ಮಂಡ್ಯ:ಬಾಸ್​ ಎಂದು ಕರೆಯದಿದ್ದಕ್ಕೆ ಯುವಕನೊಬ್ಬನ ಮೇಲೆ ಪುಡಿ ರೌಡಿಗಳ ಗ್ಯಾಂಗ್​ ಹಲ್ಲೆ ಮಾಡಿರುವ ಆಘಾತಕಾರಿ ಘಟನೆ ಮಂಡ್ಯದ ಹೊಳಲು ಗ್ರಾಮದಲ್ಲಿ ನಡೆದಿದೆ.
ಶಾರಂತ್ (29) ಹಲ್ಲೆಗೊಳಗಾದ ಯುವಕ. ಹೊಳಲು ಗ್ರಾಮದ ಮಾದ ಅಲಿಯಾಸ್ ಮಾದಪ್ಪ ಮತ್ತು ಆತನ ಗ್ಯಾಂಗ್​ ಹಾಡಹಗಲಲ್ಲೇ ನಡು ರಸ್ತೆಯಲ್ಲಿ ಲಾಂಗ್, ಡ್ರಾಗರ್ ಹಿಡಿದು ಅಟ್ಟಹಾಸ ಮೆರೆದಿದ್ದಾರೆ. ಮಾದಪ್ಪ, ಚಿಂಟು, ತರುಣ್, ಸುಶಾಂತ್ ಹಾಗೂ ಚಂದನ್ ಹಲ್ಲೆ ಮಾಡಿದ ಕಿರಾತಕರು.
ಇದನ್ನೂ ಓದಿ:ಲ್ಯಾಪ್​ಟಾಪ್, ಟ್ಯಾಬ್ಲೆಟ್, ಕಂಪ್ಯೂಟರ್ ಆಮದು ಬ್ಯಾನ್; ದೇಶೀಯ ಉತ್ಪಾದನೆ ಉತ್ತೇಜಿಸಲು ಕೇಂದ್ರ ಕ್ರಮ
ಬರ್ತಡೇ‌ ಹಿನ್ನಲೆ ಸ್ನೇಹಿತರೊಂದಿಗೆ ಕೇಕ್ ಕಟ್ ಮಾಡಿ ಶಾರಂತ್​ ಹುಟ್ಟೂರಿಗೆ ಬಂದಿದ್ದ. ಗ್ರಾಮದ ಸರ್ಕಲ್ ಒಂದರಲ್ಲಿ ಸ್ನೇಹಿತರ ಜತೆ ಮಾತನಾಡುತ್ತ ನಿಂತಿದ್ದ. ಈ ವೇಳೆ ಎರಡು ಬೈಕ್​ನಲ್ಲಿ ಮಾದ ಹಾಗೂ ಆತನ ಗ್ಯಾಂಗ್​ ಅಲ್ಲಿಗೆ ಬಂದು ಶಾರಂತ್​ ಜತೆ ಕ್ಯಾತೆ ತೆಗೆದಿದ್ದಾರೆ. ಅಲ್ಲದೆ, ಏಕಾಏಕಿ ಆಯುಧದಿಂದ ಹಲ್ಲೆ ಮಾಡಿದ್ದಾರೆ.
ಲಾಂಗ್ ಬೀಸಿದ್ದರಿಂದ ಶಾರಂತ್​ ಕಣ್ಣಿನ ಉಬ್ಬು, ಬಾಯಿಗೆ ಗಂಭೀರ ಗಾಯವಾಗಿದೆ. ಆದರೆ, ಅದೃಷ್ಟವಶಾತ್ ಪ್ರಾಣಾಪಯದಿಂದ ಪಾರಾಗಿದ್ದಾರೆ. ಗಾಯಾಳು ಶಾರಂತ್​ಗೆ ಮಿಮ್ಸ್​ ವೈದ್ಯರು 16 ಸ್ಟಿಚ್ ಹಾಕಿದ್ದಾರೆ.

ಈ‌ ಹಿಂದೆ ಮಾದ ಅಲಿಯಾಸ್​ ಮಾದಪ್ಪನನ್ನು ಬಾಸ್ ಎಂದು ಕರೆಯುವಂತೆ ಶಾರಂತ್​ಗೆ ತಾಕೀತು ಮಾಡಿದ್ದರಂತೆ. ಆ ವೇಳೆ ಯಾವನ್ನೋ ಅವನು ಬಾಸ್ ಎಂದು ಶಾರಂತ್​ ಟಾಂಗ್ ಕೊಟ್ಟಿದ್ದ. ಅಂದು ಗಲಾಟೆಯು ನಡೆದಿತ್ತು. ಆದರೆ, ಗಲಾಟೆ ತಕ್ಷಣವೇ ತಣ್ಣಗಾಗಿತ್ತು. ಆದರೆ, ಅದೇ ದ್ವೇಷ ಇಟ್ಟುಕೊಂಡು ಶಾರಂತ್ ಮೇಲೆ ಮಾದಪ್ಪ ಅಂಡ್ ಗ್ಯಾಂಗ್​ ನಿನ್ನೆ ದಾಳಿ ಮಾಡಿದೆ.
ಇದನ್ನೂ ಓದಿ:ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತೊಲಗಿಸಿ- ಶಾಮನೂರು ಶಿವಶಂಕರಪ್ಪ ಹೇಳಿಕೆ -ಸಿಎಂ ಸಿದ್ದರಾಮಯ್ಯ ಜನ್ಮ ದಿನಾಚರಣೆ
ಶಾರಂತ್​ ಬರ್ತಡೇ ದಿನವೇ ಕ್ಯಾತೆ ತೆಗೆದ ಮಾದನ ಗ್ಯಾಂಗ್​ ಲಾಂಗ್​ನಿಂದ ಗಂಭೀರವಾಗಿ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ದೂರು ದಾಖಲಾಗಿದ್ದು, ಪುಡಿರೌಡಿಗಳ ಬಂಧನಕ್ಕೆ ಮಂಡ್ಯ ಪೊಲೀಸರು ಬಲೆಬೀಸಿದ್ದಾರೆ.(ದಿಗ್ವಿಜಯ ನ್ಯೂಸ್​)
ತುಮಕೂರಿನಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಎಸ್ಸೆಸ್ಸಲ್ಸಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು

ನಿಗಮ ಮಂಡಳಿ ನೇಮಕ ಸುಸೂತ್ರ; 30:70ರ ಅನುಪಾತದಲ್ಲಿ ಶಾಸಕರು, ಕಾರ್ಯಕರ್ತರಿಗೆ ಹಂಚಿಕೆಗೆ ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 16 =
Remember me
