ವಿಜಯಪುರ:ಪ್ರಸಕ್ತ ಸಾಲಿನಲ್ಲಿ ಶಾಲೆಗಳನ್ನು ಪುನರಾರಂಭ ಮಾಡಬೇಕೋ-ಬೇಡವೋ? ಒಂದು ವೇಳೆ ಆರಂಭಸಿದರೂ ಅದು ಯಾವಾಗ? ಎಂಬ ಚಿಂತನೆಯಲ್ಲಿ ಸರ್ಕಾರ ಇದೆ. ಈ ನಿಟ್ಟಿನಲ್ಲಿ ಅಭಿಪ್ರಾಯ ಸಂಗ್ರಹಿಸಲು ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಜೂನ್ 10, 11, 12ರಂದು ಪಾಲಕರ ಸಭೆ ನಡೆಸುವಂತೆ ಸೂಚಿಸಿದೆ. ಆದರೆ, ಇದ್ಯಾವುದಕ್ಕೂ ಕ್ಯಾರೆ ಎನ್ನದ ಖಾಸಗಿ ಶಾಲೆಯೊಂದು ಪುಟ್ಟ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡಿದೆ!
ಇದನ್ನೂ ಓದಿರಿVIDEO| ಶಾಲೆಗಳ ಪುನರಾರಂಭದ ಬಗೆಗಿರುವ ಗೊಂದಲಗಳಿಗೆ ತೆರೆ ಎಳೆದ ಶಿಕ್ಷಣ ಸಚಿವರು
ಸರ್ಕಾರದ ಆದೇಶ ಬರೋಕು ಮುನ್ನವೇ ಇಲ್ಲಿನ ರಹೀಂ ನಗರದ ರೋಸ್ ಲೈನ್ ನರ್ಸರಿ ಶಾಲೆಯು ಅನಧಿಕೃತವಾಗಿ ಇಂದು (ಗುರುವಾರ) ತರಗತಿ ನಡೆಸಿದೆ. ಪಾಲಕರಿಂದ ಶುಲ್ಕ ವಸೂಲಿ ಆರಂಭಿಸಿರುವ ಶಾಲೆಯಲ್ಲಿ 15ಕ್ಕೂ ಹೆಚ್ಚು ಮಕ್ಕಳು ಹಾಜರಿದ್ದರು. ಕರೊನಾ ಹರಡುವ ಆತಂಕ ಇದ್ದರೂ ಮಕ್ಕಳನ್ನು ಎಂದಿನಂತೆ ಕೂರಿಸಿ ಪಾಠ ಮಾಡಲಾಗುತಿತ್ತು. ಇಲ್ಲಿ ಕನಿಷ್ಠ ದೈಹಿಕ ಅಂತರದ ಬಗ್ಗೆಯೂ ಜಾಗ್ರತೆ ವಹಿಸಿರಲಿಲ್ಲ. ಕುರಿದೊಡ್ಡಿಯಂತೆ ಮಕ್ಕಳನ್ನು ಕೂರಿಸಲಾಗಿತ್ತು.
ಇದನ್ನೂ ಓದಿರಿಜುಲೈ 1ಕ್ಕೆ ಶಾಲೆ ಆರಂಭ ಅನುಮಾನ? ಕ್ಲಾಸ್​ ಬೇಕಾ-ಬೇಡ್ವಾ ಪಾಲಕರೇ ನಿರ್ಧರಿಸ್ತಾರೆ..!
ಪುಟಾಣಿ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ ಈ ನರ್ಸರಿ ಶಾಲಾ ಆಡಳಿತ ಮಂಡಳಿ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಶಾಲಾ ಮಂಡಳಿಯವರನ್ನು ತರಾಟೆಗೆ ತೆಗೆದುಕೊಂಡ ಬಿಇಒ ನದಾಫ್, ಮಕ್ಕಳನ್ನು ಮನೆಗೆ ಕಳುಹಿಸಿದರು.
ಇದನ್ನೂ ನೋಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 19 =
Remember me
