ಬೆಂಗಳೂರು:ಹಲವು ದಿನಗಳ ಕುತೂಹಲದ ನಿರೀಕ್ಷೆಯ ನಂತರ ಮುನಿರತ್ನ ಅವರಿಗೆ ಕೊನೆಗೂ ರಾಜರಾಜೇಶ್ವರಿ ನಗರ ಉಪಚುನಾವಣೆಯ ಬಿಜೆಪಿ ಟಿಕೆಟ್ ಘೋಷಣೆಯಾಗಿದೆ.
ಅವರ ವಿರುದ್ಧ ಬಿಜೆಪಿಯವರೇ ಆದ ತುಳಸಿ ಮುನಿರಾಜು ಅವರು ಕಳೆದ ಚುನಾವಣೆಯ ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ಮಧ್ಯಾಹ್ನ ವಜಾ ಮಾಡಿದಾಗಲೇ ಮುನಿರತ್ನ ಅವರಿಗೆ ಟಿಕೆಟ್ ಖಚಿತ ಎಂಬುದು ದೃಢಪಟ್ಟಿತ್ತು. ಇದೀಗ ಸಂಜೆ ಬಿಜೆಪಿಯ ಕೇಂದ್ರ ಕಚೇರಿ ಹೊರಡಿಸಿರುವ ಪತ್ರಿಕಾ ಹೇಳಿಕೆಯಲ್ಲಿ ಮುನಿರತ್ನ ಅವರಿಗೆ ಟಿಕೆಟ್ ನೀಡಲಾಗಿದೆ.ಇದನ್ನೂ ಓದಿ:‘ನಕಲಿ ನಕಲಿ ಎಂಬುದನ್ನು ಕೇಳಿ ಕೇಳಿ ಬಹಳ ನೊಂದುಕೊಂಡಿದ್ದೆ- ಈಗ ಕಳಂಕ ಮುಕ್ತ ನಾನು’!
ಉತ್ತರ ಪ್ರದೇಶದ ಆರು, ನಾಗಾಲ್ಯಾಂಡ್‌ನ ಒಂದು ಮತ್ತು ಕರ್ನಾಟಕದ ಎರಡು ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಒಟ್ಟಿಗೇ ಘೋಷಿಸಲಾಗಿದ್ದು, ಅದರಲ್ಲಿ ರಾಜರಾಜೇಶ್ವರಿ ನಗರ ಮತ್ತು ಶಿರಾ ಅಭ್ಯರ್ಥಿಗಳ ಹೆಸರುಗಳಿವೆ. ಶಿರಾ ಉಪಚುನಾವಣೆಗೆ ಡಾ. ರಾಜೇಶ್‌ಗೌಡ ಅಭ್ಯರ್ಥಿಯಾಗಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
