ತುಮಕೂರು:ಇಲ್ಲೊಬ್ಬನಿಗೆ ಬರ್ತ್​ಡೇ ದಿನವೇ ಬದುಕಿನ ಕೊನೆಯ ದಿನವಾಗಿದೆ. ಏಕೆಂದರೆ ಈ ರೌಡಿಶೀಟರ್​ನನ್ನು ಆತನ ಬರ್ತ್​ಡೇ ದಿನದಂದೇ ಕೊಲೆ ಮಾಡಲಾಗಿದೆ. ತಿಪಟೂರು ತಾಲೂಕಿನ ಹುಚ್ಚನಹಳ್ಳಿ ನಿವಾಸಿ ದಿವಾಕರ್ ಅಲಿಯಾಸ್ ಡಿಚ್ಚಿ ದಿವಾ ಕೊಲೆಯಾದ ರೌಡಿಶೀಟರ್.
ನಿನ್ನೆ ಸ್ನೇಹಿತನ ಮನೆಯಲ್ಲಿ ದಿವಾಕರ್ ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದಾಗ ನಾಲ್ಕೈದು ಜನರು ಒಟ್ಟಾಗಿ ದಾಳಿ ಮಾಡಿದ್ದು, ಕೇಕ್ ಕಟ್​ ಮಾಡುತ್ತಿದ್ದಾಗಲೇ ಮಾರಕಾಸ್ತ್ರಗಳನ್ನು ಮನಸೋಇಚ್ಛೆ ಬೀಸಿ ಹತ್ಯೆ ಮಾಡಲಾಗಿದೆ. ಗಂಭೀರ ಗಾಯಗೊಂಡು ತೀವ್ರ ರಕ್ತಸ್ರಾವವಾಗಿ ಬಿದ್ದಿದ್ದ ದಿವಾಕರ್​ನನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಾವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ.
ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ದಿವಾಕರ್ ಎರಡು ವರ್ಷಗಳ ಹಿಂದೆ ಮೋಹನ್ ಎಂಬಾತನ ಮೇಲೆ ಹಲ್ಲೆ ಮಾಡಿದ್ದ. ಹೊನ್ನವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಮೋಹನ್, ತಿಪಟೂರಿನಲ್ಲಿ ತನ್ನ ಹವಾ ಇಟ್ಟುಕೊಂಡಿದ್ದ. ಹಣಕಾಸಿನ ವಿಚಾರವಾಗಿ ದಿವಾಕರ್ ದಾಳಿ ನಡೆಸಿದ್ದು, ಮೋಹನ್ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದ. ಈ ಪ್ರಕರಣದ ಸಂಬಂಧ ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ದಿವಾಕರ್ ಮೇಲೆ ಕೊಲೆಯತ್ನ ಪ್ರಕರಣ ದಾಖಲಾಗಿತ್ತು. ಇದೇ ಜಿದ್ದಿಗೆ ದಿವಾಕರ್ ಕೊಲೆಗೆ ಸ್ಕೆಚ್ ಹಾಕಿದ್ದ ಮೋಹನ್ ಟೀಮ್, ಎರಡು ವರ್ಷಗಳಿಂದ ಹೊಂಚುಹಾಕಿಕೊಂಡಿದ್ದು, ನಿನ್ನೆ ಕೊಲೆ ಮಾಡುವಲ್ಲಿ ಯಶಸ್ವಿಯಾಗಿದೆ. ತಿಪಟೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ದಿವಾಕರ್ ವಿರುದ್ಧ ಹೊನ್ನವಳ್ಳಿ, ತಿಪಟೂರು ಟೌನ್, ಎನ್​ಇಪಿಎಸ್ ಜಯನಗರ, ದಾಬಸ್​ಪೇಟೆ, ಬೆಂಗಳೂರು ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಕೊಲೆ, ಕೊಲೆ ಯತ್ನ, ಸುಲಿಗೆ ಪ್ರಕರಣಗಳು ದಾಖಲಾಗಿದ್ದವು. ದಿವಾಕರ್​ನನ್ನು ಹಳೇ ವೈಷಮ್ಯದ ಹಿನ್ನೆಲೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳಿಗೆ ತಿಪಟೂರು ಗ್ರಾಮಾಂತರ ಪೊಲೀಸರು ಠಾಣೆ ಬಲೆ ಬೀಸಿದ್ದಾರೆ.
ಕಂಚುಗಲ್ ಬಂಡೇಮಠ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ಎಷ್ಟು ಪುಟಗಳ ಡೆತ್​ನೋಟ್​, ಅದರಲ್ಲಿರುವುದೇನು?
‘ಕಾಂತಾರ’ಕ್ಕೀಗ ಕಾನೂನುಕ್ರಮದ ‘ಕಿರಿಕ್​’: ಯಶಸ್ಸಿನ ಓಟಕ್ಕೆ ಬ್ರೇಕ್​ ಹಾಕುವ ಯತ್ನವೋ?
ಜಾಗಿಂಗ್ ಮಾಡುತ್ತಲೇ ಕುಸಿದು ಬಿದ್ದ ಏರ್​ಫೋರ್ಸ್ ಅಧಿಕಾರಿ ಸಾವು!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × 1 =
Remember me
