ಬೆಂಗಳೂರು:ಬಿಜೆಪಿ ಟಿಕೆಟ್​ ಆಕಾಂಕ್ಷಿ ಮುನಿರತ್ನರನ್ನು ಸೋಲಿಸುವುದೇ ನನ್ನ ಗುರಿ ಎಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಜೆಡಿಎಸ್​ ಮುಖಂಡ ಹಾಗೂ ದಿವಂಗತ ಡಿ.ಕೆ. ರವಿ ಅವರ ಮಾವ ಹನುಮಂತರಾಯಪ್ಪ ತಿಳಿಸಿದರು.
ಗುರುವಾರ ದಿಗ್ವಿಜಯ ನ್ಯೂಸ್​ನೊಂದಿಗೆ ಮಾತನಾಡಿದ ಅವರು ಮುನಿರತ್ನರನ್ನು ಸೋಲಿಸುವುದು ನನ್ನ‌ ಗುರಿಯಾಗಿದೆ. ಹೀಗಾಗಿ ಕಾಂಗ್ರೆಸ್​ ಮತ್ತು ಜೆಡಿಎಸ್ ಒಮ್ಮತದ ಅಭ್ಯರ್ಥಿ ಹಾಕಬೇಕೆಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಮುಖಂಡರಿಗೆ ಹೇಳಿದ್ದೇನೆಂದರು.
ಇದನ್ನೂ ಓದಿ:VIDEO| ಕೆಎಸ್​ಆರ್​ಟಿಸಿ​ ಬಸ್​ಗೆ ಬೇಕಂತಲೇ ದಾರಿಬಿಡದೆ ಕುಚೇಷ್ಟೆ ಮಾಡಿದ ಬೈಕ್​ ಸವಾರನಿಗೆ ಕಾದಿತ್ತು​ ಶಾಕ್​!
ನಾನು ಜೆಡಿಎಸ್​ನಲ್ಲಿದ್ದೇನೆ. ಆದರೆ, ಸ್ಪರ್ಧೆ ಮಾಡುವಂತೆ ಕಾಂಗ್ರೆಸ್​ನಿಂದ ಆಹ್ವಾನ ಬಂದಿದೆ. ಆದರೆ ಸ್ಪರ್ಧೆ ಮಾಡುವುದಿಲ್ಲ. ಮಗಳು ಕುಸುಮಾ ಸ್ಪರ್ಧೆ ಬಗ್ಗೆ ಮನೆಯಲ್ಲಿ ಚರ್ಚೆ ನಡೆದಿದೆ. ಈ ಬಗ್ಗೆ ಆಹ್ವಾನ ಬಂದಿದೆ. ಆದರೆ ನನ್ನ ಮಗಳು ತಿರ್ಮಾನ ಕೈಗೊಳ್ಳಬೇಕಿದೆ. ಅಸಿಸ್ಟೆಂಟ್ ‌ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾಳೆ. ಮಗಳ ಮುಂದಿನ ಭವಿಷ್ಯ ಮುಖ್ಯವಾಗಿದ್ದು, ಸ್ಪರ್ಧೆಗೆ ಒಪ್ಪಿದರೆ ನಾನು ಬೆಂಬಲ ನೀಡುತ್ತೇನೆಂದು ತಿಳಿಸಿದರು.
ಇದಕ್ಕೂ ಮುನ್ನ ಹನುಮಂತರಾಯಪ್ಪ ತಮ್ಮ ಮಗಳು ಕುಸುಮಾ ಜತೆ ವಿಜಯನಗರದಲ್ಲಿರುವ ಆದಿ ಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿದರು. ತಂದೆ ಮತ್ತು ಮಗಳು ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆದುಕೊಂಡರು. ಭೇಟಿಯ ವಿಚಾರವೀಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ.(ದಿಗ್ವಿಜಯ ನ್ಯೂಸ್​)
ಉಪಚುನಾವಣೆ ಘೋಷಣೆ ಬೆನ್ನಲ್ಲೇ ಆದಿ ಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಡಿ.ಕೆ. ರವಿ ಪತ್ನಿ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + fourteen =
Remember me
