ಬೆಂಗಳೂರು:ನಟೋರಿಯಸ್​ ರೌಡಿಶೀಟರ್ ಸುರೇಶ್​ ಬಾಬು ಅಲಿಯಾಸ್​ ಅಲ್ಯೂಮಿನಿಯಂ ಬಾಬು ಬರ್ಬರ ಹತ್ಯೆಯಾಗಿದ್ದು, ಆತನ ಶವ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಡೆಂಕಣಿಕೋಟೆ ಸಮೀಪದ ಕಾಡಿನಲ್ಲಿ ಪತ್ತೆಯಾಗಿದೆ.
ನಿನ್ನೆ (ಮೇ 20) ರಾತ್ರಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರ ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ. ಅಲ್ಯೂಮಿನಿಯಂ ಬಾಬು ಜಯನಗರ ಪೊಲೀಸ್​ ಠಾಣೆಯ ರೌಡಿಶೀಟರ್ ಆಗಿದ್ದ. ಕೊಲೆ, ಸುಲಿಗೆ, ಬೆದರಿಕೆ ಹಾಗೂ ದರೋಡೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಬಾಬು ಭಾಗಿಯಾಗಿದ್ದ.
ಇದನ್ನೂ ಓದಿ:ಅತ್ತೆ-ಮಾವ ಸುಪರ್ದಿಗೆ ಬಾಲಕ: ತಂದೆ ವಶಕ್ಕೆ ನೀಡಿದ್ದ ಕೌಟುಂಬಿಕ ಕೋರ್ಟ್, ಆದೇಶ ರದ್ದು ಮಾಡಿದ ಹೈಕೋರ್ಟ್
ತಿಲಕ್ ನಗರದ ಜಲ್ಲಿ ವೆಂಕಟೇಶ್ ಕೊಲೆ ಪ್ರಕರಣದ ಆರೋಪಿಯಾಗಿದ್ದ ಅಲ್ಯೂಮಿನಿಯಂ ಬಾಬು, ಇತ್ತೀಚಿಗಷ್ಟೇ ತಮಿಳುನಾಡು ಕಡೆ ವಾಸ್ತವ್ಯ ಬದಲಿಸಿದ್ದ. ಇದೀಗ ಬರ್ಬರವಾಗಿ ಹತ್ಯೆಯಾಗಿದ್ದಾನೆ. ಡೆಂಕಣಿಕೋಟೆ ಸಮೀಪದ ಕಾಡಿನಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಅರೆ ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಹತ್ಯೆ ನಡೆಸಿದ ಬಳಿಕ ಶವವನ್ನು ಕಾಡಿನಲ್ಲಿ ಎಸೆದು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ತಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.(ದಿಗ್ವಿಜಯ ನ್ಯೂಸ್​)
ಖಾಸಗಿ ಫೋಟೋ, ವಿಡಿಯೋಗಳನ್ನು ಹರಿಬಿಟ್ಟವರಿಗೆ ಕಾಂಗ್ರೆಸ್​ ಶಾಸಕಿ ನಯನಾ ಮೋಟಮ್ಮ ತಿರುಗೇಟು!

ಕಾಂಗ್ರೆಸ್​ನವರು ಬೈಯೋದು ಬೇಡ, ಬಿಜೆಪಿಯವರು ಬೊಬ್ಬೆ ಹೊಡೆಯೋದು ಬೇಡ: ಸಿಎಂ ಸಿದ್ದುಗೆ ಪ್ರತಾಪ್ ಸಿಂಹ ಸಲಹೆ​

ಮದುವೆಯ ಬಂಧ ಆಗದಿರಲಿ ಆರ್ಥಿಕ ಬಂಧನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 2 =
Remember me
