ಬೆಂಗಳೂರು:ಐಎಂಎ ಕೇಸ್​ನಲ್ಲಿ 200 ಕೋಟಿ ರೂಪಾಯಿ ಡೀಲ್ ಕುದುರಿಸಿ ಸಂಕಷ್ಟಕ್ಕೆ ಸಿಲುಕಿರುವ ಮಾಜಿ ಸಚಿವ ರೋಷನ್​ ಬೇಗ್​ಗೆ ಸೆರೆವಾಸಕ್ಕೆ ಒಗ್ಗಿಕೊಳ್ಳೋದು ಕಷ್ಟವಾಗ್ತಿದೆಯಂತೆ.. ಐಷಾರಾಮಿ ಶೈಲಿಯಲ್ಲಿ ಬದುಕುತ್ತಿದ್ದ ಬೇಗ್​ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಹೊಂದಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಆಪ್ತರ ಬಳಿ ಹೇಳಿದ್ದಾಗಿ ಮೂಲಗಳು ತಿಳಿಸಿವೆ.
ಬೇಗ್​ಗೂ ನಂಗೂ ಸಂಬಂಧ ಇಲ್ಲ  !
ಐಎಂಎ ಹಗರಣಕ್ಕೆ ಸಂಬಂಧಿಸಿ ಬಂಧನವಾಗಿರುವ ರೋಷನ್ ಬೇಗ್​ಗೂ ನಮಗೂ ಸಂಬಂಧವಿಲ್ಲ. ಅವರು ನಮ್ಮ ಪಕ್ಷದಲ್ಲೂ ಇಲ್ಲ. ಹಣಕಾಸಿನ ವಿಚಾರ ಅವರ ವೈಯಕ್ತಿಕ. ನ್ಯಾಯಾಲಯ ತೀರ್ಮಾನ ಕೈಗೊಳ್ಳಲಿದೆ. ಹಗರಣದಲ್ಲಿ ಜಮೀರ್ ಅಹ್ಮದ್ ಭಾಗಿಯಾಗಿದ್ದಾರೆನ್ನುವ ಆರೋಪಕ್ಕೆ ಸಂಬಂಧಿಸಿ ಎಸ್​ಐಟಿ ಈಗಾಗಲೆ ಅವರ ವಿಚಾರಣೆ ನಡೆಸಿದೆ.| ಸಿದ್ದರಾಮಯ್ಯ, ಮಾಜಿ ಸಿಎಂ
ಭಾನುವಾರ ರಾತ್ರಿ ಸ್ನೇಹಿತರು ಕಳುಹಿಸಿದ್ದ ಕುಷ್ಕ ಮತ್ತು ಬ್ರೆಡ್ ತಿಂದು ಔಷಧ ಸೇವಿಸಿ ರಾತ್ರಿ 1 ಗಂಟೆಗೆ ಚಾಪೆ ಮೇಲೆ ನಿದ್ದೆಗೆ ಜಾರಿದ್ದರು. ಸೋಮವಾರ ಬೆಳಗ್ಗೆ ದಿನಪತ್ರಿಕೆ ನೀಡುವಂತೆ ಜೈಲು ಸಿಬ್ಬಂದಿಗೆ ಮನವಿ ಮಾಡಿದ್ದರು. 8 ಗಂಟೆಗೆ ಜೈಲಿನ ಮೆನು ಪ್ರಕಾರ ಸಿಬ್ಬಂದಿ ನೀಡಿದ ಉಪ್ಪಿಟ್ಟು ಸೇವಿಸಿದರು. ಬೆಳಗ್ಗೆ 11 ಗಂಟೆಗೆ ಹಾಗೂ ಸಂಜೆ 4 ಗಂಟೆಗೆ ಜೈಲು ಆಸ್ಪತ್ರೆ ವೈದ್ಯರು ಬೇಗ್ ಆರೋಗ್ಯ ತಪಾಸಣೆ ನಡೆಸಿದರು.
ಇದನ್ನೂ ಓದಿ:ಐಎಂಎ ವಂಚನೆ ಪ್ರಕರಣ; ಸಿಬಿಐ ಅಧಿಕಾರಿಗಳಿಂದ 28 ಮಂದಿ ವಿರುದ್ಧ ಪೂರಕ ಚಾರ್ಜ್​​ಶೀಟ್​…
ಜಾಮೀನು ಅರ್ಜಿ ಮುಂದೂಡಿಕೆ:ಪ್ರಕರಣದಲ್ಲಿ ರೋಷನ್ ಬೇಗ್ 36ನೇ ಆರೋಪಿಯಾಗಿದ್ದಾರೆ. ಜಾಮೀನಿಗಾಗಿ ಬೇಗ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸೋಮವಾರ ಅರ್ಜಿ ವಿಚಾರಣೆ ನಡೆಸಿದ ಸಿಟಿ ಸಿವಿಲ್ ನ್ಯಾಯಾಲಯ ನ.25ಕ್ಕೆ ಮುಂದೂಡಿದೆ. ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿದೆ.
ಇದನ್ನೂ ಓದಿ:ಐಎಂಎ ಬಹುಕೋಟಿ ವಂಚನೆ: ಮೂವರು ಪೊಲೀಸ್​ ಅಧಿಕಾರಿಗಳು ಅಮಾನತು
ಮನ್ಸೂರ್ 4 ದಿನ ಸಿಬಿಐ ವಶಕ್ಕೆ:ಮನ್ಸೂರ್ ಖಾನ್​ನನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಸೋಮವಾರ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಮನ್ಸೂರ್​ನಿಂದ ಇನ್ನಷ್ಟು ಮಾಹಿತಿ ಕಲೆ ಹಾಕಲು ಮತ್ತೆ 4 ದಿನ ವಶಕ್ಕೆ ನೀಡುವಂತೆ ಸಿಬಿಐ ನ್ಯಾಯಾಲಯಕ್ಕೆ ಮನವಿ ಮಾಡಲಾಯಿತು. ಅದನ್ನು ಪುರಸ್ಕರಿಸಿದ ನ್ಯಾಯಾಲಯ ನ.27ರ ವರೆಗೆ ಮನ್ಸೂರ್​ನನ್ನು ವಶಕ್ಕೆ ನೀಡಿದೆ. ಮತ್ತೊಂದೆಡೆ ಐಎಂಎ ಪ್ರಕರಣದಲ್ಲಿ ಮನ್ಸೂರ್​ನಿಂದ ಕೋಟ್ಯಂತರ ರೂ. ಲಂಚ ಪಡೆದು ಸಿಬಿಐ ಬಲೆಗೆ ಬಿದ್ದಿರುವ ಸರ್ಕಾರಿ ನೌಕರ ಕುಮಾರ್​ನನ್ನೂ ಸಿಬಿಐ 3 ದಿನಗಳ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
200 ಕೋಟಿ ರೂ. ಡೀಲು, ಬೇಗ್​ಗೆ ಜೈಲು – ಐಎಂಎ ಕೇಸಲ್ಲಿ ಮನ್ಸೂರ್​ನಿಂದ ಪಾಲು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × 4 =
Remember me
