ಮೈಸೂರು:ರಾಜ್ಯಾದ್ಯಂತ ಬಿಜೆಪಿಗೆ ರೌಡಿಗಳು ಸೇರುತ್ತಿರು ಬಗ್ಗೆ ಭಾರಿ ವಿವಾದ ನಡೆಯುತ್ತಿರುವಾಗಲೇ ಇಲ್ಲೊಬ್ಬ ಭೂಪ ‘ನಾನೂ ರೌಡಿ, ನನ್ನನ್ನೂ ಬಿಜೆಪಿಗೆ ಸೇರಿಸಿ’ ಎಂದು ಬೋರ್ಡ್​ ಹಿಡಿದು ನಿಂತಿದ್ದಾನೆ.
ಮೈಸೂರಿನ ನ್ಯಾಯಾಲಯದ ಮುಂದೆ ಇರುವ ಗಾಂಧಿ ಪ್ರತಿಮೆ ಬಳಿ ಈತ ಏಕಾಂಗಿಯಾಗಿ ಪ್ರತಿಭಟನೆ ಮಾಡಿದ್ದಾನೆ. ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದ ಈತ ನಿಜ ಜೀವನದಲ್ಲಿ ರೌಡಿ ಶೀಟರ್​. ಇದೀಗ ಈತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಮಂಜು ಅಲಿಯಾಸ್ ಪಾನಿಪುರಿ ಮಂಜು ಎಂಬಾತ ಮೈಸೂರು ನ್ಯಾಯಾಲಯದ ಎದುರಿನ ಗಾಂಧಿ ಪ್ರತಿಮೆ ಬಳಿ ವಿಶಿಷ್ಟವಾಗಿ ಪ್ರತಿಭಟನೆ ಮಾಡಿದ್ದು ಸದ್ಯಕ್ಕೆ ಪೊಲೀಸರ ಅತಿಥಿ ಆಗಿದ್ದಾನೆ. ಪಾನಿಪುರಿ ಮಂಜನನ್ನು ಕೆಆರ್.ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ರೌಡಿಶೀಟರ್ ಮಂಜು, ಮೈಸೂರಿನ ಗಣೇಶ್ ನಗರ ನಿವಾಸಿ.
ಈತ 2013ರಲ್ಲಿ ಕೊಲೆ ಯತ್ನ ಕೇಸ್‌ನಲ್ಲಿ ಜೈಲು ವಾಸ ಮಾಡಿದ್ದ. ಇದೇ ಸಂದರ್ಭದಲ್ಲಿ ಪಾನಿಪುರಿ ಮಂಜು ಬಗ್ಗೆ ಪೊಲೀಸರು ರೌಡಿ ಶೀಟರ್ ತೆರೆದಿದ್ದರು. ಇದೀಗ ಮಂಜು ಮೇಲೆ ಉದಯಗಿರಿ ಪೊಲೀಸರು ರೌಡಿ ಶೀಟರ್ ತೆರೆದಿದ್ದು ಹೆಚ್ಚಿನ‌ ವಿಚಾರಣೆಗಾಗಿ ಉದಯಗಿರಿ ಪೊಲೀಸರಿಗೆ ಹಸ್ತಾಂತರ ಮಾಡಲಾಗಿದೆ.
ಈ ರೀತಿಯಾಗಿ ಪ್ರತಿಭಟನೆ ಮಾಡಿರುವ ಕಾರಣ ಈ ಮಂಜು ಯಾವುದಾದರೂ ಪಕ್ಷಗಳೊಂದಿಗೆ ಗುರುತಿಸಿಕೊಂಡಿದ್ದಾನಾ? ಅಥವಾ ತಾನೇ ಈ ರೀತಿ ಪ್ರತಿಭಟನೆ ಮಾಡಿದ್ದಾ ಎನ್ನುವ ರೀತಿಯ ಮಾಹಿತಿಯನ್ನು ಈಗ ಪೊಲೀಸರು ಕಲೆ ಹಾಕುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − twelve =
Remember me
