ಬೆಂಗಳೂರು: ಐಪಿಎಸ್​ ಅಧಿಕಾರಿ ಡಿ.ರೂಪಾ ಹಾಗೂ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಸಂಘರ್ಷದ ಮಧ್ಯೆ ಐಎಎಸ್​ ಅಧಿಕಾರಿ ಡಿ.ಕೆ.ರವಿ ಪತ್ನಿ ಕುಸುಮಾ ಮಧ್ಯ ಪ್ರವೇಶಿಸಿದ ಬೆನ್ನಿಗೇ ಇದೀಗ ಮತ್ತೊಮ್ಮೆ ಡಿ.ಕೆ.ರವಿ ಹೆಸರು ಮುನ್ನೆಲೆಗೆ ಬಂದಿದೆ. ರವಿ ಹೆಸರನ್ನು ಉಲ್ಲೇಖಿಸಿದ ರೂಪಾ, ಈ ಸಲ ಸತ್ಯವನ್ನು ಮಣಿಸಲು ಸಾಧ್ಯವಿಲ್ಲ ಎಂದು ರೋಹಿಣಿಗೆ ಸವಾಲೆಸೆದಿದ್ದಾರೆ.
ರೋಹಿಣಿ ಸಿಂಧೂರಿಯ ಕೆಲವು ಖಾಸಗಿ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ರೂಪಾ ಹಂಚಿಕೊಂಡ ಬೆನ್ನಿಗೇ ರೋಹಿಣಿ ಸಿಂಧೂರಿ ಲಿಖಿತ ಪ್ರತಿಕ್ರಿಯೆ ನೀಡಿದ್ದರು. ಈ ಮಧ್ಯೆ ಕರ್ಮದ ಫಲ ಉಣ್ಣಲೇಬೇಕು ಎನ್ನುವಂತೆ ಡಿ.ಕೆ.ರವಿ ಪತ್ನಿ ಕುಸುಮಾರ ಪರೋಕ್ಷವಾಗಿ ರೋಹಿಣಿಗೆ ಟಾಂಗ್ ನೀಡಿದ್ದರು.
ಇದನ್ನೂ ಓದಿ:ಸರ್ಕಾರಿ ಅಧಿಕಾರಿಗಳ ಕಿತ್ತಾಟ: ಡಿ. ರೂಪಾಗೆ ರೋಹಿಣಿ ಸಿಂಧೂರಿ ಪ್ರತಿಕ್ರಿಯೆ
ಡಿ.ಕೆ.ರವಿ ಮಾನಸಿಕ ಅಸ್ವಸ್ಥತೆಯಿಂದ ಸತ್ತಿದ್ದಲ್ಲ ಎಂದಿರುವ ರೂಪಾ, ರೋಹಿಣಿ-ಡಿ.ಕೆ.ರವಿ ಪ್ರೇಮ ಸಲ್ಲಾಪ ಸಿಬಿಐ ಕೊಟ್ಟ ಫೈನಲ್ ರಿಪೋರ್ಟ್​​ನಲ್ಲಿ ಎಲ್ಲರ ಕೈ ಸೇರಿದೆ. ಒಬ್ಬ ಪುರುಷ ಎಲ್ಲೆ ಮೀರಿ ನಡೆದಾಗ ಈಕೆ ಜವಾಬ್ದಾರಿಯುತ ಹೆಣ್ಣು ಮಗಳಾಗಿ ಯಾಕೆ ಬ್ಲಾಕ್ ಮಾಡಲಿಲ್ಲ. ಅಂದರೆ ಉತ್ತೇಜನ ಕೊಟ್ಟಂತೆ ಅಲ್ಲವೇ? ಅದೇ ರೀತಿ ಐಎಎಸ್​​ ಅಧಿಕಾರಿಗಳಿಗೆ ಕಳಿಸಿದ ಆ ರೀತಿಯ ಚಿತ್ರಗಳು ಉತ್ತೇಜನ ಕೊಡುವುದು ಎಂದು ಅರ್ಥ ಆಗುವುದಿಲ್ಲವೇ? ಅವರು ಯಾವ ವೇದಿಕೆಗೆ ಹೋದರೂ, ಸತ್ಯ ಸತ್ಯವೇ. ಸತ್ಯ ಮಣಿಸಲು ಸಾಧ್ಯವಿಲ್ಲ. ಈ ಬಾರಿ ಸಾಧ್ಯವಿಲ್ಲ ಎಂದು ರೋಹಿಣಿಯನ್ನು ಉದ್ದೇಶಿಸಿ ಹೇಳಿದ್ದಾರೆ.

ಒಂಟಿ ನಳಿಗೆ ಕೋವಿಯಿಂದ ಮಗನನ್ನೇ ಗುಂಡಿಟ್ಟು ಕೊಂದ!

ಮತ್ತೆ ‘ಸೈಲೆಂಟ್’ ಸದ್ದು: ದೇವಾಲಯದಲ್ಲಿ ಭಕ್ತರಿಗೆ ಕೊಡುವ ಲಡ್ಡು ಪೊಟ್ಟಣಗಳ ಮೇಲೂ ರೌಡಿ ಸುನೀಲನ ಚಿತ್ರ!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:nineteen − 2 =
Remember me
