ಮಂಗಳೂರು:ಕೊಲೆ ಆರೋಪಿಯನ್ನೇ ಕೊಲೆ ಮಾಡಲು ಯತ್ನಿಸಿ ಗ್ಯಾಂಗ್​ವೊಂದು ವಿಫಲಗೊಂಡಿರುವ ಪ್ರಕರಣ ಕರಾವಳಿಯಲ್ಲಿ ನಡೆದಿದೆ. ಬಿಜೆಪಿ ಕಾರ್ಯಕರ್ತ ದೀಪಕ್​ ಕೊಲೆ ಆರೋಪ ಎದುರಿಸುತ್ತಿರುವ ಪಿಂಕಿ ನವಾಜ್​ ಎಂಬಾತನ ಮೇಲೆ ಇನ್ನೊಂದು ಗ್ಯಾಂಗ್ ದಾಳಿ ನಡೆಸಿದ್ದು, ನವಾಜ್ ಗಾಯಗೊಂಡಿದ್ದಾನೆ.
ಮಂಗಳೂರು ಹೊರವಲಯದ ಸುರತ್ಕಲ್​ನ ಕಾಟಿಪಳ್ಳ ಸೆಕೆಂಡ್ ಬ್ಲಾಕ್ ಬಳಿ ಈ ದಾಳಿ ನಡೆದಿದ್ದು, ಗಂಭೀರ ಗಾಯಗೊಂಡಿರುವ ನವಾಜ್​ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ಬಂದಿದ್ದ ಆರು ಜನರ ತಂಡ ಈ ದಾಳಿ ನಡೆಸಿ ಪರಾರಿಯಾಗಿದ್ದು, ಸುರತ್ಕಲ್ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ಬೈಕ್​ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!
ಗಾಯಗೊಂಡಿರುವ ಕೊಲೆ ಆರೋಪಿ ಪಿಂಕಿ ನವಾಜ್​ ತನ್ನ ಕೊಲೆ ಯತ್ನದ ಬಗ್ಗೆ ಮತ್ತೊಂದು ಗ್ಯಾಂಗ್ ವಿರುದ್ಧ ಆರೋಪ ಮಾಡಿದ್ದಾನೆ. ಶಾಕಿಬ್ ಅಲಿಯಾಸ್​ ಶಾಬು ಎಂಬಾತನ ಗ್ಯಾಂಗ್​ನಿಂದ ಈ ದಾಳಿ ನಡೆದಿದೆ ಎಂದು ನವಾಜ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪಿಂಕಿ ನವಾಜ್​ ಇತ್ತೀಚೆಗೆ ಈ ಗ್ಯಾಂಗ್ ಜೊತೆ ಮನಸ್ತಾಪಗೊಂಡಿದ್ದ ಎನ್ನಲಾಗಿದೆ.
ಸಾಲ ಮರಳಿಸದವಳ ಬಳಿ ಸೆಕ್ಸ್ ಕೇಳಿದ ವೃದ್ಧ! ಒಂದೇ ವರ್ಷದಲ್ಲಿ ಸೂಟ್​ಕೇಸ್​ನಲ್ಲಿ ಹೆಣವಾಗಿ ಸಿಕ್ಕ!

ಆ ‘ಮಹಿಳೆಯರು’ ಹೆದ್ದಾರಿಯಲ್ಲಿ ಲಿಫ್ಟ್ ಕೇಳಿದರು; ಆಮೇಲೆ ಆಗಿದ್ದೇ ಬೇರೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 2 =
Remember me
