ಕಲಬುರಗಿ:ನಗರದ ಮುಖ್ಯರಸ್ತೆಯ ಪಬ್ಲಿಕ್​ ಗಾರ್ಡನ್​ ಮುಂಭಾಗ ಹಾಡಹಗಲೇ ಪುಡಿರೌಡಿಗಳು ಅಟ್ಟಹಾಸ ಮೆರೆದಿದ್ದಾರೆ.
ಪಬ್ಲಿಕ್​ ಗಾರ್ಡನ್​ ಮುಂಭಾಗದಲ್ಲಿ ಖಾರದಪುಡಿ ಅಂಬು ಗ್ಯಾಂಗ್​ ಗುರುವಾರ ಹಾಡಹಗಲೇ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಇರಿದು ಭೀಕರವಾಗಿ ಕೊಲೆ ಮಾಡಿದೆ. ವೀರೇಶ ಶರಣಬಸಪ್ಪ ಕಡಗಂಚಿ(20) ಕೊಲೆಯಾದವ.
ಇದನ್ನೂ ಓದಿರಿಆರೋಪಿ ನವೀನ್​ನನ್ನು ಗಲಭೆಕೋರರಿಂದ ಬಚಾವ್​ ಮಾಡಿದ್ದೇ ಅಖಂಡ ಶ್ರೀನಿವಾಸ ಮೂರ್ತಿ!
ಆಳಂದ ರಸ್ತೆಯ ರಾಣೋಸ್​ಪೀರ್​ ದರ್ಗಾ ಪ್ರದೇಶ ನಿವಾಸಿ ವೀರೇಶ ಶರಣಬಸಪ್ಪ ಕಡಗಂಚಿ. ಈತ ಪ್ರತಿಷ್ಠಿತ ಕಾಲೇಜಿನಲ್ಲಿ ಓದುತ್ತಿದ್ದ. ಪುಡಿರೌಡಿಗಳ ಅಟ್ಟಹಾಸಕ್ಕೆ ಸಿಕ್ಕ ವೀರೇಶ, ಗಾರ್ಡನ್​ ಬಳಿಯ ಮುಖ್ಯ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತ ಪ್ರಾಣಬಿಟ್ಟಿದ್ದಾನೆ.
ಈ ಭೀಕರ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಕೆಲವರು ಮರುಗಿದರೆ, ಹಲವರು ವಿಡಿಯೋ ಮಾಡುವಲ್ಲಿ ತಲ್ಲೀನರಾಗಿದ್ದರು. ಹಣಕಾಸಿನ ವಿಚಾರವೇ ಕೊಲೆಗೆ ಕಾರಣ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದರೊಂದಿಗೆ ನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮತ್ತೆ ಶುರುವಾದಂತಾಗಿದೆ.
ಪೊಲೀಸ್​ ಕಮಿಷನರ್​ಗೆ ಡಿಕೆಶಿ ಅವಾಜ್​!

ಮಗನನ್ನು ನೋಡಲು ಹೊರಟ ದಂಪತಿ ದಾರಿಯಲ್ಲೇ ಹೆಣವಾದರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − nine =
Remember me
