ವಿಜಯನಗರ:ಹೊಸಪೇಟೆಯಲ್ಲಿ ಒಂಟಿ ಕೋತಿಯ ರೌಡಿಸಂ ಮಿತಿ ಮೀರುತ್ತಿದ್ದು ಕಂಡ ಕಂಡ ಮನೆಗೆ ನುಗ್ಗಿ ಸಿಕ್ಕಿದ್ದನ್ನ ಹೊತ್ತೊಯ್ಯುತ್ತಿದೆ. ಅದರ ಮನಸ್ಸಿಗೆ ಬಂದದ್ದನ್ನು ಮಾಡುವುದನ್ನು ತಡೆಯಲು ಹೋದರೆ ಕಚ್ಚಿ ಬಿಡುತ್ತಿದೆ.
ದೊಡ್ಡವರು, ಚಿಕ್ಕವರು ಮಕ್ಕಳ ನಡುವಿನ ವ್ಯತ್ಯಾಸ ನೋಡದೇ ಈ ಕೆಂಪು ಕೋತಿ ಕಂಡವರನ್ನು ಕಚ್ಚುತ್ತಿದ್ದು ಒಟ್ಟಿನಲ್ಲಿ ಕೋತಿ ಕಾಟಕ್ಕೆ ನಗರದ ಜನರು ಸುಸ್ತಾಗಿದ್ದಾರೆ.
ಒಂದೂವರೆ ತಿಂಗಳಲ್ಲಿ ಮೂವತ್ತೈದಕ್ಕೂ ಅಧಿಕ ಜನರಿಗೆ ಕೆಂಪು ಕೋತಿ ಕಚ್ಚಿ ಹಲ್ಲೆ ಮಾಡಿದ್ದು ತಲೆ, ಮುಖ, ಕಾಲು ಸೇರಿ ಸಿಕ್ಕ, ಸಿಕ್ಕ ಕಡೆಗೆ ಕೆಂಪು ಕೋತಿ ಕಚ್ಚುತ್ತಿದೆ.
ಇದನ್ನೂ ಓದಿ:ಶ್ರೀಲಂಕಾದಿಂದ ಚೀನಾಕ್ಕೆ 1 ಲಕ್ಷ ಕೋತಿಗಳು ರಫ್ತು ; ಮಂಗಗಳು ಯಾಕೆ ಬೇಕು ಗೊತ್ತಾ?
ಈ ಬಗ್ಗ ಅರಣ್ಯ ಇಲಾಳೆ ಬಳಿ “ಕೋತಿ ಕಾಟ ತಪ್ಪಿಸಿ” ಎಂದು ಕೇಳಿದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅವರು, ಕರಿ ಮುಖದ ಕೋತಿ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುತ್ತದೆ ಮತ್ತು ಕೆಂಪು ಮುಖದ ಕೋತಿ ನಗರಸಭೆ ವ್ಯಾಪ್ತಿಗೆ ಬರುತ್ತದೆ” ಎನ್ನುತ್ತಿದ್ದಾರೆ. ಈ ಬಗ್ಗೆ ಸಂತೋಷ್ ಎಂಬುವವರು ದಿಗ್ವಿಜಯ ನ್ಯೂಸ್ ಬಳಿ ಮಾತನಾಡಿದ್ದಾರೆ.

ಇದೀಗ ಸ್ಥಳಿಯರು ಗಾಯಗೊಂಡ ವ್ಯಕ್ತಿಯ ಸಂಪೂರ್ಣ ಖರ್ಚನ್ನು ಸರ್ಕಾರ ಭರೀಸಬೇಕು ಎಂದು ಸರ್ಕಾರ, ಅರಣ್ಯ ಇಲಾಖೆ ಹಾಗೂ ನಗರಸಭೆ ಬಳಿ ಆಗ್ರಹಿಸುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
