ಧಾರವಾಡ:ನಾಲ್ಕೈದು ದಿನಗಳಿಂದ ರೌಡಿಯಂತೆ ಸಾರ್ವಜನಿಕರಿಗೆ ಉಪಟಳ ಕೊಡುತ್ತ, ಅರಣ್ಯ ಇಲಾಖೆ ಸಿಬ್ಬಂದಿಗೂ ಚಳ್ಳೆಹಣ್ಣು ತಿನ್ನಿಸಿ ಓಡಾಡುತ್ತಿದ್ದ ಒಂಟಿ‌ ಕೋತಿಯನ್ನು ಇಂದು(ಶನಿವಾರ) ಸೆರೆ ಹಿಡಿಯಲಾಗಿದೆ.
ಇದನ್ನೂ ಓದಿರಿಕ್ವಾರಂಟೈನ್​ ಕೇಂದ್ರದಲ್ಲಿ ಕಾಂಡೋಮ್ ರಾಶಿ!
ಧಾರವಾಡದ ಮದಿಹಾಳ ಮತ್ತು ಡಿಪೋ ಸರ್ಕಲ್ ಏರಿಯಾದಲ್ಲಿ ಓಡಾಡುತ್ತಿದ್ದ ಒಂಟಿ‌ ಕೋತಿ ನಾಲ್ಕೈದು ದಿನದಿಂದ 20ಕ್ಕೂ ಹೆಚ್ಚು ಜನರನ್ನು ಕಚ್ಚಿ ಗಾಯಗೊಳಿತ್ತು. ಸಾರ್ವಜನಿಕರ ಮೇಲೆ ಏಕಾಏಕಿ ದಾಳಿ ಮಾಡುತ್ತಿದ್ದ ಈ ಮಂಗ ಸ್ಥಳೀಯರ ಪಾಲಿಗೆ ರೌಡಿ ಕೋತಿಯೇ ಆಗಿತ್ತು.
ಇದನ್ನೂ ಓದಿರಿನಾಳೆ ಲಾಕ್​ಡೌನ್​ ಇರಲ್ಲ!
ಈ ಕೋತಿಯನ್ನು ಸೆರೆ ಹಿಡಿಯಲು ಶುಕ್ರವಾರದಿಂದ ನಿರಂತರ ಕಾರ್ಯಾಚರಣೆ ನಡೆಸಲಾಗಿದ್ದು, ಶನಿವಾರ ಬೆಳಗ್ಗೆ ಸಿಕ್ಕಿದೆ. ಈ ನಡುವೆ ಎರಡು ಸಲ ಬಲೆಗೆ ಬಿದ್ದರೂ ಕೋತಿ ಎಸ್ಕೇಪ್​ ಆಗಿತ್ತು. ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ಮುಂದುವರಿಸಿದ ಅರಣ್ಯ ಸಿಬ್ಬಂದಿ ಕೊನೆಗೂ ಕೋತಿಯನ್ನು ಸೆರೆ ಹಿಡಿದರು. ಅದಕ್ಕೆ ಮಂಪರು ಇಂಜೆಕ್ಷನ್ ಕೊಟ್ಟು ಕರೆದೊಯ್ದರು.
https://www.facebook.com/VVani4U/videos/256050678840579/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 10 =
Remember me
