ಮೈಸೂರು:ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೆ ಗ್ಯಾಂಗ್​ವಾರ್​ ಶುರುವಾಗಿದ್ದು, ನಡುರಸ್ತೆಯಲ್ಲೇ ರೌಡಿಶೀಟರ್​ ಒಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ನಗರದ ಒಂಟಿಕೊಪ್ಪಲಿನ ನಿವಾಸಿ ಚಂದ್ರಶೇಖರ್ ಅಲಿಯಾಸ್ ಚೆಂದು ಕೊಲೆಯಾದ ವ್ಯಕ್ತಿ. ಈತ ಮಾಜಿ ನಗರ ಪಾಲಿಕೆ ಸದಸ್ಯ ಅವ್ವ ಮಾದೇಶ್ ಆಪ್ತ. ದ್ವಿಚಕ್ರ ವಾಹನದಲ್ಲಿ ಬಂದ 6 ಜನ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಇದನ್ನೂ ಓದಿ:ಬಸ್ಸಿನಲ್ಲಿ ಮಹಿಳೆಯರಿಬ್ಬರ ಮಧ್ಯೆ ಕುಳಿತು ಕಾಮಚೇಷ್ಟೆ: ವಿಡಿಯೋ ಹರಿಬಿಟ್ಟು ಘಟನೆ ವಿವರಿಸಿದ ನಟಿ
ಕೊಲೆಯಾದ ಚಂದ್ರಶೇಖರ್​ ಹುಣಸೂರು ಜೋಡಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಕಳೆದ ಕೆಲ ದಿನಗಳಿಂದಷ್ಟೇ ಪ್ರಕರಣದಲ್ಲಿ ಖುಲಾಸೆಯಾಗಿ ಜೈಲಿನಿಂದ ಹೊರ ಬಂದಿದ್ದ. ಪಡುವಾರಳ್ಳಿಯ ದೇವು ಕೊಲೆಗೆ ಪ್ರತೀಕಾರವಾಗಿ ಚಂದ್ರಶೇಖರ್​ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಬರ್ಬರ ಹತ್ಯೆಯಿಂದಾಗಿ ಒಂಟಿಕೊಪ್ಪಲಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳೀಯರಲ್ಲಿ ಆತಂಕದ ಕಾರ್ಮೋಡ ಕವಿದಿದೆ. ಸ್ಥಳಕ್ಕೆ ವಿವಿ ಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ರಾಜ್ಯದಲ್ಲಿ ಬಿಸಿಗಾಳಿ ಆತಂಕ; ಬಿಸಿಲಿನ ಝಳಕ್ಕೆ ಸುಸ್ತಾದ ಜನ

ಚಿಗುರೊಡೆದ ಏಮ್ಸ್ ಸ್ಥಾಪನೆಯ ಕನಸು- ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಭರವಸೆ

ವಸತಿ ನಿಲಯ ಹೆಚ್ಚಳಕ್ಕಿಲ್ಲ ಆಸಕ್ತಿ, ಅಧಿಕವಿದೆ ವಿದ್ಯಾರ್ಥಿಗಳ ಸಂಖ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 20 =
Remember me
