| ಮೃತ್ಯುಂಜಯ ಕಪಗಲ್ ಬೆಂಗಳೂರು
ವಾಣಿಜ್ಯಿಕ ಉತ್ಪಾದನೆ, ಕೃಷಿ ಜತೆಗೆ ಮನೆಗಳಿಗೂ ಸ್ವಚ್ಛ, ಹಸಿರು ಇಂಧನ ಬಳಕೆಗೆ ಉತ್ತೇಜಿಸಲು ಕೇಂದ್ರ, ರಾಜ್ಯ ಸರ್ಕಾರಗಳು ಅನೇಕ ಉಪಕ್ರಮಗಳನ್ನು ಕೈಗೊಂಡಿವೆ. ಇದಕ್ಕೆ ಮತ್ತೊಂದು ಸೇರ್ಪಡೆ ಕೇಂದ್ರ ಸರ್ಕಾರದ ‘ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ’. ಪ್ರಸಕ್ತ ವರ್ಷ ಒಂದು ಕೋಟಿ ಮನೆಗಳಿಗೆ ಈ ಯೋಜನೆ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ.
ಕೃಷಿ ಪಂಪ್​ಸೆಟ್​ಗಳಿಗೆ ಸೋಲಾರ್ ಫಲಕ ಅಳವಡಿಸಿಕೊಳ್ಳಲು ಒತ್ತಾಸೆಯಾಗಿವೆ. ಉಚಿತ ವಿದ್ಯುತ್ ಪೂರೈಕೆ ವೆಚ್ಚ ತಗ್ಗಲಿದೆ, ಆರ್ಥಿಕವಾಗಿ ಸ್ವಾವಲಂಬನೆ ಸಾಧ್ಯವಾಗಲಿದೆ ಎನ್ನುವುದು ಎಸ್ಕಾಂಗಳ ಲೆಕ್ಕಾಚಾರ. ಆದರೆ ಮನೆ ಬಳಕೆಗೆ ಸೋಲಾರ್ ವಿದ್ಯುತ್ ಅವಲಂಬನೆ ಹೆಚ್ಚಿದಷ್ಟು ಆದಾಯ ತಗ್ಗಲಿದೆ ಎನ್ನುವುದು ಎಸ್ಕಾಂಗಳ ಚಿಂತೆಗೆ ಕಾರಣವಾಗಿದೆ.
ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್​ವರೆಗೆ ಉಚಿತ ವಿದ್ಯುತ್ ಪೂರೈಕೆಯಾಗುತ್ತಿದೆ. ಈ ಮಿತಿ ದಾಟಿದ ಗೃಹ, ವಾಣಿಜ್ಯ ಮತ್ತು ಕೈಗಾರಿಕೆ ಬಳಕೆದಾರರು ಎಸ್ಕಾಂಗಳಿಗೆ ಆದಾಯದ ಮೂಲ. ಬಹುತೇಕ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಸ್ವಂತ ಅಥವಾ ಖಾಸಗಿ ಉತ್ಪಾದಕರೊಂದಿಗೆ ಒಪ್ಪಂದ ಮಾಡಿಕೊಂಡು ವಿದ್ಯುತ್​ಗೆ ಅನುಕೂಲ ಮಾಡಿಕೊಂಡಿವೆ. ಉಳಿದ ಕೈಗಾರಿಕೆಗಳು, ವಾಣಿಜ್ಯಿಕ ವಲಯ, 200 ಯೂನಿಟ್​ಗೆ ಮೇಲ್ಪಟ್ಟ ಗೃಹ ಬಳಕೆದಾರರು ಎಸ್ಕಾಂಗಳಿಗೆ ಆಧಾರ ಸ್ತಂಭವಾಗಿದ್ದು, ಸೂರಿನ ಮೇಲೆ ಸೌರ ಯೋಜನೆ ಎಸ್ಕಾಂಗಳ ಆದಾಯಕ್ಕೆ ಕತ್ತರಿ ಹಾಕುವುದಂತೂ ನಿಚ್ಚಳ. ಗೃಹಜ್ಯೋತಿ ಸೌಲಭ್ಯ ಪಡೆದವರು ಹೆಚ್ಚುವರಿ ವಿದ್ಯುತ್​ಗೆ ಸೋಲಾರ್ ಪಡೆಯುವ ಸಾಧ್ಯತೆಗಳಿದ್ದು, ಕೇಂದ್ರ ಸರ್ಕಾರದ ಯೋಜನೆಯು ರಾಜ್ಯ ಸರ್ಕಾರಕ್ಕೂ ನುಂಗಲಾರದ ಬಿಸಿ ತುಪ್ಪವಾಗುವ ಲಕ್ಷಣ ಗೋಚರಿಸುತ್ತಿವೆ ಎಂದು ಇಂಧನ ತಜ್ಞರು ಹೇಳುತ್ತಾರೆ.
ಸಬ್ಸಿಡಿ ಬಲ: ಮನೆ ಮೇಲೆ 3 ಕಿಲೋ ವಾಟ್ ಸಾಮರ್ಥ್ಯದ ಸೌರ ಫಲಕ ಅಳವಡಿಸಿದರೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಕೇಂದ್ರ ಸರ್ಕಾರ ನೇರವಾಗಿ 78 ಸಾವಿರ ರೂ. ಸಬ್ಸಿಡಿ ಜಮಾ ಮಾಡಲಿದೆ. ಪ್ರತಿ ಕಿ.ವಾ.ಗೆ 30 ಸಾವಿರ ರೂ.ನಂತೆ ಎರಡು ಕಿ.ವಾ.ಗೆ 60 ಸಾವಿರ ರೂ. ಮೂರನೇ ಕಿ.ವಾ.ಗೆ 18 ಸಾವಿರ ರೂ. ಸಹಾಯಧನ ನೀಡಲಿದ್ದು, ಗರಿಷ್ಠ ಮೂರು ಕಿ.ವಾ.ಮಿತಿ ನಿಗದಿಪಡಿಸಲಾಗಿದೆ. ಬಹುಮಹಡಿ ವಸತಿ ಸಮುಚ್ಚಯಗಳಿಗೆ 500 ಕಿ.ವಾ.ವರೆಗೆ ಅವಕಾಶವಿದೆ. ಪ್ರತಿ ಮನೆಗೆ ಮೂರು ಕೆ.ವಿ. ತನಕ, ಪ್ರತಿ ಕೆ.ವಿ.ಗೆ 18 ಸಾವಿರ ರೂ.ನಂತೆ ಸಹಾಯಧನ ಸೌಲಭ್ಯ ಲಭ್ಯವಿದೆ. ಪ್ರತಿ ಕಿ.ವಾ.ಗೆ ಸೌರ ಫಲಕ ಅಳವಡಿಕೆ ವೆಚ್ಚವು 60 ಸಾವಿರ ರೂ.ಗಳಾಗಲಿದೆ. ಇದರಲ್ಲಿ 30 ಸಾವಿರ ರೂ.ಗಳನ್ನು ಸಬ್ಸಿಡಿ ರೂಪದಲ್ಲಿ ಕೇಂದ್ರ ಸರ್ಕಾರವೇ ಭರಿಸಲಿದೆ.
ಆನ್​ಲೈನ್​ನಲ್ಲೇ ಅರ್ಜಿ:‘ಪಿಎಂ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ’ ಲಾಭ ಪಡೆಯಲು ಇಚ್ಛಿಸುವವರು ನೇರವಾಗಿ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದುೆ. ಇದಕ್ಕಾಗಿ ಕೇಂದ್ರದ ನವೀಕರಿಸಬಹುದಾದ ಇಂಧನ ಸಚಿವಾಲಯ ಪ್ರತ್ಯೇಕ ಪೋರ್ಟಲ್ ತೆರೆದಿದೆ. ಈ ಜಾಲತಾಣ (ಞ್ಞ್ಟ.ಜಟಡ.ಜ್ಞಿ) ದಲ್ಲಿ ಯೋಜನೆಯ ಮಾಹಿತಿ, ಅರ್ಜಿ ನಮೂನೆ, ಬೇಕಾದ ದಾಖಲೆಗಳ ವಿವರ ಲಭ್ಯವಿದೆ. ಅರ್ಜಿಯನ್ನು ಫಲಾನುಭವಿ ಪೂರ್ಣ ಭರ್ತಿ ಮಾಡಿ ಕೇಳಿದ ದಾಖಲೆಗಳನ್ನು ಅಪ್​ಲೋಡ್ ಮಾಡಿದರೆ ಒಂದು ಐಡಿ ನಂಬರ್ ಬರುತ್ತದೆ. ಪ್ರತಿ ಬಾರಿಯೂ ಫಲಾನುಭವಿ ಈ ಐಡಿ ನಂಬರ್ ನಮೂದಿಸಬೇಕಾಗುತ್ತದೆ. ಅದೇ ರೀತಿ ಸೌರ ಉಪಕರಣ ಅಳವಡಿಸಲು ಆಸಕ್ತ ಉದ್ಯಮಿಯೂ ಇದೇ ಪೋರ್ಟಲ್​ನಲ್ಲಿ ವಿವರಗಳನ್ನು ದಾಖಲಿಸಬೇಕಾಗುತ್ತದೆ. ಫಲಾನುಭವಿ ಹಾಗೂ ಉದ್ಯಮಿ ಪರಸ್ಪರ ಒಪ್ಪಂದ ಮಾಡಿಕೊಂಡ ಬಳಿಕ ಕರಾರುಪತ್ರವನ್ನು ಪೋರ್ಟಲ್​ಗೆ ಅಪ್​ಲೋಡ್ ಮಾಡಬೇಕು. ಕೇಂದ್ರ ಸರ್ಕಾರ ನಿಗದಿಪಡಿಸಿದ ಸೋಲಾರ್ ಉಪಕರಣಗಳು, ಇರ್ನÌರ್ ಗುಣಮಟ್ಟ, ದರಗಳು, ಮಾನದಂಡಗಳನ್ನು ಉದ್ಯಮಿ/ ಫಲಾನುಭವಿಗಳು ಮೀರುವಂತಿಲ್ಲ.
ಸಿಗಲಿದೆ ಸಾಲ ಸೌಲಭ್ಯ:ಸೌರ ಫಲಕ ಅಳವಡಿಕೆಗೆ ಫಲಾನುಭವಿ ಸ್ವಂತ ಬಂಡವಾಳ ಅಥವಾ ಬ್ಯಾಂಕ್ ಸಾಲ ಪಡೆದ ಬಗ್ಗೆ ಅರ್ಜಿಯಲ್ಲಿ ಉಲ್ಲೇಖಿಸಬೇಕಾಗುತ್ತದೆ. ಸಾಲ ಪಡೆದಿದ್ದರೆ ಸಬ್ಸಿಡಿ ಮೊತ್ತವು ಸಂಬಂಧಿಸಿದ ಬ್ಯಾಂಕ್ ಖಾತೆಗೆ ಕೇಂದ್ರ ಸರ್ಕಾರ ಜಮೆ ಮಾಡುತ್ತದೆ. ಅರ್ಜಿಯಲ್ಲಿ ಎಲ್ಲ ವಿವರಗಳು, ಕೇಳಿದ ದಾಖಲೆಗಳು ಸಮರ್ಪಕವಾಗಿದ್ದರೆ 15 ದಿನಗಳಲ್ಲಿ ಸಬ್ಸಿಡಿ ಮಂಜೂರಾಗುತ್ತದೆ. ಸೋಲಾರ್ ಫಲಕ ಅಳವಡಿಸಿಕೊಂಡ ಬಳಿಕ ಎಸ್ಕಾಂಗೆ ತಿಳಿಸಬೇಕು. ಸಂಬಂಧಿಸಿದ ಅಧಿಕಾರಿ ಸ್ಥಳ ಪರಿಶೀಲಿಸಿ ಅದೇ ಪೋರ್ಟಲ್​ಗೆ ವರದಿ ಸಲ್ಲಿಸುತ್ತಾರೆ. ಸ್ವಂತಕ್ಕೆ ಬಳಸಿಕೊಂಡ ನಂತರ ಹೆಚ್ಚುವರಿ ವಿದ್ಯುತ್ ಜಾಲ (ಗ್ರಿಡ್)ಕ್ಕೆ ಕೊಡಲು ಅವಕಾಶವಿದ್ದು, ಇದಕ್ಕಾಗಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ.
ಸೇವಾ ಶುಲ್ಕಕ್ಕೆ ಅವಕಾಶ:ಯೋಜನೆಯಿಂದ ಬರಿಗೈ ಆಗುತ್ತೇವೆ ಎಂದು ಎಸ್ಕಾಂಗಳು ಹಿಂದೇಟು ಹಾಕುವ ಸಾಧ್ಯತೆಗಳಿವೆ ಎಂದು ಕೇಂದ್ರ ಸರ್ಕಾರ ಅರಿತುಕೊಂಡಿದೆ. ಈ ಹಿನ್ನೆಲೆಯಲ್ಲಿ ಸೋಲಾರ್ ಫಲಕ ಅಳವಡಿಸಿದರೆ ಒಂದಿಷ್ಟು ನೆರವಿನ ಅಂಶ ದೊರೆಯಲಿದೆ. ಸ್ಥಳೀಯ ಸಂಸ್ಥೆಗಳು ಏಜನ್ಸಿ ರೀತಿ ಕೆಲಸ ಮಾಡಿ ಕೇಂದ್ರ ಸರ್ಕಾರದಿಂದ ಸೇವಾ ಶುಲ್ಕ ಪಡೆಯಬಹುದು.
ಕಾಂಗ್ರೆಸ್‌ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಪ್ರಚಾರದಲ್ಲಿ ಭಾಗವಹಿಸದಂತೆ ಮಾಜಿ ಸಿಎಂ ಕೆಸಿಆರ್​ಗೆ ನಿಷೇಧ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty − thirteen =
Remember me
