದು ಚೊಚ್ಚಲ ಆಸ್ಟ್ರೇಲಿಯಾ ಓಪನ್​ ಪ್ರಶಸ್ತಿ ಎತ್ತಿ ಹಿಡಿದಿ ರೋಹನ್​ ಭೂಪಣ್ಣ ಸಾಧನೆಗೆ ಕ್ರಿಕೆಟ್​ ದೇವರು ಸಚಿನ್​, ವೀರೇಂದ್ರ ಸೆಹ್ವಾಗ್​, ಕನ್ನಡಿಗ ವೆಂಕಟೇಶ್​ ಪ್ರಸಾದ್​ ಸೇರಿದಂತೆ ಹಲವು ತಾರೆಯರು ಅಭಿನಂದನೆ ಸಲ್ಲಿಸಿದರು.
ರೋಹನ್‌ ಬೋಪಣ್ಣ ಹಾಗೂ ಮ್ಯಾಥ್ಯೂ ಎಬ್ಡನ್‌ ತಂಡವಾಗಿ ಗೆದ್ದ ಮೊದಲ ಗ್ರ್ಯಾಂಡ್‌ ಸ್ಲಾಂ ಪ್ರಶಸ್ತಿ ಇದಾಗಿದೆ. ಇದು ರೋಹನ್‌ ಬೋಪಣ್ಣ ಅವರ ಮೊಟ್ಟಮೊದಲ ಗ್ರ್ಯಾಂಡ್‌ ಸ್ಲಾಂ ಡಬಲ್ಸ್‌ ಪ್ರಶಸ್ತಿಯಾಗಿದೆ. ಅದಲ್ಲದೆ ಈ ಗೆಲುವು ಅವರ 43ನೇ ವಯಸ್ಸಿನಲ್ಲಿ ಬಂದಿರುವುದು ಇನ್ನಷ್ಟು ವಿಶೇಷವಾಗಿದೆ. ಪ್ರಶಸ್ತಿ ಸ್ವೀಕರಿಸುವ ವೇಳೆ ಮಾತನಾಡಿದ ರೋಹನ್‌ ಬೋಪಣ್ಣ, ನಾನು 43 ವರ್ಷದ ವ್ಯಕ್ತಿ ಎಂದು ಹೇಳಿಕೊಳ್ಳೋದಿಲ್ಲ. ನಾನು 43ನೇ ಹಂತದಲ್ಲಿದ್ದೇನಷ್ಟೇ ಎಂದು ತಿಳಿಸಿದ್ದರು.
ಅಂದಹಾಗೆ ರೋಹನ್ ಬೋಪಣ್ಣ ಎರಡು ಬಾರಿ ಅಮೆರಿಕನ್ ಓಪನ್ (2010, 2023) ಗ್ರ್ಯಾನ್‌ಸ್ಲಾಮ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಫೈನಲ್‌ಗೆ ಪ್ರವೇಶಿಸಿದ್ದರು. 43 ವರ್ಷದ ಬೋಪಣ್ಣ ವೃತ್ತಿಜೀವನದಲ್ಲಿ ಇದುವರೆಗೆ ಒಮ್ಮೆ ಮಾತ್ರ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದಿದ್ದು, ಅದು ಮಿಶ್ರ ಡಬಲ್ಸ್ ವಿಭಾಗದಲ್ಲಿ ಆಗಿದೆ. ಪುರುಷರ ಡಬಲ್ಸ್​ನಲ್ಲಿ ಅವರು 2 ಬಾರಿ ಫೈನಲ್​ಗೇರಿದ್ದರೂ ರನ್ನರ್​ಅಪ್​ಗೆ ತೃಪ್ತಿಪಟ್ಟಿದ್ದರು.
ಆಸ್ಟ್ರೇಲಿಯನ್‌ ಓಪನ್ ಪುರುಷರ ಡಬಲ್ಸ್‌ ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸಿದ ಬೋಪಣ್ಣ!

ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ರೋಹನ್​ ಬೋಪಣ್ಣ; ಕನ್ನಡಿಗನಿಂದ ರ್‍ಯಾಕೆಟ್​ ಗಿಫ್ಟ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 1 =
Remember me
