ಬೆಂಗಳೂರು:ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರಗಳು ಉಪಚುನಾವಣೆಯ ದಿನಾಂಕ ಪ್ರಕಟವಾದ ಬೆನ್ನಲ್ಲೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಎಲ್ಲ ಪಕ್ಷಗಳ ನಾಯಕರು ತೊಡಗಿಕೊಂಡಿದ್ದಾರೆ.
ಆಡಳಿತಾ ರೂಢ ಬಿಜೆಪಿ ಹಾಗೂ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್​ ಪಾಲಿಗೆ ಉಪಚುನಾವಣೆ ಮುಂದಿನ ರಾಜಕೀಯದ ಭವಿಷ್ಯದ ಪರೀಕ್ಷೆಯಾಗಿದ್ದು, ಮೂರು ಪಕ್ಷಗಳು ಚುನಾವಣೆ ಗೆಲುವಿಗೆ ತಂತ್ರಗಳನ್ನು ಎಣೆಯುತ್ತಿದ್ದಾರೆ.​ರಾಜ್ಯ ಬಿಜೆಪಿ ಕಮಿಟಿಯು ಆರ್​ಆರ್​ ನಗರ ವಿಧಾನಸಭಾ ಕ್ಷೇತ್ರಕ್ಕೆ ಮುನಿರತ್ನ ಮತ್ತು ಮುನಿರಾಜುಗೌಡ ಹೆಸರು ಶಿಫಾರಸು ಮಾಡಿದೆ. ಆದರೆ, ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರ ಪತನದ ಭಾಗವಾಗಿದ್ದ ಮುನಿರತ್ನಗೆ ಬಿಜೆಪಿ ಟಿಕೆಟ್ ಬಹುತೇಕ ಖಚಿತವಾಗಿದೆ.
ಇದನ್ನೂ ಓದಿ:ಕರೊನಾ ನಿಯಮ, ನಿಷೇಧಾಜ್ಞೆ ಉಲ್ಲಂಘಿಸಿ ದೌಡು- ಎಫ್​ಐಆರ್​ ಸುಳಿಗೆ ರಾಹುಲ್​, ಪ್ರಿಯಾಂಕಾ
ಇನ್ನು ಕಾಂಗ್ರೆಸ್​ಗೆ ಶಕ್ತಿಯುವ ಅಭ್ಯರ್ಥಿಯ ಕೊರತೆ ಇದೆ. ಇತ್ತ ಡಿ.ಕೆ. ರವಿ ಮಾವ ಹಾಗೂ ಜೆಡಿಎಸ್ ಮುಖಂಡ ಹನುಮಂತರಾಯಪ್ಪ ಕಾಂಗ್ರೆಸ್ ಮತ್ತು ಜೆಡಿಎಸ್​ ಎರಡು ಪಕ್ಷದ ನಾಯಕರ ಜತೆ ಮಾತುಕತೆ ನಡೆಸುತ್ತಿದ್ದು, ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡುವಂತೆ ಸಲಹೆ ನೀಡಿದ್ದಾರೆ.
ಡಿ.ಕೆ. ರವಿ ಪತ್ನಿ ಹಾಗೂ ಹನುಮಂತರಾಯಪ್ಪ ಮಗಳು ಕುಸುಮಾರನ್ನು ಕಾಂಗ್ರೆಸ್​ ಅಭ್ಯರ್ಥಿ ಮಾಡುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ಗೆ ಒಲವಿದೆ ಎನ್ನಲಾಗಿದ್ದು, ಮುನಿರತ್ನ ವಿರುದ್ಧ ಮಹಿಳೆಯನ್ನು ಕಣಕ್ಕೆ ಇಳಿಸುವ ತಂತ್ರ ಎಣೆಯುತ್ತಿದ್ದಾರೆಂಬ ವಿಚಾರ ತಿಳಿದುಬಂದಿದೆ.
ಬಿಜೆಪಿಯಿಂದ ಮುನಿರತ್ನ ಅಭ್ಯರ್ಥಿಯಾದ್ರೆ, ಕಣಕ್ಕೆ ಇಳಿಯಲು ಮಾಗಡಿ ಬಾಲಕೃಷ್ಣ ಹಿಂದೇಟು ಹಾಕಿದ್ದಾರೆ. ಇತ್ತ ರಕ್ಷಾ ರಾಮಯ್ಯ ಪರ ಪರಮೇಶ್ವರ್ ಬ್ಯಾಟ್​ ಬೀಸಿದ್ದು, ಮುನಿರತ್ನ ವಿರುದ್ಧ ಸ್ಪರ್ಧೆ ಮಾಡಲು ಬಹುತೇಕ ಕೈ ಆಕಾಂಕ್ಷಿಗಳು ಹಿಂದೇಟು ಹಾಕುತ್ತಿದ್ದಾರೆ. ಮುನಿರತ್ನ ಆದ್ರೆ ಹಣದ ತೊಂದರೆ ಆಗಲಿದೆ ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಹೇಳಿದ್ದಾರೆನ್ನಲಾಗಿದೆ.(ದಿಗ್ವಿಜಯ ನ್ಯೂಸ್​)
ಟಿಕ್​ಟಾಕ್​ ಸ್ಟಾರ್​ ಲೈವ್​ ಶೋ ನಡುವೆಯೇ ಮನೆಗೆ ನುಗ್ಗಿದ ಮಾಜಿ ಪತಿಯಿಂದ ನಡೆಯಿತು ಭೀಕರ ಕೃತ್ಯ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 8 =
Remember me
